ಖಿನ್ನತೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ವಾ; ನಿಮ್ಮ ಮನಸ್ಸಿಗೆ ಶಕ್ತಿ ತುಂಬುವ ಭಗವದ್ಗೀತೆಯ ಸಂದೇಶಗಳಿವು
- ಮನುಷ್ಯನಿಗೆ ಖಿನ್ನತೆ ಆವರಿಸಿದರೆ ಯಾವುದರಲ್ಲೂ ಸಂತೋಷ ಎನ್ನುವುದು ಇರುವುದೇ ಇರುವುದಿಲ್ಲ. ದಿನದಿಂದ ದಿನಕ್ಕೆ ಕುಗ್ಗುತ್ತಾ ಹೋಗುತ್ತಾನೆ. ಜೀವನವೇ ಬೇಸರ ಎನಿಸಲು ಪ್ರಾರಂಭವಾಗುತ್ತದೆ. ಆದ್ದರಿಂದ ಖಿನ್ನತೆಯಿಂದ ಬಳಲುತ್ತಿದ್ದರೆ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ನೆನಪಿಸಿಕೊಳ್ಳಿ. ಸುಂದರ ಜೀವನ ನಿಮ್ಮದಾಗುತ್ತದೆ.
- ಮನುಷ್ಯನಿಗೆ ಖಿನ್ನತೆ ಆವರಿಸಿದರೆ ಯಾವುದರಲ್ಲೂ ಸಂತೋಷ ಎನ್ನುವುದು ಇರುವುದೇ ಇರುವುದಿಲ್ಲ. ದಿನದಿಂದ ದಿನಕ್ಕೆ ಕುಗ್ಗುತ್ತಾ ಹೋಗುತ್ತಾನೆ. ಜೀವನವೇ ಬೇಸರ ಎನಿಸಲು ಪ್ರಾರಂಭವಾಗುತ್ತದೆ. ಆದ್ದರಿಂದ ಖಿನ್ನತೆಯಿಂದ ಬಳಲುತ್ತಿದ್ದರೆ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ನೆನಪಿಸಿಕೊಳ್ಳಿ. ಸುಂದರ ಜೀವನ ನಿಮ್ಮದಾಗುತ್ತದೆ.
(1 / 6)
ಭಗವದ್ಗೀತೆ ಹಿಂದೂಗಳ ಪವಿತ್ರ ಗ್ರಂಥವಾಗಿದೆ. ಇದರಲ್ಲಿ ಧರ್ಮ, ಕರ್ಮ, ಯೋಗ, ಜ್ಞಾನ ಮುಂತಾದವುಗಳ ಬಗ್ಗೆ ವಿವರಿಸಲಾಗಿದೆ. ಇದು ಭಗವಾನ್ ಕೃಷ್ಣ ಮತ್ತು ಅರ್ಜುನರ ನಡುವಿನ ಸಂಭಾಷಣೆಯನ್ನು ಆಧರಿಸಿದೆ. ಒಟ್ಟು 18 ಅಧ್ಯಾಯಗಳಿಂದ ಕೂಡಿರುವ ಭಗವದ್ಗೀತೆಯು ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಹೇಗೆ ಇರಬೇಕು ಮತ್ತು ಏನನ್ನು ಮಾಡಬೇಕು ಎಂಬುದರ ಬಗ್ಗೆ ಹೇಳಲಾಗಿದೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಯುದ್ಧಕ್ಕೆ ಸಿದ್ಧವಾಗಿರುವ ತನ್ನ ಕುಟುಂಬ ಸದಸ್ಯರು, ಗುರುಗಳು ಮತ್ತು ಸ್ನೇಹಿತರನ್ನು ನೋಡಿ ಅರ್ಜುನನು ದುಃಖಿತನಾಗುತ್ತಾನೆ. ಯುದ್ಧದ ಭೀಕರತೆಯನ್ನು ಯೋಚಿಸಿ ಮುಂದೇನಾಗುವುದೋ ಎಂದು ಚಿಂತೆಗೆ ಒಳಗಾಗುತ್ತಾನೆ. ಆಗ ಶ್ರೀಕೃಷ್ಣನು ಅವನಿಗೆ ಜೀವನ, ಕರ್ತವ್ಯ ಮತ್ತು ಧರ್ಮದ ವಿವಿಧ ಅಂಶಗಳನ್ನು ಅರಿವು ಮಾಡಿಕೊಡುತ್ತಾನೆ. ಜೀವನದ ಯಾವುದೋ ಒಂದು ಹಂತದಲ್ಲಿ ಭಯ, ಖಿನ್ನತೆಗಳು ಉಂಟಾಗಿ ಮುಂದಿನ ದಾರಿ ಕಾಣಸಿಗದಿದ್ದಾಗ ಭಗವದ್ಗೀತೆಯ ಸಂದೇಶಗಳು ಸಹಾಯಕ್ಕೆ ಬರುತ್ತವೆ.
(PC: HT File Photo)(2 / 6)
ಖಿನ್ನತೆಯಿಂದ ಹೊರಬರಲು ಭಗವದ್ಗೀತೆಯ ಈ ಉಪದೇಶಗಳನ್ನು ನೆನಪಿಸಿಕೊಳ್ಳಿ:
ಮನುಷ್ಯನ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳು ಯಾವುದಾದರೂ ಒಂದು ಕಾರಣಕ್ಕಾಗಿಯೇ ನಡೆಯುತ್ತದೆ. ಅದು ಒಳ್ಳೆಯದಕ್ಕಾಗಿಯೇ ನಡೆಯುತ್ತದೆ ಮತ್ತು ಅದರಿಂದ ಉತ್ತಮ ಫಲಿತಾಂಶವೇ ಸಿಗುತ್ತದೆ.
(3 / 6)
ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ ಮಾಡುವ ಹಕ್ಕಿದೆ. ಹಾಗೆ ಮಾಡಿದ ಎಲ್ಲಾ ಕೆಲಸದ ಫಲವನ್ನು ನಿರೀಕ್ಷಿಸಬಾರದು. ಏಕೆಂದರೆ ಅತಿಯಾದ ನಿರೀಕ್ಷೆಯು ನೋವಿಗೆ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸಿದೇ ನಿಮ್ಮ ಕೆಲಸವನ್ನು ನೀವು ಮಾಡಿ. ಫಲಿತಾಂಶದ ಚಿಂತೆ ಮಾಡಬೇಡಿ.
(HT File Photo)(4 / 6)
ಬದಲಾವಣೆ ಈ ಜಗದ ನಿಯಮ. ನೀವು ಕ್ಷಣಮಾತ್ರದಲ್ಲಿ ಕೋಟ್ಯಾಧಿಪತಿಯಾಬಹುದು. ಅದೇ ಕಣ್ಣು ಮುಚ್ಚಿ ಬಿಡುವುದರೊಳಗೆ ಬಡವರಾಗಬಹುದು. ಅಂದರೆ ಇಂದು ಸಿರಿವಂತನಾದವನು ನಾಳೆ ಬಡವನಾಗಬಹುದು. ಆದ್ದರಿಂದ ಸಿರಿತನ ಮತ್ತು ಬಡತನ ಇವೆರಡೂ ಕ್ಷಣಿಕವಾಗಿದೆ.
(HT File Photo)(5 / 6)
ಮನುಷ್ಯನು ಈ ಭೂಮಿಗೆ ಬರುವಾಗಲೂ ಬರಿಗೈಯಲ್ಲಿಯೆ ಬಂದಿದ್ದಾನೆ. ಜೀವನ ಯಾತ್ರೆ ಮುಗಿಸಿ ಹೋಗುವಾಗಲೂ ಬರಿಗೈಯಲ್ಲಿಯೇ ಹೋಗುತ್ತಾನೆ. ಆದ್ದರಿಂದ ಜೀವನದಲ್ಲಿ ಆಗದೇ ಇರುವುದಕ್ಕೆ ಅತಿಯಾಗಿ ಚಿಂತಿಸಬಾರದು.
(HT File Photo)ಇತರ ಗ್ಯಾಲರಿಗಳು