ಬೆಂಗಳೂರು ಮಳೆ: ಎಲ್ಲಣ್ಣ ಮೂವ್ ಆಯ್ತದೆ, ಇಲ್ಲಿ ಇದರ ಮೇಲೆ ನಿಂತಿದೆ; ಈ ರಸ್ತೆಗಳೆಲ್ಲ ಜಲಾವೃತ, ವಾಹನ ಸವಾರರ ಪರದಾಟ, ಚಿತ್ರನೋಟ
ಬೆಂಗಳೂರು ಮಳೆ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿನ್ನೆ (ಮೇ 18) ರಾತ್ರಿಯಿಂದ ಮಳೆ ಸುರಿಯುತ್ತಿದ್ದು ವಿವಿಧೆಡೆ ರಸ್ತೆಗಳು ಜಲಾವೃತವಾಗಿವೆ. ಹೀಗಾಗಿ ವಾಹನ ಸವಾರರು ಪರದಾಟ ಅನುಭವಿಸಿದ್ದು, ಕೆಲವು ಪ್ರದೇಶಗಳ ಚಿತ್ರನೋಟ ಹಾಗೂ ವಾಹನ ಸಂಚಾರ ನಿಧಾನವಾಗಿರುವ ರಸ್ತೆಗಳ ವಿವರ ಇಲ್ಲಿದೆ.
(1 / 12)
ಬೆಂಗಳೂರು ಮಳೆ: ಎಲ್ಲಣ್ಣ ಮೂವ್ ಆಯ್ತದೆ, ಇಲ್ಲಿ ಇದರ ಮೇಲೆ ನಿಂತಿದೆ ಎಂದು ಚಾಲಕರು ಅಸಮಾಧಾನ ತೋಡುವ ದೃಶ್ಯ ಇಂದು ವಿವಿಧೆಡೆ ಸಾಮಾನ್ಯವಾಗಿ ಕಂಡುಬಂದಿದೆ.; ಈ ರಸ್ತೆಗಳೆಲ್ಲ ಜಲಾವೃತ, ವಾಹನ ಸವಾರರ ಪರದಾಟ ಕಂಡುಂಬತು. ಕೆಲವು ಪ್ರದೇಶಗಳ ಚಿತ್ರನೋಟ ಹಾಗೂ ಬೆಂಗಳೂರು ಸಂಚಾರ ಪೊಲೀಸರು ಇಂದು (ಮೇ 19) ಬೆಳಿಗ್ಗೆ 7 ಗಂಟೆ ತನಕ ನೀಡಿದ ವಿವರ ಇಲ್ಲಿದೆ.
(BTP)(2 / 12)
ರಸ್ತೆಗಳಲ್ಲಿ ಮಳೆ ನೀರು ನಿಂತ ಕಾರಣ ಹೆಚ್‌ಎಸ್ ಆರ್ ಲೇಔಟ್ ಡಿಪೋ ದಿಂದ14 ನೇ ಮುಖ್ಯ ರಸ್ತೆಯ ಕಡೆಗೆ ಹಾಗೂ ಕನಕಪುರ ಮುಖ್ಯ ರಸ್ತೆ (ನೈಸ್ ರಸ್ತೆ) ಯಿಂದ ಕೋಣನಕುಂಟೆ ಕಡೆಗೆ ವಾಹನ ಸಂಚಾರ ನಿಧಾನವಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ನಗರದ ಹೊರ ಹೋಗುವ ಮತ್ತು ಒಳ ಬರುವ ಕಡೆಗೆ ಹಾಗೂ ವಿದ್ಯಾಶಿಲ್ಪ ರೈಲ್ವೆ ಅಂಡರ್‌ಪಾಸ್‌ನಿಂದ ಏರ್ಪೋರ್ಟ್ ಕಡೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರ ವಿಳಂಬವಾಗಿದೆ.
(3 / 12)
ಪ್ರಸನ್ನ ಚಿತ್ರ ಮಂದಿರದಿಂದ ಬಸವ ಮಂಟಪ ಸಿಗ್ನಲ್ ಕಡೆಗೆ. ಅದೇ ರೀತಿ, .ಸೋನಿ ವರ್ಲ್ಡ್ ಸಿಗ್ನಲ್ ನಿಂದ ಮಹಾರಾಜ ಸಿಗ್ನಲ್ ಕಡೆಗೆ ರಸ್ತೆಗಳಲ್ಲಿ ಮಳೆ ನೀರು ನಿಂತ ಕಾರಣ ವಾಹನ ಸಂಚಾರ ವಿಳಂಬವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ಧಾರೆ.
(4 / 12)
ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬೆಳ್ಳಂದೂರು ಕಡೆಗೆ ಹಾಗೂ ಲೌರಿ ರೈಲ್ವೆ ಅಂಡರ್ಪಾಸ್ ನಿಂದ ಮಹದೇವಪುರ ಕಡೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ವಿಳಂಬವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(5 / 12)
ಬೇಲಿಮಠ ಜಂಕ್ಷನ್ ನಿಂದ ಬಿನ್ನಿಮಿಲ್ ಕಡೆಗೆ ಹಾಗೂ.ಆದರ್ಶ ಜಂಕ್ಷನ್ ನಿಂದ ರಾಮಯ್ಯ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಕೂಡ ಮಳೆ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ನಿಧಾನ ಗತಿಯ ವಾಹನ ಸಂಚಾರ ಇದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(6 / 12)
ಶಿರಸಿ ವೃತ್ತದ ಬಳಿ ಮರ ಬಿದ್ದಿರುವುದರಿಂದ ಉಮಾ ಥಿಯೇಟರ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(BTP)(7 / 12)
ಸಿಲ್ಕ್ ಬೋರ್ಡ್ ನಿಂದ ಅಗರ ಸಿಗ್ನಲ್ ಕಡೆಗೆ ಅದೇ ರೀತಿ. ಕೆನ್ಸಿಂಗ್ಟನ್ ನಿಂದ ಗುರುದ್ವಾರ ಕಡೆಗೆ, ಭಾಷ್ಯಂ ವೃತ್ತದಿಂದ ಕಾವೇರಿ ಜಂಕ್ಷನ್ ಕಡೆಗೆ. ಅಲ್ಲಸಂದ್ರ ವೃತ್ತದಿಂದ ಯಲಹಂಕ ಜಂಕ್ಷನ್ ಕಡೆಗೆ.. ಕಸ್ತೂರಿ ನಗರ 2ನೇ ಮುಖ್ಯರಸ್ತೆಯಿಂದ ಸದಾನಂದ ಸೇತುವೆ ಕಡೆಗೆ. ಸಿಬಿ ರಸ್ತೆಯಿಂದ ಎ.ಎಸ್.ಸಿ ಮತ್ತು ಆರ್ ಎಂ ನಗರದಿಂದ ಚಿಕ್ಕ ಬಾಣಸವಾಡಿ ಕಡೆಗೆ. ಹೋಗುವ ಮಾರ್ಗದಲ್ಲಿ ಮಳೆ ನೀರು ನಿಂತ ಕಾರಣ ವಾಹನ ಸಂಚಾರ ವಿಳಂಬವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(8 / 12)
ಆಟೋ ಮಾರ್ಟ್ ನಿಂದ ಅಗರ ಕಡೆಗೆ. ಹಾಗೂ ಶಾಹಿ ಗಾರ್ಮೆಂಟ್ಸ್, ಬನ್ನೇರುಘಟ್ಟ ರಸ್ತೆ ಯಿಂದ ಹುಳಿಮಾವು ಗೇಟ್ ಕಡೆಗೆ, ರಾಷ್ಟ್ರೋತ್ಥಾನ ಸ್ಕೂಲ್ ಜಂಕ್ಷನ್ ನಿಂದ ಕ್ಲೌಡ್-9 ಆಸ್ಪತ್ರೆ,ಥಣಿಸಂದ್ರ ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ಮಳೆ ನೀರು ನಿಂತ ಕಾರಣ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
(9 / 12)
ಇಂದಿರಾ ನಗರದ ವಿವಿಧ ಬಡಾವಣೆ ರಸ್ತೆಗಳಲ್ಲಿ ನೀರು ನಿಂತು ಜನರಿಗೆ ತೊಂದರೆಯಾಗಿದೆ. ಇನ್ನೊಂದೆಡೆ, ವಡ್ಡರಪಾಳ್ಯದಿಂದ ಹೆಣ್ಣೂರು ಮುಖ್ಯರಸ್ತೆಗೆ ಹೋಗುವ ಎರಡೂ ಬದಿಗೆ, ರಾಷ್ಟ್ರೋತ್ಥಾನ ಜಂಕ್ಷನ್‌ನಿಂದ ಅಶ್ವತ್ಥನಗರ ಜಂಕ್ಷನ್ ಕಡೆಗೆ, ಆರ್‌ಎಂ ರಸ್ತೆಯಿಂದ ಎಎಸ್‌ಸಿ ಮತ್ತು ಹೊಸ್ಮಟ ಹಾಸ್ಪಿಟಲ್ ರಸ್ತೆ, ಆನಂದ ರಾವ್ ಸರ್ಕಲ್‌ನಿಂದ ಕಿನೋ ಜಂಕ್ಷನ್ ಕಡೆಗೆ ಹೋಗುವ ಮಾರ್ಗದಲ್ಲಿ ಮಳೆ ನೀರು ನಿಂತು ಸಂಚಾರ ವಿಳಂಬವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(Raj)(10 / 12)
ಜ್ಞಾನಭಾರತಿ ಯಿಂದ ರಾಜರಾಜೇಶ್ವರಿ ನಗರ ಆರ್ಚ್ ಕಡೆಗೆ. ಅದೇ ರೀತಿ, ಸರ್ಜಾಪುರ ವಿಪ್ರೋ ಜಂಕ್ಷನ್ ನಿಂದ ಇಬ್ಲೂರು ಕಡೆಗೆ ಮತ್ತು ಇಬ್ಲೂರು ನಿಂದ ಸರ್ಜಾಪುರ ವಿಪ್ರೋ ಜಂಕ್ಷನ್ ಕಡೆಗೆ, .ನ್ಯೂ ಬಿ ಇ ಲ್ ರಸ್ತೆಯಿಂದ ಅಯ್ಯಪ್ಪ ದೇವಸ್ಥಾನದ ಕಡೆಗೆ, ನಾಗವಾರ ಬಸ್ ಸ್ಟಾಪ್ ಯಿಂದ ಸರಯಪಾಳ್ಯ ಮತ್ತು ಅಲ್ಲಾಳ ಸಂದ್ರ ಯಿಂದ ಯಲಹಂಕ ಸರ್ಕಲ್ ಹೋಗುವ ಮಾರ್ಗದಲ್ಲಿ ನೀರು ನಿಂತು ಸಂಚಾರ ವಿಳಂಬವಾಗಿದೆ.
(11 / 12)
ನೆಹರು ವೃತ್ತ ಬಳಿ ಕಾರು ಕೆಟ್ಟು ನಿಂತಿರುವುದರಿಂದ ಶಿವಾನಂದ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.(ಎಡ ಚಿತ್ರ) ಕೋಗಿಲು ಗ್ರಾಮದ ಸಿಗ್ನಲ್ ಬಳಿ ಬಿಎಂಟಿಸಿ ಬಸ್ ಕೆಟ್ಟು ನಿಂತಿರುವುದರಿಂದ ಯಲಹಂಕದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.(ಬಲ ಚಿತ್ರ)
(12 / 12)
ರೂಬಿ ಜಂಕ್ಷನ್ ಬಳಿ ಲಾರಿ ಕೆಟ್ಟು ನಿಂತಿರುವುದರಿಂದ ಬಿಳೇಕಹಳ್ಳಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಇನ್ನುಳಿದಂತೆ, . ಗೆದ್ದಲಹಳ್ಳಿ ಯಿಂದ ಹೆಣ್ಣೂರು ಕಡೆಗೆ, ವರ್ತೂರು ಪಿಎಸ್ ಯಿಂದ ಗುಂಜೂರು ಕಡೆಗೆ, ಬಿ ನಾರಾಯಣಪುರ ಜಂಕ್ಷನ್ ಯಿಂದ ಲೋರಿ ಜಂಕ್ಷನ್ ಕಡೆಗೆ, ಎಚ್.ಬಿ.ಆರ್ ಲೇಔಟ್ 17ನೇ ಮುಖ್ಯಯಿಂದ 18ನೇ ಮುಖ್ಯ ರಸ್ತೆ ಕಡೆಗೆ . ವಿಪ್ರೋ ಜಂಕ್ಷನ್ ಕೋರಮಂಗಲದಿಂದ ಮಹಾರಾಜ ಜಂಕ್ಷನ್ ಕಡೆಗೆ, ಕೋಗಿಲು ಗ್ರಾಮದಿಂದ ಯಲಹಂಕದ ಕಡೆಗೆ. ಸಿಲ್ಕ್ ಬೋರ್ಡ್ ಡೌನ್ ರಾಂಪ್ ದಿಂದ ರೂಪೇನ ಅಗ್ರಹಾರ ಕಡೆಗೆ. ಮೇಡಹಳ್ಳಿ ಯಿಂದ ಸಣ್ಣೇನಹಳ್ಳಿ ಕಡೆಗೆ, ಪಾಣತ್ತೂರು ಯಿಂದ ಕಾಡುಬೀಸನಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಮಳೆ ನೀರು ನಿಂತ ಕಾರಣ ನಿಧಾನಗತಿಯ ವಾಹನ ಸಂಚಾರವಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇತರ ಗ್ಯಾಲರಿಗಳು