ಓದಿದ್ದು ಮರೆತು ಹೋಗುತ್ತಿದ್ದರೆ ಚಿಂತೆ ಬೇಡ; ವಿದ್ಯಾರ್ಥಿಗಳ ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಓದಿದ್ದು ಮರೆತು ಹೋಗುತ್ತಿದ್ದರೆ ಚಿಂತೆ ಬೇಡ; ವಿದ್ಯಾರ್ಥಿಗಳ ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳಿವು

ಓದಿದ್ದು ಮರೆತು ಹೋಗುತ್ತಿದ್ದರೆ ಚಿಂತೆ ಬೇಡ; ವಿದ್ಯಾರ್ಥಿಗಳ ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳಿವು

ವಿದ್ಯಾರ್ಥಿಗಳಿಗೆ ತಾವು ಓದಿದ್ದು ಮರೆತುಹೋಗುತ್ತದೆ ಏನು ಮಾಡುವುದು ಎಂದು ತೋಚದಿರಬಹುದು. ಸ್ಮರಣಶಕ್ತಿ ಹೆಚ್ಚಿಸಲು ಆರೋಗ್ಯಕರ ಆಹಾರ ಸೇವಿಸುವುದು ಕೂಡ ಬಹಳ ಮುಖ್ಯ. ಇಲ್ಲಿ ತಿಳಿಸಿರುವ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕಶಕ್ತಿ, ಏಕಾಗ್ರತೆ ಇತ್ಯಾದಿಗೆ ಸಹಾಯಕವಾಗಿದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಮಕ್ಕಳ ಸ್ಮರಣಶಕ್ತಿ ಹೆಚ್ಚಿಸಲು ಏನು ಮಾಡುವುದು ಎಂಬ ಚಿಂತೆ ಹಲವು ಪೋಷಕರನ್ನು ಕಾಡುತ್ತಿರಬಹುದು. ಮಕ್ಕಳು ಮಾತ್ರವಲ್ಲ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕೂಡ ಓದಿದ್ದು ನೆನಪಿರುವುದಿಲ್ಲ ಎಂದು ಹೇಳುವುದನ್ನು ಕೇಳಿರಬಹುದು. ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ ಹೆಚ್ಚಲು ಏನು ಮಾಡಬೇಕು? ಸ್ಮರಣಶಕ್ತಿ ಅಂದರೆ ಮೆದುಳಿಗೆ ಸಂಬಂಧಿಸಿದ್ದು. ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಪೌಷ್ಟಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಆಹಾರಗಳನ್ನು ಸೇವಿಸುವುದರಿಂದ ಬುದ್ಧಿಶಕ್ತಿ ಹೆಚ್ಚಾಗಬಹುದು. ವಿದ್ಯಾರ್ಥಿಗಳು ಪೌಷ್ಠಿಕಾಂಶ ಭರಿತ ಆಹಾರವನ್ನು ಸೇವಿಸದಿದ್ದರೆ ಹಾಗೂ ಜಂಕ್ ಫುಡ್ ಅನ್ನು ಹೆಚ್ಚು ತಿನ್ನುವುದರಿಂದ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. 
icon

(1 / 10)

(Pinterest )

ಎಲ್ಲಾ ಅಗತ್ಯ ಪೋಷಕಾಂಶಗಳೊಂದಿಗೆ ಸಮತೋಲಿತ ಆಹಾರವನ್ನು ತಿನ್ನುವುದರಿಂದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ವಯಸ್ಕರಿಗೆ ಅರಿವಿನ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಿದ್ದರೆ ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ 6 ಆಹಾರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
icon

(2 / 10)

(Canva)

ಮೊಟ್ಟೆ: ಅತ್ಯಂತ ಪೌಷ್ಟಿಕಾಂಶದ ಆಹಾರಗಳಲ್ಲಿ ಮೊಟ್ಟೆಯೂ ಒಂದು. ಮೆದುಳಿನ ಬೆಳವಣಿಗೆ ಮತ್ತು ಅರಿವಿನ ಕಾರ್ಯನಿರ್ವಹಣೆಗೆ ಪ್ರಮುಖವಾದ ಕೋಲೀನ್, ವಿಟಮಿನ್ ಬಿ 12, ಪ್ರೋಟೀನ್ ಮತ್ತು ಸೆಲೆನಿಯಂನಂತಹ ಪೋಷಕಾಂಶಗಳು ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಕೋಲೀನ್ ಮೆದುಳಿನ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿದೆ. ಬೆಳಗ್ಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆ, ಆಮ್ಲೆಟ್‌ ಇತ್ಯಾದಿ ಮೊಟ್ಟೆ ಖಾದ್ಯ ತಿನ್ನುವುದು ಉತ್ತಮ. 
icon

(3 / 10)

ಮೊಸರು: ಇದೊಂದು ಸೂಪರ್ ಫುಡ್ ಎಂದರೆ ತಪ್ಪಿಲ್ಲ. ಮೆದುಳಿನ ಕಾರ್ಯಕ್ಕೆ ಆರೋಗ್ಯಕರ ಕೊಬ್ಬು ಅತ್ಯಗತ್ಯ. ಮೊಸರಿನಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಇದೆ. ಪ್ರತಿದಿನ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇವು ಪಾಲಿಫಿನಾಲ್‌ಗಳನ್ನು ಸಹ ಹೊಂದಿರುತ್ತವೆ. ಈ ಪೋಷಕಾಂಶಗಳು ಮೆದುಳಿನ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಮಾನಸಿಕ ತೀಕ್ಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.
icon

(4 / 10)

ಸೊಪ್ಪು ತರಕಾರಿಗಳು: ಪೌಷ್ಟಿಕಾಂಶದ ಆಗರವಾಗಿರುವ ಸೊಪ್ಪು ತರಕಾರಿ ಸೇವನೆಯು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ. ಇವುಗಳಲ್ಲಿ ಪಾಲಕ್ ಸೊಪ್ಪು, ಎಲೆಕೋಸ್, ಹರಿವೆ ಸೊಪ್ಪು ತಿನ್ನುವುದು ಉತ್ತಮ. ಇವು ಮೆದುಳನ್ನು ರಕ್ಷಿಸುವ ಪದಾರ್ಥಗಳಾದ ಫೋಲೇಟ್, ಫ್ಲೇವನಾಯ್ಡ್, ಕ್ಯಾರೊಟಿನಾಯ್ಡ್ ಮತ್ತು ವಿಟಮಿನ್ ಇ ಮತ್ತು ಕೆ 1 ಅನ್ನು ಹೊಂದಿರುತ್ತವೆ. ಇವು ಅರಿವಿನ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು.
icon

(5 / 10)

ಮೀನು: ಮೀನು ತಿನ್ನುವವರು ಬುದ್ಧಿವಂತರಾಗಿರುತ್ತಾರೆ ಎಂಬ ಜನಜನಿತ ಮಾತುಗಳನ್ನು ನೀವು ಕೇಳಿರಬಹುದು. ಮೀನು ತಿನ್ನುವುದರಿಂದ ನಿಜವಾಗಲೂ ನೆನಪಿನಶಕ್ತಿ ವೃದ್ಧಿಗೆ ಸಹಾಯಕವಾಗಿದೆ. ಇದರಲ್ಲಿ ವಿಟಮಿನ್ ಡಿ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು, ಇದು ಅರಿವಿನ ಕ್ಷೀಣತೆ ಮತ್ತು ನೆನಪಿನ ಶಕ್ತಿ ನಷ್ಟದಿಂದ ಮೆದುಳನ್ನು ರಕ್ಷಿಸುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ಸಾಲ್ಮನ್ ಮತ್ತು ಸಾರ್ಡೀನ್‌ ಮೀನುಗಳಲ್ಲಿ ಇದು ಹೇರಳವಾಗಿವೆ.
icon

(6 / 10)

ಒಣಹಣ್ಣುಗಳು ಮತ್ತು ಬೀಜಗಳು: ಒಣಹಣ್ಣುಗಳು ಮತ್ತು ಬೀಜಗಳಲ್ಲಿ ವಿಟಮಿನ್ ಇ, ಸತು, ಫೋಲೇಟ್, ಕಬ್ಬಿಣ ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುತ್ತದೆ. ಇವು ಅರಿವಿನ ಕಾರ್ಯಕ್ಷಮತೆಗೆ ಸಂಬಂಧಿಸಿರುವ ಪೋಷಕಾಂಶಗಳಲ್ಲಿ ಹೇರಳವಾಗಿವೆ. ಒಣಹಣ್ಣುಗಳು ಮತ್ತು ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ನಾರಿನಂಶದಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. 
icon

(7 / 10)

ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ನೆನಪಿನ ಶಕ್ತಿ ವೃದ್ಧಿಸಲು ಸಹಾಯಕವಾಗಿದೆ. ಕಿತ್ತಳೆಯಲ್ಲಿ ವಿಶೇಷವಾಗಿ ವಿಟಮಿನ್ ಸಿ ಅಧಿಕವಾಗಿದ್ದು,ಇದು ಮೆದುಳಿನ ಕಾರ್ಯಕ್ಕೆ ಅವಶ್ಯಕವಾಗಿದೆ. ಅಲ್ಲದೆ ಇದು ಏಕಾಗ್ರತೆ, ಅರಿವು, ಸ್ಮರಣಶಕ್ತಿ ಮುಂತಾದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
icon

(8 / 10)

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(10 / 10)

ಇತರ ಗ್ಯಾಲರಿಗಳು