ಕನ್ನಡ ಸುದ್ದಿ  /  Photo Gallery  /  Bengaluru News Fire Alert Very High Forest Fire Risk Likely To Occur Over Forest Areas Nr Dandeli Bhadravathi Kadur Uks

Forest Fire Alert: ದಾಂಡೇಲಿ, ಭದ್ರಾವತಿ, ಕಡೂರು ಸಮೀಪದ ಅರಣ್ಯಗಳಲ್ಲಿ 7 ದಿನದೊಳಗೆ ಭಾರಿ ಕಾಡ್ಗಿಚ್ಚು ಅನಾಹುತ ಸಾಧ್ಯತೆ, ಎಚ್ಚರಿಕೆ ಘೋಷಣೆ

Forest Fire Alert: ಕರ್ನಾಟಕದ ದಾಂಡೇಲಿ, ಭದ್ರಾವತಿ, ಕಡೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಮುಂದಿನ 7 ದಿನಗಳ ಒಳಗೆ ಭಾರಿ ಕಾಡ್ಗಿಚ್ಚು ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ವಿವರಗಳಿಗೆ ಈ ಸಚಿತ್ರ ವರದಿ ಗಮನಿಸಿ.

ಕಾಡ್ಗಿಚ್ಚು ಮುನ್ಸೂಚನೆ: ಫಾರೆಸ್ಟ್‌ ಸರ್ವೇ ಆಫ್ ಇಂಡಿಯಾ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ ಏಳು ದಿನಗಳ ಅವಧಿಯಲ್ಲಿ ಕರ್ನಾಟಕದ ಕೆಲವು ಕಡೆಗಳಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಸಂಭವಿಸಲಿದೆ. ಇದು ಮಧ್ಯಮ ತೀವ್ರತೆ ಹೊಂದಿರಬಹುದು ಎಂದು ಕರ್ನಾಟಕ ಸರ್ಕಾರ ಕಾಡ್ಚಿಚ್ಚು ಮುನ್ಸೂಚನೆಯನ್ನು ಗುರುವಾರ (ಮಾರ್ಚ್ 21) ಮಧ್ಯಾಹ್ನ ನಂತರ 2.30ಕ್ಕೆ ಪ್ರಕಟಿಸಿದೆ. (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)
icon

(1 / 7)

ಕಾಡ್ಗಿಚ್ಚು ಮುನ್ಸೂಚನೆ: ಫಾರೆಸ್ಟ್‌ ಸರ್ವೇ ಆಫ್ ಇಂಡಿಯಾ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ ಏಳು ದಿನಗಳ ಅವಧಿಯಲ್ಲಿ ಕರ್ನಾಟಕದ ಕೆಲವು ಕಡೆಗಳಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಸಂಭವಿಸಲಿದೆ. ಇದು ಮಧ್ಯಮ ತೀವ್ರತೆ ಹೊಂದಿರಬಹುದು ಎಂದು ಕರ್ನಾಟಕ ಸರ್ಕಾರ ಕಾಡ್ಚಿಚ್ಚು ಮುನ್ಸೂಚನೆಯನ್ನು ಗುರುವಾರ (ಮಾರ್ಚ್ 21) ಮಧ್ಯಾಹ್ನ ನಂತರ 2.30ಕ್ಕೆ ಪ್ರಕಟಿಸಿದೆ. (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)(KarnatakaSNDMC / Canva)

ಈ ಕಾಡ್ಗಿಚ್ಚು ಮುನ್ಸೂಚನೆ ಪ್ರಕಾರ, ಯಲ್ಲಾಪುರ ಸಮೀಪದ ಅಂಬಿಕಾನಗರ, ದಾಂಡೇಲಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸು ಸಾಧ್ಯತೆ ದಟ್ಟವಾಗಿದೆ.  (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)
icon

(2 / 7)

ಈ ಕಾಡ್ಗಿಚ್ಚು ಮುನ್ಸೂಚನೆ ಪ್ರಕಾರ, ಯಲ್ಲಾಪುರ ಸಮೀಪದ ಅಂಬಿಕಾನಗರ, ದಾಂಡೇಲಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸು ಸಾಧ್ಯತೆ ದಟ್ಟವಾಗಿದೆ.  (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)(KarnatakaSNDMC / Canva)

ಅದೇ ರೀತಿ ಭದ್ರಾವತಿ, ತರೀಕೆರೆ, ಚನ್ನಗಿರಿ ನಡುವೆ ವ್ಯಾಪಿಸಿರುವ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಇದಲ್ಲದೆ, ಕಡೂರು ಸಮೀಪದ ಪ್ರದೇಶದಲ್ಲಿ ಕೂಡ ಕಾಳ್ಗಿಚ್ಚು ಕಾಡಬಹುದು. (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)
icon

(3 / 7)

ಅದೇ ರೀತಿ ಭದ್ರಾವತಿ, ತರೀಕೆರೆ, ಚನ್ನಗಿರಿ ನಡುವೆ ವ್ಯಾಪಿಸಿರುವ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಇದಲ್ಲದೆ, ಕಡೂರು ಸಮೀಪದ ಪ್ರದೇಶದಲ್ಲಿ ಕೂಡ ಕಾಳ್ಗಿಚ್ಚು ಕಾಡಬಹುದು. (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)(KarnatakaSNDMC / Canva)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(4 / 7)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)

ಫಾರೆಸ್ಟ್ ಸರ್ವೇ ಆಫ್ ಇಂಡಿಯಾದ ಮುನ್ಸೂಚನೆ ಆಧರಿಸಿ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕಾಡ್ಗಿಚ್ಚು ಮುನ್ನೆಚ್ಚರಿಕೆಯ ಅವಧಿ ಮಾರ್ಚ್ 28 ರ ತನಕದ ಅವಧಿಗೆ ಸೀಮಿತ.
icon

(5 / 7)

ಫಾರೆಸ್ಟ್ ಸರ್ವೇ ಆಫ್ ಇಂಡಿಯಾದ ಮುನ್ಸೂಚನೆ ಆಧರಿಸಿ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕಾಡ್ಗಿಚ್ಚು ಮುನ್ನೆಚ್ಚರಿಕೆಯ ಅವಧಿ ಮಾರ್ಚ್ 28 ರ ತನಕದ ಅವಧಿಗೆ ಸೀಮಿತ.

ಕಾಡ್ಗಿಚ್ಚು ಸಂಭವಿಸಬಹುದಾದ ಎಚ್ಚರಿಕೆ ಸಿಕ್ಕಿದ ಸಂದರ್ಭದಲ್ಲಿ ಮಾಡಬೇಕಾದ ಅಂಶಗಳಿವು - ಕಟ್ಟಡಗಳ ಕಿಟಕಿ, ವೆಂಟಿಲೇಟರ್ ಮತ್ತು ಇತರೆ ತೆರೆದ ಪ್ರದೇಶಗಳನ್ನು ಸಂಪೂರ್ಣವಾಗಿ ಮುಚ್ಚಿಬಿಡಬೇಕು. ಪ್ರಾಣಿಗಳನ್ನು ಮತ್ತು ಸರಕು ಸರಂಜಾಮುಗಳನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಬೇಕು. ಚಾರಣಕ್ಕೆ ಅರಣ್ಯ, ಬೆಟ್ಟ ಪ್ರದೇಶಕ್ಕೆ ಹೋಗಿ ವಾಪಸ್ ಬರುವಾಗ ಅಲ್ಲಿ ಬೇಗನೆ ಕಿಚ್ಚು ಹೊತ್ತಿಕೊಳ್ಳಬಹುದಾದ ವಸ್ತುಗಳನ್ನು ಬಿಟ್ಟುಬರಬೇಡಿ.  (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)
icon

(6 / 7)

ಕಾಡ್ಗಿಚ್ಚು ಸಂಭವಿಸಬಹುದಾದ ಎಚ್ಚರಿಕೆ ಸಿಕ್ಕಿದ ಸಂದರ್ಭದಲ್ಲಿ ಮಾಡಬೇಕಾದ ಅಂಶಗಳಿವು - ಕಟ್ಟಡಗಳ ಕಿಟಕಿ, ವೆಂಟಿಲೇಟರ್ ಮತ್ತು ಇತರೆ ತೆರೆದ ಪ್ರದೇಶಗಳನ್ನು ಸಂಪೂರ್ಣವಾಗಿ ಮುಚ್ಚಿಬಿಡಬೇಕು. ಪ್ರಾಣಿಗಳನ್ನು ಮತ್ತು ಸರಕು ಸರಂಜಾಮುಗಳನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಬೇಕು. ಚಾರಣಕ್ಕೆ ಅರಣ್ಯ, ಬೆಟ್ಟ ಪ್ರದೇಶಕ್ಕೆ ಹೋಗಿ ವಾಪಸ್ ಬರುವಾಗ ಅಲ್ಲಿ ಬೇಗನೆ ಕಿಚ್ಚು ಹೊತ್ತಿಕೊಳ್ಳಬಹುದಾದ ವಸ್ತುಗಳನ್ನು ಬಿಟ್ಟುಬರಬೇಡಿ.  (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)(KarnatakaSNDMC / Canva)

ಕಾಡ್ಗಿಚ್ಚು ತಡೆಯುವುದಕ್ಕಾಗಿ ಗಮನಿಸಬೇಕಾದ ಅಂಶಗಳು, ಚಾರಣ, ಸಾಹಸ ಯಾತ್ರೆಗೆಂದು ಅರಣ್ಯ ಪ್ರದೇಶಕ್ಕೆ ಹೋದಾಗ ಅಲ್ಲಿ ಒಣಹುಲ್ಲು, ಗಿಡಮರಗಳಿರುವಲ್ಲಿ ಧೂಮಪಾನ ಮಾಡಬಾರದು. ಅನಿರೀಕ್ಷಿತವಾಗಿ ಕಿಚ್ಚು ಹೊತ್ತಿಕೊಂಡಲ್ಲಿ ಗೊಂದಲಕ್ಕೀಡಾಗದೇ ಶಾಂತ ಚಿತ್ತರಾಗಿ ಅದನ್ನು ನಂದಿಸಲು ಪ್ರಯತ್ನಿಸಬೇಕು. ಆದರೆ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿರುವಾಗ ಕಾಡಿನೊಳಕ್ಕೆ ಪ್ರವೇಶಿಸುವ ಸಾಹಸ ಮಾಡಬಾರದು.  (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)
icon

(7 / 7)

ಕಾಡ್ಗಿಚ್ಚು ತಡೆಯುವುದಕ್ಕಾಗಿ ಗಮನಿಸಬೇಕಾದ ಅಂಶಗಳು, ಚಾರಣ, ಸಾಹಸ ಯಾತ್ರೆಗೆಂದು ಅರಣ್ಯ ಪ್ರದೇಶಕ್ಕೆ ಹೋದಾಗ ಅಲ್ಲಿ ಒಣಹುಲ್ಲು, ಗಿಡಮರಗಳಿರುವಲ್ಲಿ ಧೂಮಪಾನ ಮಾಡಬಾರದು. ಅನಿರೀಕ್ಷಿತವಾಗಿ ಕಿಚ್ಚು ಹೊತ್ತಿಕೊಂಡಲ್ಲಿ ಗೊಂದಲಕ್ಕೀಡಾಗದೇ ಶಾಂತ ಚಿತ್ತರಾಗಿ ಅದನ್ನು ನಂದಿಸಲು ಪ್ರಯತ್ನಿಸಬೇಕು. ಆದರೆ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿರುವಾಗ ಕಾಡಿನೊಳಕ್ಕೆ ಪ್ರವೇಶಿಸುವ ಸಾಹಸ ಮಾಡಬಾರದು.  (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)(KarnatakaSNDMC / Canva)


IPL_Entry_Point

ಇತರ ಗ್ಯಾಲರಿಗಳು