ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿವು; ಮ್ಯಾಚ್‌ ನೋಡಲು ಬಂದವರು ಮಿಸ್‌ ಮಾಡದೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿವು; ಮ್ಯಾಚ್‌ ನೋಡಲು ಬಂದವರು ಮಿಸ್‌ ಮಾಡದೆ ನೋಡಿ

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿವು; ಮ್ಯಾಚ್‌ ನೋಡಲು ಬಂದವರು ಮಿಸ್‌ ಮಾಡದೆ ನೋಡಿ

  • ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯುತ್ತಿದೆ. ಸಂಜೆ 7.30ಕ್ಕೆ ನಡೆಯುವ ಮ್ಯಾಚ್‌ ವೀಕ್ಷಣೆಗೆ ನೀವು ಬೆಂಗಳೂರಿಗೆ ಬಂದಿದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಇರುವ ಈ ಪ್ರೇಕ್ಷಣೀಯ ಸ್ಥಳಕ್ಕೂ ವಿಸಿಟ್‌ ಮಾಡಿ.

ಐಪಿಎಲ್‌ ಮ್ಯಾಚ್‌ ಬೆಂಗಳೂರಿನಲ್ಲಿ ನಡೆಯುವ ದಿನ ರಾಜ್ಯ, ದೇಶದ ವಿವಿಧ ಭಾಗದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಆರ್‌ಸಿಬಿ ಮ್ಯಾಚ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದರೆ ವಿಶೇಷ ಕ್ರೇಜ್‌ ಇರುತ್ತದೆ. ನೀವು ಇವತ್ತು (ಮೇ 18) ಆರ್‌ಸಿಬಿ-ಸಿಎಸ್‌ಕೆ ನಡುವೆ ನಡೆಯುವ ಮ್ಯಾಚ್‌ ನೋಡಲು ಬೆಂಗಳೂರಿಗೆ ಬಂದಿದ್ರೆ ಸುತ್ತಲಿನ ಈ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿ ಬನ್ನಿ. ನಾಳೆ ಹೇಗೂ ಭಾನುವಾರ ಬೆಂಗಳೂರು ನೋಡಿಕೊಂಡೆ ಊರಿಗೆ ಹೋಗಿ. 
icon

(1 / 9)

ಲಾಲ್‌ಬಾಗ್‌ ಬಟಾನಿಕಲ್‌ ಗಾರ್ಡನ್‌: ಕಬ್ಬನ್‌ಪಾರ್ಕ್‌ನಷ್ಟೇ ಬೆಂಗಳೂರಿನಲ್ಲಿರುವ ಇನ್ನೊಂದು ಪ್ರಸಿದ್ಧ ಸ್ಥಳ ಲಾಲ್‌ಬಾಗ್‌. ಇದು ಕೂಡ ಚಿನ್ನಸ್ವಾಮಿ ಸ್ಟೇಡಿಯಂನಿಂದ 4 ಕಿಲೋಮೀಟರ್‌ ದೂರದಲ್ಲಿದೆ. ಅಪರೂಪದ ಸಸ್ಯ ಸಂಕುಲಗಳನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು. ಇದು ಸಂಜೆ 7ರವರೆಗೆ ತೆರೆದಿರುತ್ತದೆ.
icon

(2 / 9)

ಬೆಂಗಳೂರು ಪ್ಯಾಲೆಸ್‌: ಬೆಂಗಳೂರಿನ ಕೇಂದ್ರಬಿಂದುವಾದ ಬೆಂಗಳೂರು ಪ್ಯಾಲೇಸ್‌ ಕೂಡ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹತ್ತಿರದಲ್ಲೇ ಇದೆ. ಇದೊಂದು ಸುಂದರ ಐತಿಹಾಸಿಕ ತಾಣ. ರಾಜಮನೆತನದ ವೈಭವವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಭೇಟಿ ನೀಡಬೇಕು. ಇಲ್ಲಿಗೆ ಪ್ರವೇಶ ಶುಲ್ಕವಿದ್ದು ಸಂಜೆ 5.30ರವರೆಗೆ ತೆರೆದಿರುತ್ತದೆ.
icon

(3 / 9)

ಹಲಸೂರು ಕೆರೆ: ಬೆಂಗಳೂರಿನ ಪ್ರಸಿದ್ಧ ಸ್ಥಳಗಳಲ್ಲಿ ಹಲಸೂರು ಕೆರೆ ಕೂಡ ಒಂದು. ಈ ಪ್ರಶಾಂತ ಸರೋವರ ನಗರದ ಹೃದಯ ಭಾಗದಲ್ಲಿದೆ. ಇದು ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣವಾಗಿದೆ. ಇಲ್ಲಿ ಸೂರ್ಯಾಸ್ತದ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಅಂದ. ಇಲ್ಲಿಗೆ ಉಚಿತ ಪ್ರವೇಶವಿದೆ. 
icon

(4 / 9)

ಜವಹರಲಾಲ್‌ ನೆಹರೂ ಪ್ಲಾನಿಟೋರಿಯಂ: ಬ್ರಹ್ಮಾಂಡದ ರಹಸ್ಯವನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಜವಹರಲಾಲ್‌ ನೆಹರೂ ಪ್ಲಾನಿಟೋರಿಯಂಗೆ ತಪ್ಪದೇ ಭೇಟಿ ನೀಡಬೇಕು. ಇದು ಚಿನ್ನಸ್ವಾಮಿ ಸ್ಟೇಡಿಯಂಗೆ ಸಮೀಪದಲ್ಲೇ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. 
icon

(5 / 9)

ಕರ್ಮಷಿಯಲ್‌ ಸ್ಟ್ರೀಟ್‌: ನೀವು ಶಾಪಿಂಗ್‌ ಪ್ರಿಯರಾಗಿದ್ದರೆ ಕರ್ಮಷಿಯಲ್‌ ಸ್ಟ್ರೀಟ್‌ಗೆ ಭೇಟಿ ನೀಡಲೇಬೇಕು. ಇದು ಬೆಂಗಳೂರಿನ ಫೇಮಸ್‌ ಶಾಪಿಂಗ್‌ ಸ್ಟ್ರೀಟ್‌. ಇಲ್ಲಿ ನಿಮಗೆ 100 ರೂಪಾಯಿ 1 ಲಕ್ಷದವರೆಗೂ ಶಾಪಿಂಗ್‌ ಮಾಡಬಹುದು. ಇದು ಚಿನ್ನಸ್ವಾಮಿ ಸ್ಟೇಡಿಯಂಗೆ ಸಮೀಪದಲ್ಲೇ ಇರುವ ಇನ್ನೊಂದು ಪ್ರಸಿದ್ಧ ತಾಣವಾಗಿದೆ.  
icon

(6 / 9)

ವಿಧಾನಸೌಧ: ಬೆಂಗಳೂರಿಗೆ ಬಂದೋರು ವಿಧಾನಸೌಧ ನೋಡಿಲ್ಲ ಅಂದ್ರೆ ಹೇಗೆ ಹೇಳಿ. ಚಿನ್ನಸ್ವಾಮಿ ಕ್ರೀಡಾಂಗಣದಿಂದ 3 ಕಿಲೋಮೀಟರ್‌ ದೂರದಲ್ಲಿದೆ ವಿಧಾನಸೌಧ. 
icon

(7 / 9)

ಕಬ್ಬನ್‌ಪಾರ್ಕ್‌: ಚಿನ್ನಸ್ವಾಮಿ ಸ್ಟೇಡಿಯಂಗೆ ಹತ್ತಿರದಲ್ಲೇ ಇರುವ ಬೆಂಗಳೂರಿನ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳ ಕಬ್ಬನ್‌ಪಾರ್ಕ್‌. ಇದು ಸ್ಟೇಡಿಯಂನಿಂದ 2ಕಿಲೋಮೀಟರ್‌ ದೂರದಲ್ಲಿದೆ. ಬೆಂಗಳೂರಿನ ಹೃದಯಭಾಗದಲ್ಲೇ ಇರುವ ಕಬ್ಬನ್‌ಪಾರ್ಕ್‌ ಒಂದು ದಿನದ ಪಿಕ್ನಿಕ್‌ಗೆ ಹೇಳಿ ಮಾಡಿಸಿದ ಜಾಗ.
icon

(8 / 9)

ಸ್ಯಾಂಕಿ ಕೆರೆ: ನೀವು ಪರಿಸರ ಪ್ರೇಮಿಯಾಗಿದ್ದು ಒಂದೊಳ್ಳೆ ಜಾಗದಲ್ಲಿ ಟೈಮ್‌ಸ್ಪೆಂಡ್‌ ಮಾಡಬೇಕು ಅಂತಿದ್ರೆ ಸ್ಯಾಂಕಿ ಕೆರೆ ಹೇಳಿ ಮಾಡಿಸಿದ್ದು. ಇದು ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಿಂದ 3ಕಿಲೋಮೀಟರ್‌ ದೂರದಲ್ಲಿದೆ. 
icon

(9 / 9)

ಇತರ ಗ್ಯಾಲರಿಗಳು