ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಸಿಗುವ 20 ರೂ, 50 ರೂಪಾಯಿ ಜನತಾ ಊಟದ ಪ್ಯಾಕ್‌ಗಳಲ್ಲಿ ಏನೇನಿವೆ
ಬೆಂಗಳೂರು, ಯಶವಂತಪುರ, ಮೈಸೂರು, ಬಳ್ಳಾರಿ, ವಿಜಯಪುರ ರೈಲ್ವೆ ನಿಲ್ದಾಣಗಳಲ್ಲಿ ಈಗ 20 ರೂಪಾಯಿ ಮತ್ತು 50 ರೂಪಾಯಿಗೆ ಜನತಾ ಖಾನಾ ಅಥವಾ ಜನತಾ ಊಟ ಸಿಗಲಾರಂಭಿಸಿದೆ. ಭಾರತೀಯ ರೈಲ್ವೆ ಈಗಾಗಲೇ ಭಾರತದ ದೇಶದ 100ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ 150 ಕೌಂಟರ್‌ಗಳನ್ನು ಇದಕ್ಕಾಗಿ ಸ್ಥಾಪಿಸಿದೆ. ಈ ಜನತಾ ಊಟದ ಮೆನುವಿನಲ್ಲಿ ಏನೇನಿದೆ. ಇಲ್ಲಿದೆ ಸಚಿತ್ರ ವರದಿ.
(1 / 5)
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಜನತಾ ಊಟದ ಕೌಂಟರ್‌ಗಳನ್ನು ಭಾರತೀಯ ರೈಲ್ವೆ ಶುರುಮಾಡಿದೆ. ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಕರ ಅನ್ನಾಹಾರ ದೊರಕಿಸುವ ಉದ್ದೇಶ ಈ ಉಪಕ್ರಮದ್ದು ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)
(2 / 5)
ಆರಂಭಿಕ ಹಂತದಲ್ಲಿ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣ, ಯಶವಂತಪುರ, ಮೈಸೂರು, ಬಳ್ಳಾರಿ, ವಿಜಯನಗರ ರೈಲು ನಿಲ್ದಾಣಗಳ ಪ್ಲಾಟ್‌ಫಾರಂಗಳಲ್ಲಿ ರೈಲುಗಳ ಜನರಲ್ ಬೋಗಿಗಳು ನಿಲ್ಲುವ ಸ್ಥಳದಲ್ಲಿ ಜನತಾ ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಇಲ್ಲಿ ಇಂತಹ ಪ್ರಯಾಣಿಕರಿಗೆ 20 ರೂಪಾಯಿ ಮತ್ತು 50 ರೂಪಾಯಿಗೆ ಊಟದ ಪ್ಯಾಕ್‌ಗಳು ಸಿಗುತ್ತವೆ. ಇದಕ್ಕೆ ಹಣಪಾವತಿಸುವ ಮೊದಲ ರಸೀದಿ ಮಾಡಿಸಿಕೊಳ್ಳಬೇಕು ಎಂದು ರೈಲ್ವೆ ಹೇಳಿದೆ.
(3 / 5)
ಜನತಾ ಖಾನಾ ಅಥವಾ ಜನತಾ ಊಟ 20 ರೂಪಾಯಿಗೆ ಲಭ್ಯ ಇದ್ದು, ಇದರಲ್ಲಿ ಪೂರಿ ಬಾಜಿ ಮತ್ತು ಉಪ್ಪಿನಕಾಯಿ ಸ್ಯಾಚೆಟ್ ಜೊತೆಗಿರುತ್ತದೆ. ಪೂರಿ ತೂಕ 325 ಗ್ರಾಂ ಇದೆ.
(4 / 5)
ಇನ್ನು ಎಕಾನಮಿ ಮೀಲ್ಸ್ ಅಥವಾ ಬಜೆಟ್ ಊಟ 20 ರೂಪಾಯಿಗೆ ಲಭ್ಯ ಇದೆ. ಇದರಲ್ಲಿ ಇರುವ ಆಯ್ಕೆ ಹೀಗಿದೆ. ಲೆಮನ್ ರೈಸ್ ಮತ್ತು ಉಪ್ಪಿನಕಾಯಿ ಸ್ಯಾಚೆಟ್, ಮೊಸರನ್ನ ಮತ್ತು ಉಪ್ಪಿನಕಾಯಿ ಸ್ಯಾಚೆಟ್, ಹುಳಿಯನ್ನ ಮತ್ತು ಉಪ್ಪಿನಕಾಯಿ ಸ್ಯಾಚೆಟ್, ಬಿಸಿಬೇಳೆ ಬಾತ್ ಮತ್ತು ಉಪ್ಪಿನ ಕಾಯಿ ಸ್ಯಾಚೆಟ್. ಇವೆಲ್ಲವೂ 200 ಗ್ರಾಂ ತೂಕ ಇದೆ.
ಇತರ ಗ್ಯಾಲರಿಗಳು