ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಡ್ಲಿ ಸಾಂಬಾರ್, ಉಪ್ಮಾ, ಆಲೂ ಪರಾಠ: ಭಾರತದ ವಿವಿಧ ರಾಜ್ಯಗಳ 7 ಜನಪ್ರಿಯ ಉಪಾಹಾರಗಳಿವು; ಬಾಯಲ್ಲಿ ನೀರೂರುವುದು ಪಕ್ಕಾ

ಇಡ್ಲಿ ಸಾಂಬಾರ್, ಉಪ್ಮಾ, ಆಲೂ ಪರಾಠ: ಭಾರತದ ವಿವಿಧ ರಾಜ್ಯಗಳ 7 ಜನಪ್ರಿಯ ಉಪಾಹಾರಗಳಿವು; ಬಾಯಲ್ಲಿ ನೀರೂರುವುದು ಪಕ್ಕಾ

  • ಆಹಾರದಲ್ಲಿ ವೈವಿಧ್ಯತೆ ಹೊಂದಿರುವ ದೇಶ ಭಾರತ. ಹೊತ್ತು ಹೊತ್ತಿಗೂ ತರಹೇವಾರಿ ಖಾದ್ಯಗಳನ್ನು ಭಾರತೀಯರು ಸೇವಿಸುತ್ತಾರೆ. ಊಟಕ್ಕೆ ಒಂದಷ್ಟು ಬಗೆಯ ಖಾದ್ಯಗಳು ಸಿದ್ಧವಾದರೆ, ಬೆಳಗ್ಗಿನ ಉಪಾಹಾರಕ್ಕೆ ಸಾವಿರಾರು ಬಗೆಯ ತಿಂಡಿ ಭಾರತದಲ್ಲಿದೆ. ಭಾರತದ ವಿವಿಧ ರಾಜ್ಯಗಳ ಪ್ರಮುಖ ಉಪಾಹಾರಗಳು ಯಾವುದೆಂದು ನೋಡೋಣ.

ಭಾರತವು ಆಹಾರ ವೈವಿಧ್ಯಕ್ಕೆ ಹೆಸರುವಾಸಿ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಾರತದಲ್ಲಿ ಭಿನ್ನ ಆಹಾರ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ದೇಶದ ಯಾವ ರಾಜ್ಯದಲ್ಲಿ ಯಾವ ಆಹಾರ ಕ್ರಮ ಅನುಸರಿಸಲಾಗುತ್ತಿದೆ ಹಾಗೂ ವಿವಿಧ ರಾಜ್ಯಗಳ ವಿಶೇಷ ಉಪಾಹಾರ ಯಾವುದು ಎಂಬುದನ್ನು ತಿಳಿಯೋಣ.
icon

(1 / 8)

ಭಾರತವು ಆಹಾರ ವೈವಿಧ್ಯಕ್ಕೆ ಹೆಸರುವಾಸಿ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಾರತದಲ್ಲಿ ಭಿನ್ನ ಆಹಾರ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ದೇಶದ ಯಾವ ರಾಜ್ಯದಲ್ಲಿ ಯಾವ ಆಹಾರ ಕ್ರಮ ಅನುಸರಿಸಲಾಗುತ್ತಿದೆ ಹಾಗೂ ವಿವಿಧ ರಾಜ್ಯಗಳ ವಿಶೇಷ ಉಪಾಹಾರ ಯಾವುದು ಎಂಬುದನ್ನು ತಿಳಿಯೋಣ.(Pinterest)

ಪೋಹಾ ಅಥವಾ ಅವಲಕ್ಕಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಜನಪ್ರಿಯ ಉಪಾಹಾರ ಖಾದ್ಯವೇ ಅವಲಕ್ಕಿ ಉಪ್ಪಿಟ್ಟು. ದಪ್ಪ ಅವಲಕ್ಕಿಗೆ ಈರುಳ್ಳಿ, ಸಾಸಿವೆ, ಅರಿಶಿನ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಹಾಕಿ ತಯಾರಿಸಲಾಗುತ್ತದೆ. ಇದಕ್ಕೆ ಕಡಲೆಕಾಯಿ, ಹಸಿ ಮೆಣಸು ಸೇರಿಸಬಹುದು. ಹಸಿರು ಚಟ್ನಿಯೊಂದಿಗೆ ಅವಲಕ್ಕಿಯ ಈ ಉಪಾಹಾರ ಹೆಚ್ಚು ರುಚಿ.
icon

(2 / 8)

ಪೋಹಾ ಅಥವಾ ಅವಲಕ್ಕಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಜನಪ್ರಿಯ ಉಪಾಹಾರ ಖಾದ್ಯವೇ ಅವಲಕ್ಕಿ ಉಪ್ಪಿಟ್ಟು. ದಪ್ಪ ಅವಲಕ್ಕಿಗೆ ಈರುಳ್ಳಿ, ಸಾಸಿವೆ, ಅರಿಶಿನ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಹಾಕಿ ತಯಾರಿಸಲಾಗುತ್ತದೆ. ಇದಕ್ಕೆ ಕಡಲೆಕಾಯಿ, ಹಸಿ ಮೆಣಸು ಸೇರಿಸಬಹುದು. ಹಸಿರು ಚಟ್ನಿಯೊಂದಿಗೆ ಅವಲಕ್ಕಿಯ ಈ ಉಪಾಹಾರ ಹೆಚ್ಚು ರುಚಿ.

ಆಲೂ ಪರಾಠಾ (ಪಂಜಾಬ್): ಪಂಜಾಬ್ ಮೂಲದ ಆಲೂ ಪರಾಟಾ ಬೇಗನೆ ಹೊಟ್ಟೆ ತುಂಬಿಸುವ ಉಪಾಹಾರದ ಆಯ್ಕೆಯಾಗಿದೆ. ಪಾರಾಠಕ್ಕೆ ಮಸಾಲೆಯುಕ್ತ ಆಲೂಗಡ್ಡೆಯನ್ನು ಸ್ಟಫ್‌ ಮಾಡಿ ತಯಾರಿಸಲಾಗುತ್ತದೆ. ತುಪ್ಪದೊಂದಿಗೆ ಕಾಯಿಸಿ  ಮೊಸರು, ಉಪ್ಪಿನಕಾಯಿ ಅಥವಾ ಬೆಣ್ಣೆಯೊಂದಿಗೆ ಬಡಿಸಲಾಗುತ್ತದೆ.
icon

(3 / 8)

ಆಲೂ ಪರಾಠಾ (ಪಂಜಾಬ್): ಪಂಜಾಬ್ ಮೂಲದ ಆಲೂ ಪರಾಟಾ ಬೇಗನೆ ಹೊಟ್ಟೆ ತುಂಬಿಸುವ ಉಪಾಹಾರದ ಆಯ್ಕೆಯಾಗಿದೆ. ಪಾರಾಠಕ್ಕೆ ಮಸಾಲೆಯುಕ್ತ ಆಲೂಗಡ್ಡೆಯನ್ನು ಸ್ಟಫ್‌ ಮಾಡಿ ತಯಾರಿಸಲಾಗುತ್ತದೆ. ತುಪ್ಪದೊಂದಿಗೆ ಕಾಯಿಸಿ  ಮೊಸರು, ಉಪ್ಪಿನಕಾಯಿ ಅಥವಾ ಬೆಣ್ಣೆಯೊಂದಿಗೆ ಬಡಿಸಲಾಗುತ್ತದೆ.(Pinterest)

ಚೋಲೆ ಭತೂರೆ (ಪಂಜಾಬ್): ಪಂಜಾಬಿನ ಜನಪ್ರಿಯ ಉಪಾಹಾರ ಚೋಲೆ ಭತೂರೆ. ಮಸಾಲೆಯುಕ್ತ ಕಡಲೆ ಪಲ್ಯವನ್ನು (ಚೋಲೆ) ಡೀಪ್ ಫ್ರೈ ಮಾಡಿದ ಬ್ರೆಡ್ (ಭತೂರೆ) ಜೊತೆಗೆ ಬಡಿಸಲಾಗುತ್ತದೆ. ಈ ರುಚಿಕರವಾದ ಖಾದ್ಯವು ಪಂಜಾಬಿಗರ ಟ್ರೇಡ್‌ ಮಾರ್ಕ್‌ನಂತಿದೆ.
icon

(4 / 8)

ಚೋಲೆ ಭತೂರೆ (ಪಂಜಾಬ್): ಪಂಜಾಬಿನ ಜನಪ್ರಿಯ ಉಪಾಹಾರ ಚೋಲೆ ಭತೂರೆ. ಮಸಾಲೆಯುಕ್ತ ಕಡಲೆ ಪಲ್ಯವನ್ನು (ಚೋಲೆ) ಡೀಪ್ ಫ್ರೈ ಮಾಡಿದ ಬ್ರೆಡ್ (ಭತೂರೆ) ಜೊತೆಗೆ ಬಡಿಸಲಾಗುತ್ತದೆ. ಈ ರುಚಿಕರವಾದ ಖಾದ್ಯವು ಪಂಜಾಬಿಗರ ಟ್ರೇಡ್‌ ಮಾರ್ಕ್‌ನಂತಿದೆ.(HT Photo/Abhinav Saha)

ಇಡ್ಲಿ-ಸಾಂಬಾರ್ (ತಮಿಳುನಾಡು): ದಕ್ಷಿಣ ಭಾರತದಲ್ಲಿ ತುಂಬಾ ಜನಪ್ರಿಯವಾಗಿರು ಇಡ್ಲಿ ಸಾಂಬಾರ್‌ ತಮಿಳುನಾಡಿನ ಪ್ರಮುಖ ಉಪಾಹಾರ. ತರಕಾರಿ ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಇಡ್ಲಿ ಸವಿಯುವುದೇ ಸ್ವರ್ಗ.
icon

(5 / 8)

ಇಡ್ಲಿ-ಸಾಂಬಾರ್ (ತಮಿಳುನಾಡು): ದಕ್ಷಿಣ ಭಾರತದಲ್ಲಿ ತುಂಬಾ ಜನಪ್ರಿಯವಾಗಿರು ಇಡ್ಲಿ ಸಾಂಬಾರ್‌ ತಮಿಳುನಾಡಿನ ಪ್ರಮುಖ ಉಪಾಹಾರ. ತರಕಾರಿ ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಇಡ್ಲಿ ಸವಿಯುವುದೇ ಸ್ವರ್ಗ.(Unsplash)

ಮಿಸಾಲ್ ಪಾವ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಮಸಾಲೆಯುಕ್ತ ಮತ್ತು ರುಚಿಕರವಾದ ಉಪಾಹಾರ ಮಿಸಾಲ್ ಪಾವ್. ಮಸಾಲೆ ತುಂಬಿರುವ ಗ್ರೇವಿಯಲ್ಲಿ ಮೊಳಕೆಯೊಡೆದ ಕಾಳುಗಳನ್ನು ಬೇಯಿಸಿ ತಯಾರಿಸಲಾಗುತ್ತದೆ. ಇದಕ್ಕೆ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಕೂಡಾ ಸೇರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಾವ್ (ಬ್ರೆಡ್ ರೋಲ್) ನೊಂದಿಗೆ ಬಡಿಸಲಾಗುತ್ತದೆ.
icon

(6 / 8)

ಮಿಸಾಲ್ ಪಾವ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಮಸಾಲೆಯುಕ್ತ ಮತ್ತು ರುಚಿಕರವಾದ ಉಪಾಹಾರ ಮಿಸಾಲ್ ಪಾವ್. ಮಸಾಲೆ ತುಂಬಿರುವ ಗ್ರೇವಿಯಲ್ಲಿ ಮೊಳಕೆಯೊಡೆದ ಕಾಳುಗಳನ್ನು ಬೇಯಿಸಿ ತಯಾರಿಸಲಾಗುತ್ತದೆ. ಇದಕ್ಕೆ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಕೂಡಾ ಸೇರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಾವ್ (ಬ್ರೆಡ್ ರೋಲ್) ನೊಂದಿಗೆ ಬಡಿಸಲಾಗುತ್ತದೆ.(Unspalsh.)

ಉಪ್ಮಾ (ದಕ್ಷಿಣ ಭಾರತ): ದಕ್ಷಿಣ ಭಾರತದಾದ್ಯಂತ ಉಪ್ಮಾ ಹೆಸರುವಾಸಿ. ರವೆಯಿಂದ ಸುಲಭವಾಗಿ ತಯಾರಿಸಬಹುದಾದ ಖಾರದ ಗಂಜಿಯಾಗೆ, ಒಗ್ಗರಣೆ ಹಾಕಿ ಬಡಿಸಲಾಗುತ್ತದೆ. ಇದಕ್ಕೆ ಕ್ಯಾರೆಟ್‌ನಂಥ ತರಕಾರಿಗಳನ್ನು ಕೂಡಾ ಸೇರಿಸಬಹುದು.
icon

(7 / 8)

ಉಪ್ಮಾ (ದಕ್ಷಿಣ ಭಾರತ): ದಕ್ಷಿಣ ಭಾರತದಾದ್ಯಂತ ಉಪ್ಮಾ ಹೆಸರುವಾಸಿ. ರವೆಯಿಂದ ಸುಲಭವಾಗಿ ತಯಾರಿಸಬಹುದಾದ ಖಾರದ ಗಂಜಿಯಾಗೆ, ಒಗ್ಗರಣೆ ಹಾಕಿ ಬಡಿಸಲಾಗುತ್ತದೆ. ಇದಕ್ಕೆ ಕ್ಯಾರೆಟ್‌ನಂಥ ತರಕಾರಿಗಳನ್ನು ಕೂಡಾ ಸೇರಿಸಬಹುದು.

ಧೋಕ್ಲಾ (ಗುಜರಾತ್): ಗುಜರಾತ್‌ನ ಲಘು ಉಪಾಹಾರವಾದ ಧೋಕ್ಲಾ, ಹುದುಗಿಸಿದ ಅಕ್ಕಿ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಈ ಖಾರ ತಿನಿಸಿಗೆ ಮೇಲಿನಿಂದ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಹಾಕಲಾಗುತ್ತದೆ.
icon

(8 / 8)

ಧೋಕ್ಲಾ (ಗುಜರಾತ್): ಗುಜರಾತ್‌ನ ಲಘು ಉಪಾಹಾರವಾದ ಧೋಕ್ಲಾ, ಹುದುಗಿಸಿದ ಅಕ್ಕಿ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಈ ಖಾರ ತಿನಿಸಿಗೆ ಮೇಲಿನಿಂದ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಹಾಕಲಾಗುತ್ತದೆ.(Pinterest)


IPL_Entry_Point

ಇತರ ಗ್ಯಾಲರಿಗಳು