ಬೆಂಗಳೂರಿನ ರಾಜಾನುಕುಂಟೆಯ ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌ನಲ್ಲಿ ಅಗ್ನಿ ಅನಾಹುತ, ಅದೃಷ್ಟವಶಾತ್ ರೋಗಿಗಳು ಬಚಾವ್-ಫೋಟೋಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಿನ ರಾಜಾನುಕುಂಟೆಯ ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌ನಲ್ಲಿ ಅಗ್ನಿ ಅನಾಹುತ, ಅದೃಷ್ಟವಶಾತ್ ರೋಗಿಗಳು ಬಚಾವ್-ಫೋಟೋಸ್‌

ಬೆಂಗಳೂರಿನ ರಾಜಾನುಕುಂಟೆಯ ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌ನಲ್ಲಿ ಅಗ್ನಿ ಅನಾಹುತ, ಅದೃಷ್ಟವಶಾತ್ ರೋಗಿಗಳು ಬಚಾವ್-ಫೋಟೋಸ್‌

ಬೆಂಗಳೂರಿನ ರಾಜಾನುಕುಂಟೆಯ ರಕ್ಷಾ ಹೆಲ್ತ್ ಕೆರ್ ಹಾಸ್ಪಿಟಲ್‌ನಲ್ಲಿ ಇಂದು (ಮೇ 7) ಅಗ್ನಿ ಅನಾಹುತ ಸಂಭವಿಸಿದೆ. ಪ್ರಾಣಾಪಾಯ ಸಂಭವಿಸಿದ ವರದಿ ಇಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಕೆಲಸ ಪ್ರಗತಿಯಲ್ಲಿದೆ. ಇಲ್ಲಿದೆ ಕೆಲವು ಫೋಟೋಸ್‌ ಮತ್ತು ವಿವರ.

ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ರಕ್ಷಾ ಆಸ್ಪತ್ರೆ (ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌) ಯಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ರೋಗಿಗಳು ಹಾಗೂ ಸಿಬ್ಬಂದಿಗಳು ಭಯಭೀತರಾಗಿದ್ದರು. ಅಗ್ನಿ ಅನಾಹುತಕ್ಕೆ ಕಾರಣ ಏನೆಂದು ತಿಳಿದಿಲ್ಲ ಆಸ್ಪತ್ರೆ ಮುಖ್ಯದ್ವಾರದ ಬಳಿ ದಟ್ಟ ಹೊಗೆ ಆವರಿಸಿಕೊಂಡಿತ್ತು.
icon

(1 / 6)

ಆಸ್ಪತ್ರೆಯ ನೆಲ-ಮಹಡಿ ಎಲಿವೇಟರ್ ಬಳಿ ಅಗ್ನಿ ಅನಾಹುತ ಸಂಭವಿಸಿದ್ದು, ಅದರ ದಟ್ಟಹೊಗೆ ಇಡೀ ಕಟ್ಟಡವನ್ನು ಆವರಿಸಿದೆ. ಬಹುಶಃ ವಿದ್ಯುತ್ ಸಮಸ್ಯೆಯಿಂದಾಗಿ ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. 
icon

(2 / 6)

ರಾಜಾನುಕುಂಟೆಯಲ್ಲಿರುವ ರಕ್ಷಾ ಆಸ್ಪತ್ರೆ (ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌) ಯಲ್ಲಿ ಬೆಳಗ್ಗೆ 9 ಗಂಟೆಗೆ ಅಗ್ನಿ ದುರಂತ ಸಂಭವಿಸಿತು ಎಂದು ಹೇಳಲಾಗುತ್ತಿದೆ. ಇದರ ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
icon

(3 / 6)

ರಾಜಾನುಕುಂಟೆಯಲ್ಲಿರುವ ರಕ್ಷಾ ಆಸ್ಪತ್ರೆ (ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌) ಯಲ್ಲಿ ದುರಂತ ಸಂಭವಿಸಿದ ಕೂಡಲೇ ಅಗ್ನಿಶಾಮಕಕ್ಕೆ ಕರೆ ಮಾಡಿದ್ದು, ಅವರ ತಂಡ ಸ್ಥಳಕ್ಕೆ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದೆ.
icon

(4 / 6)

ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಕೂಡಲೇ ಸಮೀಪದಲ್ಲಿರುವ ಇತರೆ ಆಸ್ಪತ್ರೆಗೆ ಸ್ಥಳಾಂತರಿಸುವ ಕೆಲಸವನ್ನು ರಾಜಾನುಕುಂಟೆಯಲ್ಲಿರುವ ರಕ್ಷಾ ಆಸ್ಪತ್ರೆ (ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌) ಯ ಆಡಳಿತ ಮಂಡಳಿ ನಡೆಸಿದೆ.
icon

(5 / 6)

ಇದುವರೆಗಿನ ಲಭ್ಯ ಮಾಹಿತಿ ಪ್ರಕಾರ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ಧಾರೆ.
icon

(6 / 6)

ಇತರ ಗ್ಯಾಲರಿಗಳು