Lalbagh Flower Show: ಹೂಗಳಲ್ಲಿ ಅರಳಿದ ಅನುಭವ ಮಂಟಪ; ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ ಆಕರ್ಷಕ ಫೋಟೋಗಳು ಇಲ್ಲಿವೆ
- Republic Day flower show at Lalbagh: ಗಣರಾಜ್ಯೋತ್ಸವದ ಅಂಗವಾಗಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದ್ದು, ಕೆಲವು ಆಸಕ್ತ ಮತ್ತು ಕಣ್ಮನ ಸೆಳೆಯುವ ಚಿತ್ರ ಸಂಪುಟ ನಿಮಗಾಗಿ ಇಲ್ಲಿದೆ ನೋಡಿ. (ವರದಿ: ಎಚ್ ಮಾರುತಿ)
- Republic Day flower show at Lalbagh: ಗಣರಾಜ್ಯೋತ್ಸವದ ಅಂಗವಾಗಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದ್ದು, ಕೆಲವು ಆಸಕ್ತ ಮತ್ತು ಕಣ್ಮನ ಸೆಳೆಯುವ ಚಿತ್ರ ಸಂಪುಟ ನಿಮಗಾಗಿ ಇಲ್ಲಿದೆ ನೋಡಿ. (ವರದಿ: ಎಚ್ ಮಾರುತಿ)
(1 / 6)
ಇಂದಿನಿಂದ ಬೆಂಗಳೂರಿನ ಲಾಲ್ಬಾಗ್ನ ಗಾಜಿನ ಮನೆಯಲ್ಲಿ 75ನೇ ಗಣರಾಜ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯವನ್ನು ಆಧರಿಸಿದ ಪ್ರದರ್ಶನ ಇದಾಗಿದೆ.
(2 / 6)
ತೋಟಗಾರಿಕೆ ಇಲಾಖೆ ವತಿಯಿಂದ ಜನವರಿ 18 ರಿಂದ ಜನವರಿ 28ರ ವರೆಗೆ ನಡೆಯುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
(3 / 6)
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ 4.8 ಲಕ್ಷ ಹೂಗಳಿಂದ ಅನುಭವ ಮಂಟಪವನ್ನು ನಿರ್ಮಿಸಲಾಗಿದೆ. ಇದರ ಮುಂದೆ 10 ಅಡಿ ಎತ್ತರದ ಬಸವಣ್ಣ ಅವರ ಪುತ್ಥಳಿಯನ್ನೂ ಇರಿಸಲಾಗಿದೆ.
(4 / 6)
ಶರಣರ ಪ್ರತಿಮೆಗಳೊಂದಿಗೆ ಫಲಪುಷ್ಪ ಪ್ರದರ್ಶನ ಕಂಗೊಳಿಸುತ್ತಿದೆ. 11 ದಿನಗಳು ನಡೆಯಲಿರುವ ಫಲಪುಷ್ಪ ಪ್ರದರ್ಶನವು ನಮ್ಮನ್ನು 12ನೇ ಶತಮಾನಕ್ಕೆ ಕರೆದೊಯ್ಯಲಿದೆ.
(5 / 6)
ಅಕ್ಕಮಹಾದೇವಿ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ, ಸಮಗಾರ ಹರಳಯ್ಯ ಕುಂಬಾರ ಗುಂಡಯ್ಯ ಅವರ ಪ್ರತಿಮೆಗಳನ್ನು ಪೀಠದ ಮೇಲಿಟ್ಟು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ.
ಇತರ ಗ್ಯಾಲರಿಗಳು