ಬೆಂಗಳೂರು ಮೆಟ್ರೋ ಹಸಿರು ಮಾರ್ಗ ರೀಚ್ 3 ಸಿಗ್ನಲಿಂಗ್ ಪರೀಕ್ಷೆ ಶುರು, ಆಗಸ್ಟ್ 15ರ ತನಕ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ
Bengaluru metro news; ಬೆಂಗಳೂರು ಮೆಟ್ರೋದ ಹಸಿರು ಮಾರ್ಗದ ರೀಚ್ 3ರ ಸಿಗ್ನಲಿಂಗ್ ಪರೀಕ್ಷೆ ಇಂದು ಶುರುವಾಗಿದ್ದು, ಆಗಸ್ಟ್ 15ರ ತನಕ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ವಿಶೇಷವಾಗಿ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.
(1 / 6)
ಬೆಂಗಳೂರು ಮೆಟ್ರೋದ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರ (BIEC) ವರೆಗಿನ ರೀಚ್-3ರ ವಿಸ್ತರಿತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಸಂಚರಿಸುವ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ ವಾಗಲಿದೆ.
(2 / 6)
ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಸಂಚರಿಸುವ ಮೆಟ್ರೋ ರೈಲು ಇಂದು (ಆಗಸ್ಟ್ 13) ಕೊನೆಯ ರೈಲು ಸೇವೆ ರಾತ್ರಿ 11.00 ಕ್ಕೆ ಬದಲಾಗಿ 10,00 ಗಂಟೆಯವರೆಗೆ ಮಾತ್ರ ಇರಲಿದೆ.
(3 / 6)
ಇನ್ನು, ಈ ಮಾರ್ಗದಲ್ಲಿ ನಾಳೆ (ಆಗಸ್ಟ್ 14) ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ರೈಲು ಸಂಚಾರ ಪ್ರಾರಂಭವಾಗಲಿದ್ದು, ಕೊನೆಯ ರೈಲು ಸೇವೆ ರಾತ್ರಿ 11.00 ಕ್ಕೆ ಬದಲಾಗಿ 10.00 ಗಂಟೆಯವರೆಗೆ ಮಾತ್ರ ಇರಲಿದೆ. ಇದೇ ರೀತಿ ಆಗಸ್ಟ್ 15ರಂದು ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ಪ್ರಾರಂಭ ಶುರುವಾಗಲಿದೆ.
(4 / 6)
ನಾಗಸಂದ್ರ ನಿಲ್ದಾಣದಿಂದ ಇಂದು ಮತ್ತು ನಾಳೆ (ಆಗಸ್ಟ್ 13 ಮತ್ತು 14) ಕೊನೆಯ ರೈಲು ರಾತ್ರಿ 11.05 ಗಂಟೆಯ ಬದಲಾಗಿ 10.00 ಗಂಟೆಗೆ ಕೊನೆಗೊಳ್ಳುತ್ತದೆ. ಆಗಸ್ಟ್ 14 ಮತ್ತು 15 ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ಪ್ರಾರಂಭವಾಗುತ್ತದೆ.
(5 / 6)
ಆದಾಗ್ಯೂ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ಸಿಲ್ಕ್ ಇನ್‌ಸ್ಟಿಟ್ಯೂಷನ್ ಮೆಟ್ರೋ ನಿಲ್ದಾಣಗಳ ನಡುವೆ ಇಂದು ಮತ್ತು ನಾಳೆ (ಆಗಸ್ಟ್ 13, 14) ರಾತ್ರಿ 11.12ಕ್ಕೆ ಕೊನೆಯ ರೈಲು ಸಂಚರಿಸಲಿದೆ.
ಇತರ ಗ್ಯಾಲರಿಗಳು