ಮಾರ್ಚ್ 12 ರಿಂದ ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ; ಕರ್ನಾಟಕಕ್ಕೆ 6ನೇ ಹೊಸ ರೈಲು
- Bangalore Kalaburagi Vande Bharat Train: ರಾಜಧಾನಿ ಬೆಂಗಳೂರಿಗೆ ನೇರ ವೇಗದ ರೈಲು ಸೇವೆ ಒದಗಿಸಬೇಕೆಂಬ ಕಲಬುರಗಿ ಜನರ ಬಹುದಿನ ಬೇಡಿಕೆ ಈಡೇರುತ್ತಿದೆ. ಮಾರ್ಚ್ 12ಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗುತ್ತಿದೆ.
- Bangalore Kalaburagi Vande Bharat Train: ರಾಜಧಾನಿ ಬೆಂಗಳೂರಿಗೆ ನೇರ ವೇಗದ ರೈಲು ಸೇವೆ ಒದಗಿಸಬೇಕೆಂಬ ಕಲಬುರಗಿ ಜನರ ಬಹುದಿನ ಬೇಡಿಕೆ ಈಡೇರುತ್ತಿದೆ. ಮಾರ್ಚ್ 12ಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗುತ್ತಿದೆ.
(1 / 7)
ರೈಲ್ವೆ ಸಚಿವಾಲಯವು ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಮಂಜೂರು ಮಾಡಿದ್ದು, ದಕ್ಷಿಣ ರಾಜ್ಯದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಬೆಂಗಳೂರು ಮತ್ತು ಕಲಬುರಗಿ ನಡುವೆ ಪ್ರಯಾಣಿಸಲಿದೆ. ರಾಜಧಾನಿಗೆ ನೇರ ವೇಗದ ರೈಲನ್ನು ಓಡಿಸಬೇಕು ಎಂಬುದು ಕಲಬುರಗಿ ಜನರ ದೀರ್ಘಕಾಲದ ಬೇಡಿಕೆ ಇದಾಗಿದೆ.
(2 / 7)
ಮಾರ್ಚ್ 12ರ ಮಂಗಳವಾರ ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಲಾಗುವುದು ಎಂದು ಕಲಬುರಗಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.
(3 / 7)
ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾರ್ಚ್ 12 ರಂದು ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಕಲಬುರಗಿ ಪ್ರದೇಶಕ್ಕೆ ಈ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ತುಂಬಾ ಧನ್ಯವಾದಗಳು ಎಂದು ಸಂಸದ ಉಮೇಶ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
(4 / 7)
ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯ, ಟಿಕೆಟ್ ಬೆಲೆ ಮತ್ತು ಇತರ ವಿವರಗಳು ಇನ್ನೂ ತಿಳಿದುಬಂದಿಲ್ಲ. ಈ ಸೆಮಿ ಹೈಸ್ಪೀಡ್ ರೈಲುಗಳನ್ನು ಭಾರತೀಯ ಹಳಿಗಳಲ್ಲಿ ಪರಿಚಯಿಸಿದ ನಂತರ ಇದು ಕರ್ನಾಟಕಕ್ಕೆ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯಾಗಿದೆ.
(5 / 7)
ಬೆಂಗಳೂರಿನಿಂದ ಸುಮಾರು 550 ಕಿಲೋಮೀಟರ್ ದೂರದಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶದಿಂದ ರಾಜಧಾನಿಗೆ ಪ್ರಯಾಣಿಸುವ ಜನರಿಗೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಅನೇಕ ಸರ್ಕಾರಿ ಅಧಿಕಾರಿಗಳು ಈ ಸೇವೆಯಿಂದ ಪ್ರಯೋಜನ ಪಡೆಯಲಿದ್ದಾರೆ.
(6 / 7)
ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಬೆಂಗಳೂರಿನಲ್ಲಿ ಪ್ರಸ್ತುತ ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಚೆನ್ನೈ, ಕೊಯಮತ್ತೂರು, ಮೈಸೂರು ಮತ್ತು ಹೈದರಾಬಾದ್‌ಗೆ ವಂದೇ ಭಾರತ್ ರೈಲುಗಳಿವೆ. ಇತ್ತೀಚೆಗೆ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಉತ್ತರ ಕರ್ನಾಟಕದ ಬೆಳಗಾವಿವರೆಗೆ ವಿಸ್ತರಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಬೇಡಿಕೆ ಇದೆ.
ಇತರ ಗ್ಯಾಲರಿಗಳು