ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿಯಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರೀ; ಲವ್ ಬರ್ಡ್ಸ್‌ಗೆ 444 ರೂ ಟಿಕೆಟ್, ಚಿತ್ರ ನೋಟ ಹೀಗಿದೆ
ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಜ್ಜಿ ಮೊಮ್ಮಗಳು ಉಚಿತವಾಗಿ ಪ್ರಯಾಣಿಸಿದ್ದು, ಲವ್‌ಬರ್ಡ್ಸ್ ಪ್ರಯಾಣಕ್ಕೆ 444 ರೂಪಾಯಿ ಟಿಕೆಟ್ ಪಡೆದುದು ಗಮನಸೆಳೆದಿದೆ. ಇದರ ಕೆಲವು ಫೋಟೋಗಳು ವೈರಲ್ ಆಗಿವೆ. ಆ ಚಿತ್ರನೋಟ ಇಲ್ಲಿದೆ.
(1 / 6)
ಬೆಂಗಳೂರು-ಮೈಸೂರು ,ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸಿದ 2 ಜೋಡಿ ಲವ್‌ಬರ್ಡ್ಸ್ ಮತ್ತು ಅವುಗಳನ್ನು ಮಕ್ಕಳು ಎಂದು ಪರಿಗಣಿಸಿ ಬಸ್ ಕಂಡಕ್ಟರ್ ಕೊಟ್ಟ 444 ರೂಪಾಯಿ ಟಿಕೆಟ್. ಪ್ರತಿ ಲವ್ ಬರ್ಡ್‌ಗೆ 111 ರೂಪಾಯಿ ಟಿಕೆಟ್ ದರ ಪಡೆಯಲಾಗಿದೆ.
(2 / 6)
ಮೂರು ಆಸನಗಳಲ್ಲಿ ಮೊಮ್ಮಗಳು ಕಿಟಕಿ ಪಕ್ಕ ಕುಳಿತಿದ್ದರೆ ಅಜ್ಜಿ ಈಚೆ ಬದಿಗೆ ಕುಳಿತಿದ್ದರು. ಮಧ್ಯದಲ್ಲಿ ಲವ್ ಬರ್ಡ್ಸ್ ಗೂಡನ್ನು ಇರಿಸಿಕೊಳ್ಳಲಾಗಿತ್ತು. ಟಿಕೆಟ್‌ನಲ್ಲಿರುವ ಮಾಹಿತಿ ಪ್ರಕಾರ, ಈ ಅಜ್ಜಿ ಮೊಮ್ಮಗಳು ಇಂದು (ಮಾರ್ಚ್ 27) ಬೆಳಗ್ಗೆ 8 ಗಂಟೆಗೆ ಪ್ರಯಾಣಿಸಿದ್ದಾರೆ.
(3 / 6)
ಕೆಎಸ್‌ಆರ್‌ಟಿಸಿ ಬಸ್‌ನ ಟಿಕೆಟ್ ಪ್ರಕಾರ ಅಜ್ಜಿ ಮತ್ತು ಮೊಮ್ಮಗಳನ್ನು ವಯಸ್ಕರೆಂದು ಪರಿಗಣಿಸಿ ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣದ ಟಿಕೆಟ್ ಅನ್ನು ಕಂಡಕ್ಟರ್ ನೀಡಿದ್ದಾರೆ. ಇನ್ನೊಂದರಲ್ಲಿ ಮಕ್ಕಳು ಎಂದು ಲವ್‌ಬರ್ಡ್ಸ್ ಅನ್ನು ಪರಿಗಣಿಸಿ 444 ರೂಪಾಯಿ ಟಿಕೆಟ್ ನೀಡಲಾಗಿದೆ.
(4 / 6)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
(HT Kannnada)(5 / 6)
ಕೆಎಸ್‌ಆರ್‌ಟಿಸಿ ನಿಯಮ ಪ್ರಕಾರ, ಪ್ರಯಾಣಿಕರು ತಮ್ಮೊಂದಿಗೆ ಕರೆದೊಯ್ಯುವ ಸಾಕು ಪ್ರಾಣಿ, ಪಕ್ಷಿಗಳಿಗೆ ಅರ್ಧ ಟಿಕೆಟ್ ಖರೀದಿಸಬೇಕು. ಈ ರೀತಿ ಟಿಕೆಟ್ ಪಡೆಯದೇ ಇದ್ದರೆ ಪ್ರಯಾಣಿಕರಿಗೆ ಅವರ ಪ್ರಯಾಣದ ಟಿಕೆಟ್ ದರದ ಮೇಲೆ ಶೇಕಡ 10 ದಂಡ ವಿಧಿಸುವುದಕ್ಕೆ ಅವಕಾಶ ಇದೆ. ಅದೇ ರೀತಿ, ಒಂದೊಮ್ಮೆ ಕಂಡಕ್ಟರ್ ಅರ್ಧ ಟಿಕೆಟ್ ನೀಡದೇ ಇದ್ದರೆ ಕೆಎಸ್‌ಆರ್‌ಟಿಸಿ ಹಣ ದುರುಪಯೋಗ ಮಾಡಿಕೊಂಡ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದು. ಕಂಡಕ್ಟರ್ ಅನ್ನು ಅಮಾನತುಗೊಳಿಸುವುದಕ್ಕೂ ಅವಕಾಶ ಇದೆ.
(6 / 6)
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಬಸ್ ಕಂಡಕ್ಟರ್ ಒಬ್ಬರು ಲವ್‌ಬರ್ಡ್ಸ್‌ಗೆ ಟಿಕೆಟ್ ಹರಿದಿಲ್ಲ ಎಂದು ಅವರಿಗೆ ಟಿಕೆಟ್ ತಪಾಸಣಾ ತಂಡ ದಂಡ ವಿಧಿಸಿದ ಘಟನೆ 2022ರಲ್ಲಿ ವರದಿಯಾಗಿತ್ತು. ಹೈದರಾಬಾದ್‌ನಿಂದ ಔರಾದ್‌ಗೆ ಹೋಗುತ್ತಿದ್ದ ಬಸ್‌ನಲ್ಲಿ ಪಂಜರದಲ್ಲಿದ್ದ ಲವ್ ಬರ್ಡ್ಸ್‌ಗೆ ಅರ್ಧ ಟಿಕೆಟ್ ಪಡೆಯುವಂತೆ ಕಂಡಕ್ಟರ್ ಪ್ರಯಾಣಿಕನಲ್ಲಿ ಮನವಿ ಮಾಡಿದ್ದರೂ ಆತ ಕೇಳಿರಲಿಲ್ಲ. ಸಹಪ್ರಯಾಣಿಕರೂ ಆ ಪ್ರಯಾಣಿಕನ ಬೆಂಬಲಕ್ಕೆ ನಿಂತ ಕಾರಣ ಕಂಡಕ್ಟರ್ ಅಸಹಾಯಕನಾಗಿ ಸುಮ್ಮನಿದ್ದ. ಆದರೆ, ಆ ದಿನ ಅದೇ ದಾರಿಯಲ್ಲಿ ಟಿಕೆಟ್ ತಪಾಸಣಾ ತಂಡ ಕಾರ್ಯಚರಣೆ ನಡೆಸಿ ಕಂಡಕ್ಟರ್‌ಗೆ ದಂಡ ವಿಧಿಸಿತ್ತು ಎಂದು ಟಿವಿ9 ವರದಿಮಾಡಿದೆ.
ಇತರ ಗ್ಯಾಲರಿಗಳು