Nitish Kumar Reddy: 8ನೇ ಕ್ರಮಾಂಕದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ನಿತೀಶ್ ಕುಮಾರ್​ ರೆಡ್ಡಿ; ಈ ಸಾಧನೆ ಮಾಡಿದ ಮೊದಲ ಭಾರತೀಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nitish Kumar Reddy: 8ನೇ ಕ್ರಮಾಂಕದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ನಿತೀಶ್ ಕುಮಾರ್​ ರೆಡ್ಡಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

Nitish Kumar Reddy: 8ನೇ ಕ್ರಮಾಂಕದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ನಿತೀಶ್ ಕುಮಾರ್​ ರೆಡ್ಡಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

  • Nitish Kumar Reddy: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆಲ್​ರೌಂಡರ್ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅವರು ಅದ್ಭುತ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರು ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಅವರು, ಮೂರನೇ ದಿನದ ಅಂತ್ಯಕ್ಕೆ ನಿತೀಶ್ 176 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದ್ದಾರೆ.
icon

(1 / 5)

(AP)

8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ನಿತೀಶ್​ ಅವರು ವಾಷಿಂಗ್ಟನ್ ಸುಂದರ್ ಜೊತೆಗೂಡಿ ಭಾರತ ತಂಡವನ್ನು ಫಾಲೋ-ಆನ್​ನಿಂದ ರಕ್ಷಿಸಿದರು. ಸುಂದರ್ ಔಟಾದ ಹೊರತಾಗಿಯೂ ಭರ್ಜರಿ ಪ್ರದರ್ಶನ ನೀಡಿದ ನಿತೀಶ್ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದರು.
icon

(2 / 5)

(AFP)

ಆಸ್ಟ್ರೇಲಿಯಾ ನೆಲದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಟೆಸ್ಟ್​​ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ನಿತೀಶ್ ಕುಮಾರ್ ರೆಡ್ಡಿ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ 8ನೇ ಕ್ರಮಾಂಕದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್​ ಗಳಿಸಿದ ದಾಖಲೆ ಅನಿಲ್ ಕುಂಬ್ಳೆ (87) ಅವರ ಹೆಸರನಲ್ಲಿತ್ತು. ನಿತೀಶ್ ಈಗ ಶತಕ ಗಳಿಸುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ.
icon

(3 / 5)

ಆಸ್ಟ್ರೇಲಿಯಾದಲ್ಲಿ ಕಿರಿಯ ವಯಸ್ಸಿನಲ್ಲಿ ಮೊದಲ ಶತಕ ಗಳಿಸಿದ ಭಾರತೀಯ ಬ್ಯಾಟರ್​​ಗಳ ಪಟ್ಟಿಯಲ್ಲಿ ನಿತೀಶ್ ಮೂರನೇ ಸ್ಥಾನದಲ್ಲಿದ್ದಾರೆ. 1992ರಲ್ಲಿ ಸಚಿನ್ 18 ವರ್ಷ 256 ದಿನಗಳ ವಯಸ್ಸಿನಲ್ಲಿ ಶತಕ ಬಾರಿಸಿದ್ದರು. 2019ರಲ್ಲಿ ರಿಷಭ್ ಪಂತ್ 21 ವರ್ಷ 92 ದಿನಗಳ ವಯಸ್ಸಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಬಾರಿಸಿದ್ದರು. ಈಗ ನಿತೀಶ್ ಕುಮಾರ್ ಆಸ್ಟ್ರೇಲಿಯಾದಲ್ಲಿ 21 ವರ್ಷ 216 ದಿನಗಳ ವಯಸ್ಸಿನಲ್ಲಿ ತಮ್ಮ ಚೊಚ್ಚಲ ಶತಕವನ್ನು ಗಳಿಸಿದ್ದಾರೆ.
icon

(4 / 5)

ನಾಲ್ಕನೇ ಟೆಸ್ಟ್ ನ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದೆ. ನಿತೀಶ್ ಕುಮಾರ್ (ಅಜೇಯ 105) ಮತ್ತು ಮೊಹಮ್ಮದ್ ಸಿರಾಜ್ (2) ಕ್ರೀಸ್​ನಲ್ಲಿದ್ದಾರೆ. ಅವರು ನಾಲ್ಕನೇ ದಿನವೂ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಆದರೆ ಭಾರತ ಇನ್ನೂ 116 ರನ್​ಗಳ ಹಿನ್ನಡೆಯಲ್ಲಿದೆ.
icon

(5 / 5)

ಇತರ ಗ್ಯಾಲರಿಗಳು