ಬೆಂಗಳೂರಿನ ಮನೆಮನೆಗಳಲ್ಲಿ ಶುರುವಾಗಲಿ ನೀರು ಉಳಿಸುವ ಅಭಿಯಾನ -Tips For Conserving Water
- ಭಾರತದ ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ನೀರು ಉಳಿಸುವ ಅಭಿಯಾನ ಶುರುವಾಗಲಿ. ಇದಕ್ಕಾಗಿ ಮನೆಗಳಲ್ಲಿ ಏನು ಮಾಡಬೇಕು ಅನ್ನೋದನ್ನ ತಿಳಿಯೋಣ.
- ಭಾರತದ ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ನೀರು ಉಳಿಸುವ ಅಭಿಯಾನ ಶುರುವಾಗಲಿ. ಇದಕ್ಕಾಗಿ ಮನೆಗಳಲ್ಲಿ ಏನು ಮಾಡಬೇಕು ಅನ್ನೋದನ್ನ ತಿಳಿಯೋಣ.
(1 / 6)
ಬೆಂಗಳೂರು ನಗರದ ಜನರು ಸರ್ಕಾರ, ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿಯನ್ನು ದೂರುವ ಬದಲು ನಮ್ಮ ಮನೆಗಳಿಂದಲೇ ನೀರು ಉಳಿಸುವ ಅಭಿಯಾವನ್ನು ಆರಂಭಿಸಬೇಕು. ಇದಕ್ಕಾಗಿ ನೀವು ಮಾಡಬೇಕಾಗಿರುವು ಇಷ್ಟೇ.
(2 / 6)
ಶವರ್ ನೀರನ್ನು ಉಳಿಸಿ - ಗೀಸರ್‌ನಿಂದ ಬಿಸಿ ನೀರು ಬರುವ ಮುನ್ನ ಒಂದಷ್ಟು ನೀರನ್ನು ಹೊರ ಬಿಡಲಾಗುತ್ತದೆ. ಈ ನೀರನ್ನು ವ್ಯರ್ಥ ಮಾಡುವ ಮೊದಲು ಒಂದು ಬಕೆಟ್‌ಗೆ ತುಂಬಿಸಿ ಬಳಸಬಹುದು.
(3 / 6)
ಹಲ್ಲು ಉಜ್ಜುವಾಗ ನೀರಿನ ಟ್ಯಾಪ್ ಆಫ್ ಮಾಡಿ - ಸಾಮಾನ್ಯವಾಗಿ ಕೆಲವರು ಬ್ರಷ್ ಮಾಡುವಾದ ಟ್ಯಾಪನ್ ಓಪನ್ ಮಾಡಿರುತ್ತಾರೆ. ಇದರ ಬದಲು ಒಂದು ಬಕೆಟ್‌ನಲ್ಲಿ ನೀರು ಹಿಡಿದಿಟ್ಟುಕೊಂಡು ಬಳಕೆ ಮಾಡಿ
(4 / 6)
ಬಾಟೆಲ್ ನೀರನ್ನು ಪೂರ್ತಿಯಾಗಿ ಬಳಸಿ - ಕೆಲವರು ಹೊರಗಡೆ ಹೋದಾಗ ನೀರಿನ ಬಾಟೆಲ್ ಖರೀದಿಸುತ್ತಾರೆ. ಆದರೆ ನೀರನ್ನು ಪೂರ್ತಿ ಕುಡಿಯದೆ ಎಸೆಯುತ್ತಾರೆ. ನೀರನ್ನ ಪೂರ್ತಿ ಬಳಸಿ ಇಲ್ಲವೆ ಮನೆಗೆ ತಂದು ಉಪಯೋಗಿಸಿ
(5 / 6)
ಸೋರಿಕೆಯನ್ನು ಸರಿಪಡಿಸಿ - ಮನೆಗಳಲ್ಲಿ ನೀರಿನ ನಲ್ಲಿ ಸೋರಿಕೆಯಾಗುತ್ತಿದ್ದರೆ ನಿಮಗೆ ಗೊತ್ತಿಲ್ಲದಂತೆ ಸಾಕಷ್ಟು ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಸೋರಿಕೆ ನಲ್ಲಿಯನ್ನು ಸರಿಪಡಿಸಿ
ಇತರ ಗ್ಯಾಲರಿಗಳು