ಬೆಂಗಳೂರು ಬೇಸಿಗೆ ಮಳೆ, ನೀರು ತುಂಬಿದ ರಸ್ತೆ, ಟ್ರಾಫಿಕ್ ಜಾಮ್ ಸೇರಿ ಅವಾಂತರಗಳು ಒಂದೆರಡಲ್ಲ, ಇಲ್ಲಿದೆ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು ಬೇಸಿಗೆ ಮಳೆ, ನೀರು ತುಂಬಿದ ರಸ್ತೆ, ಟ್ರಾಫಿಕ್ ಜಾಮ್ ಸೇರಿ ಅವಾಂತರಗಳು ಒಂದೆರಡಲ್ಲ, ಇಲ್ಲಿದೆ ಚಿತ್ರನೋಟ

ಬೆಂಗಳೂರು ಬೇಸಿಗೆ ಮಳೆ, ನೀರು ತುಂಬಿದ ರಸ್ತೆ, ಟ್ರಾಫಿಕ್ ಜಾಮ್ ಸೇರಿ ಅವಾಂತರಗಳು ಒಂದೆರಡಲ್ಲ, ಇಲ್ಲಿದೆ ಚಿತ್ರನೋಟ

Bengaluru Rains: ಬೆಂಗಳೂರಲ್ಲಿ ಶನಿವಾರ ಬಿದ್ದ ಬೇಸಿಗೆ ಮಳೆ ಬಹಳಷ್ಟು ಅವಾಂತರಗಳಿಗೆ ಕಾರಣವಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ದಟ್ಟಣೆ ಉಂಟಾದರೆ, 3 ವರ್ಷದ ಪುಟ್ಟ ಬಾಲಕಿ ದುರ್ಮರಣಕ್ಕೀಡಾದ ಮನಕಲಕುವ ದುರಂತ ಕೂಡ ನಡೆಯಿತು. ಇಲ್ಲಿದೆ ಬೆಂಗಳೂರು ಬೇಸಿಗೆ ಮಳೆ ಸಂದರ್ಭದ ಚಿತ್ರನೋಟ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶನಿವಾರ (ಮಾರ್ಚ್ 22) ಸಂಜೆ ಕೆಲ ನಿಮಿಷ ಭಾರಿ ಮಳೆ ಸುರಿಯಿತು. ಇದರಿಂದಾಗಿ ಅನೇಕ ಕಡೆ ರಸ್ತೆಗಳಲ್ಲಿ ನೀರು ನಿಂತುಕೊಂಡು ಸಂಚಾರ ಅಸ್ತವ್ಯಸ್ತವಾಯಿತು, ಬೆಂಗಳೂರು ನಗರ ಹಾಗೂ ನಗರದ ಹೊರವಲಯಗಳಲ್ಲಿ ಕೂಡ ಇದೇ ಸಮಸ್ಯೆ ಕಾಣಿಸಿಕೊಂಡಿತ್ತು,
icon

(1 / 10)

(BTP)

ಬೆಂಗಳೂರು ಬೇಸಿಗೆ ಮಳೆ ಅವಾಂತರಕ್ಕೆ ರಸ್ತೆಗೆ ಮರ ಬಿದ್ದು 3 ವರ್ಷದ ಬಾಲಕಿಯ ಸಾವು ಸಂಭವಿಸಿದೆ. ವಿವಿಧೆಡೆ ನೀರು ತುಂಬಿದ ರಸ್ತೆಗಳಲ್ಲಿ ವಾಹನ ಸವಾರರು ಪರದಾಡಿದರು.
icon

(2 / 10)

ಬೆಂಗಳೂರು ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್ (ಕೆ ಆರ್ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂ. ಎಂ. ಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್‌, ಮಹದೇವಪುರ ಮತ್ತು ಕೆ ಆರ್ ಪುರ ಕಡೆಗೆ ಹೋಗುವ ವಾಹನ ಸವಾರರು ಸಂಕಟ ಅನುಭವಿಸಿದರು.
icon

(3 / 10)

ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್ (ಕೆ ಆರ್ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂ. ಎಂ. ಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿದ್ದ ಕಾರಣ ಬಿಎಂಟಿಸಿ ಬಸ್ ಸಂಚರಿಸುವಾಗ ಅದರ ಮೆಟ್ಟಿಲುಗಳಿಗೂ ನೀರು ತಲುಪಿದ್ದು ಗಮನಿಸಬಹುದು.
icon

(4 / 10)

ನಾಗವಾರ ಕಡೆಯಿಂದ ಹೆಬ್ಬಾಳ ಕಡೆಗೆ ಮಳೆ ನೀರು ನಿಂತ ಕಾರಣ ಸಂಚಾರ ದಟ್ಟಣೆ ಕಂಡುಬಂತು (ಎಡ ಚಿತ್ರ), ಪೊಲೀಸರು ಸ್ವಯಂ ಪ್ರೇರಿತರಾಗಿ ರಸ್ತೆಯ ನೀರು ತೆರವುಗೊಳಿಸುವ ಕೆಲಸ ಮಾಡಿದರು.
icon

(5 / 10)

ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೂಪೇನ ಅಗ್ರಹಾರದ ಬಳಿ ರಸ್ತೆಯಲ್ಲಿ ನೀರು ನಿಂತ ವೇಳೆ ಸಂಚಾರ ಪೊಲೀಸ್ ಸಿಬ್ಬಂದಿ ಒಬ್ಬರು ಅದನ್ನು ತೆರವುಗೊಳಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಹೊಸೂರು ಮುಖ್ಯ ರಸ್ತೆ ಮೂಲಕ ನಗರದ ಒಳ ಭಾಗಕ್ಕೆ ಬರುವ ವಾಹನ ಸಂಚಾರರು ಸಂಕಟ ಅನುಭವಿಸಿದ್ದರು.
icon

(6 / 10)

ಬೆಂಗಳೂರು ಚಾಮುಂಡಿ ನಗರ ಮುಖ್ಯರಸ್ತೆಯಲ್ಲಿ ದಿಣ್ಣೂರು ಮೇನ್ ರೋಡ್‌ ಕಡೆಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದ ಕಾರಣ ಸಂಚಾರ ಅಸ್ತವ್ಯಸ್ತವಾಗಿತ್ತು.
icon

(7 / 10)

ಕೋರಮಂಗಲ 60 ಅಡಿ ರಸ್ತೆಯ ಸೌಭಾಗ್ಯ ಮಾರ್ಕೆಟ್ ಬಳಿ ಮರ ಬಿದ್ದ ಕಾರಣ ಸಂಚಾರಕ್ಕೆ ಅಡ್ಡಿಯಾಗಿತ್ತು.
icon

(8 / 10)

ರಾಮಮೂರ್ತಿನಗರ ಬ್ರಿಡ್ಜ್ ಮೇಲೆ ಮಳೆ ನೀರು ನಿಂತಿರುವುದರಿಂದ ರಾಮಮೂರ್ತಿನಗರ - ಬಾಣಸವಾಡಿ ಮುಖ್ಯರಸ್ತೆ ಕಡೆಗೆ ಹೋಗುವ ವಾಹನ ಸವಾರರು ಸಂಕಷ್ಟ ಅನುಭವಿಸಿದರು.
icon

(9 / 10)

ಜೆ ಸಿ ರಸ್ತೆಯಲ್ಲಿ ನೆನ್ನೆ ರಾತ್ರಿ ಸುರಿದ ಮಳೆಗೆ ನೆಲಕ್ಕುರುಳಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
icon

(10 / 10)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು