ಬೆಂಗಳೂರು ಮದುವೆ ಸೀಸನ್‌; ಮಲ್ಲಿಗೆ ಹೂವಿಗೂ ಕೃತಕ ಬಣ್ಣ, ರಾಸಾಯನಿಕ ಬಳಕೆ ಶಂಕೆ, ಚರ್ಮಕ್ಕೆ ತಾಗಿದರೆ ತುರಿಕೆ, ಅಲರ್ಜಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು ಮದುವೆ ಸೀಸನ್‌; ಮಲ್ಲಿಗೆ ಹೂವಿಗೂ ಕೃತಕ ಬಣ್ಣ, ರಾಸಾಯನಿಕ ಬಳಕೆ ಶಂಕೆ, ಚರ್ಮಕ್ಕೆ ತಾಗಿದರೆ ತುರಿಕೆ, ಅಲರ್ಜಿ

ಬೆಂಗಳೂರು ಮದುವೆ ಸೀಸನ್‌; ಮಲ್ಲಿಗೆ ಹೂವಿಗೂ ಕೃತಕ ಬಣ್ಣ, ರಾಸಾಯನಿಕ ಬಳಕೆ ಶಂಕೆ, ಚರ್ಮಕ್ಕೆ ತಾಗಿದರೆ ತುರಿಕೆ, ಅಲರ್ಜಿ

ಬೆಂಗಳೂರಲ್ಲಿ ಮದುವೆ ಸೀಸನ್ ಶುರುವಾಗಿದೆ. ವಿವಿಧ ಶುಭ ಕಾರ್ಯಗಳೂ ನಡೆಯುತ್ತಿದ್ದು, ಹೂವು ಮಾರುಕಟ್ಟೆ ವಹಿವಾಟು ಜೋರಾಗಿದೆ. ಇದರ ನಡುವೆಯೇ, ಕೆಲವರ ದುರಾಸೆಯ ಕಾರಣ, ಹೂವಿನ ವಿಶೇಷವಾಗಿ ಮಲ್ಲಿಗೆಯ ತಾಜಾತನ ಉಳಿಸುವುದಕ್ಕಾಗಿ ಕೃತಕ ಬಣ್ಣ, ರಾಸಾಯನಿಕ ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು ಸೇರಿ ಎಲ್ಲಕಡೆಯೂ ಈಗ ಮದುವೆ ಸೇರಿ ವಿವಿಧ ಶುಭಕಾರ್ಯಗಳು ನಡೆಯುತ್ತಿವೆ. ಹೂವಿನ ಮಾರುಕಟ್ಟೆಗೂ ಇದು ಹೆಚ್ಚು ವಹಿವಾಟು ನಡೆಯುವ ಸಮಯ. ಇದೇ ವೇಳೆ, ಹೂವುಗಳ ವಿಶೇಷವಾಗಿ ಮಲ್ಲಿಗೆ ತಾಜಾತನ ಉಳಿಸುವುದಕ್ಕಾಗಿ ಕೃತಕ ಬಣ್ಣ, ರಾಸಾಯನಿಕಗಳನ್ನು ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ.
icon

(1 / 11)

(Pexel)

ಆರೋಗ್ಯಕ್ಕೆ ಹಾನಿ ಉಂಟುಮಾಡುವ ಕೃತಕ ಬಣ್ಣಗಳನ್ನು ಆಹಾರದ ಬಳಕೆ ಮಾಡುವುದನ್ನು ಪತ್ತೆ ಹಚ್ಚಿ ಅಂತಹ ಕ್ರಮಗಳನ್ನು ಸರ್ಕಾರ ನಿಷೇಧಿಸಿದೆ. ಗೋಭಿ ಮಂಚೂರಿ ಸೇರಿದಂತೆ ಇತರೆ ಆಹಾರ ಬಳಕೆಯಲ್ಲಿ ಕೃತಕ ಬಣ್ಣ ಬಳಸದಂತೆ ನಿರ್ಬಂಧಿಸಿದೆ. ಈ ನಡುವೆ, ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಹಾಳೆ ಬಳಕೆ ಮಾಡುತ್ತಿರುವುದು ಕೂಡ ಗಮನಸೆಳೆದಿತ್ತು. ಅದರ ವಿರುದ್ಧವೂ ಸರ್ಕಾರ ಕ್ರಮ ಜರುಗಿಸಿದೆ. ಇಂತಹ ಸನ್ನಿವೇಶದಲ್ಲಿ ಮಲ್ಲಿಗೆಯ ತಾಜಾತನ ಉಳಿಸುವುದಕ್ಕೆ ಕೃತಕ ಬಣ್ಣ, ರಾಸಾಯನಿಕ ಬಳಸುತ್ತಿರುವ ಆರೋಪ ವ್ಯಕ್ತವಾಗಿದೆ ಎಂದು ಸಂಯುಕ್ತ ಕರ್ನಾಟಕ ಶುಕ್ರವಾರ (ಮಾರ್ಚ್ 14) ವರದಿ ಮಾಡಿದೆ. 
icon

(2 / 11)

ಮಲ್ಲಿಗೆ ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. ಬಹಳ ಇಷ್ಟಪಟ್ಟು ಖರೀದಿಸಿ ಮುಡಿದುಕೊಳ್ಳುತ್ತಾರೆ. ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳು ಇದ್ಧಾಗ ಕೇಳಲೇ ಬೇಡಿ. ಈ ಟ್ರೆಂಡ್ ಇನ್ನೂ ಹೆಚ್ಚು
icon

(3 / 11)

ಮನೆಯಲ್ಲೇ ಮಲ್ಲಿಗೆ ಬೆಳೆದಿದ್ದರೆ ಅದನ್ನು ಇಷ್ಟಪಟ್ಟು ಕೊಯ್ದು, ಮಾಲೆ ಕಟ್ಟಿ ಮುಡಿದುಕೊಳ್ಳುವ ಮಹಿಳೆಯರ ಸಂಭ್ರಮ, ಸಡಗರವೇ ಬೇರೆ. ಆದರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಲ್ಲಿಗೆ ಹೂವುಗಳ ಮಾಲೆಯನ್ನು ಖರೀದಿಸುವಾಗ ಎಚ್ಚರವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವರದಿ ಹೇಳಿದೆ.
icon

(4 / 11)

ಇತ್ತೀಚೆಗೆ ವ್ಯಾಪಾರಿಗಳು ಮಲ್ಲಿಗೆ ಹೂವು ಬೇಗ ಬಾಡದೇ ಇರಲಿ ಎಂಬ ಕಾರಣಕ್ಕೆ ಕೃತಕ ಬಣ್ಣ ಬಳಸುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇಂತಹ ಹೂವಿನ ಮಾಲೆ ಮುಟ್ಟಿದಾಗ ಉಂಟಾಗುವ ತುರಿಕೆಯೇ ಈ ರೀತಿ ಶಂಕೆ ವ್ಯಕ್ತವಾಗುವುದಕ್ಕೆ ಕಾರಣ. 
icon

(5 / 11)

ಈ ರಾಸಾಯನಿಕ ನೀರಿನಂತೆಯೇ ಇದ್ದು, ಹೂವಿನ ಮಾಲೆಗಳ ಮೇಲೆ ಸ್ಪ್ರೇ ಮಾಡುವುದರಿಂದ ಅದರ ತಾಜಾತನ ಉಳಿಯುವುದೆಂಬುದನ್ನು ಕೆಲವರು ಕಂಡುಕೊಂಡಿದ್ದಾರೆ. ಇದು ಸಮಸ್ಯೆ ಸೃಷ್ಟಿಸಿದೆ ಎಂದು ವರದಿ ಹೇಳಿದೆ.
icon

(6 / 11)

ಇಂತಹ ರಾಸಾಯನಿಕ ಬಳಕೆಯಾಗಿರುವ ಹೂವಿನ ಮಾಲೆ ಮುಟ್ಟಿದವರಿಗೆ ಕೈ ತುರಿಕೆ ಮತ್ತು ಆ ಮಾಲೆ ಶರೀರದ ಯಾವ ಭಾಗಕ್ಕೆ ತಾಗಿದೂ ಚರ್ಮದ ಸಮಸ್ಯೆ ಕಾಣಿಸುತ್ತಿದೆ ಎಂದು ವರದಿ ಹೇಳಿದೆ. 
icon

(7 / 11)

ಕೃತಕ ರಾಸಾಯನಿಕ ಚಿಮುಕಿಸಲ್ಪಟ್ಟ ಹೂವಿನ ಮಾಲೆಯನ್ನು ಮುಡಿದವರಿಗೆ ಕೂದಲು ಉದುರುವಿಕೆ, ಉಸಿರಾಟದ ಸಮಸ್ಯೆ, ಅಲರ್ಜಿ ಕಾಡಿದೆ ಎಂದು ವರದಿ ವಿವರಿಸಿದೆ.
icon

(8 / 11)

ಮಾರುಕಟ್ಟೆಯಲ್ಲಿ ಮಲ್ಲಿಗೆ ಮಾಲೆ ಅಥವಾ ಹೂವಿನ ಮಾಲೆ ಖರೀದಿಸುವಾಗ ಸೂಕ್ಷ್ಮವಾಗಿ ಗಮನಿಸಿ. ಸಂದೇಹವೆನಿಸಿದರೆ ಅಂತಹ ಹೂವಿನ ಮಾಲೆಯನ್ನು ಖರೀದಿಸಬೇಡಿ.
icon

(9 / 11)

ಮಲ್ಲಿಗೆ ಹೂವು ಇನ್ನೂ ನಾಲ್ಕು ದಿನವಾದರೂ ಬಾಡುವುದಿಲ್ಲ ಎಂದು ವ್ಯಾಪಾರಿಗಳು ಹೇಳಿದರೆ ಅಂತಹ ಹೂವನ್ನು ಖರೀದಿಸಬೇಡಿ.
icon

(10 / 11)

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕಾದ ಕಾರಣ ಎಚ್ಚರವಹಿಸಿ ಎಂದು ಜಾಗೃತಿ ಮೂಡಿಸಬಹುದು. ಹಾಗಂತ ಎಲ್ಲ ಹೂವಿನ ವ್ಯಾಪಾರಿಗಳನ್ನೂ ಸಂದೇಹದಿಂದಲೇ ನೋಡಿ ವ್ಯವಹರಿಸಬೇಡಿ. ಇದನ್ನು ಇಲ್ಲಿ ಮಾಹಿತಿಗಾಗಿ ಮತ್ತು ಜಾಗೃತಿಗಾಗಿ ಮಾತ್ರ ನೀಡಲಾಗಿದೆ. 
icon

(11 / 11)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು