ಭಾಗ್ಯಕ್ಕನ ಬಗ್ಗೆ ಚಾರು, ರಚನಾ, ದೃಷ್ಟಿ, ಲಕ್ಷ್ಮೀ, ಸಾಹಿತ್ಯ ಹೇಳಿದ್ದೇನು? ಭಾಗ್ಯಲಕ್ಷ್ಮೀ ಬೆಂಬಲಕ್ಕೆ ನಿಂತ ಸೀರಿಯಲ್‌ ನಟಿಮಣಿಯರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾಗ್ಯಕ್ಕನ ಬಗ್ಗೆ ಚಾರು, ರಚನಾ, ದೃಷ್ಟಿ, ಲಕ್ಷ್ಮೀ, ಸಾಹಿತ್ಯ ಹೇಳಿದ್ದೇನು? ಭಾಗ್ಯಲಕ್ಷ್ಮೀ ಬೆಂಬಲಕ್ಕೆ ನಿಂತ ಸೀರಿಯಲ್‌ ನಟಿಮಣಿಯರು

ಭಾಗ್ಯಕ್ಕನ ಬಗ್ಗೆ ಚಾರು, ರಚನಾ, ದೃಷ್ಟಿ, ಲಕ್ಷ್ಮೀ, ಸಾಹಿತ್ಯ ಹೇಳಿದ್ದೇನು? ಭಾಗ್ಯಲಕ್ಷ್ಮೀ ಬೆಂಬಲಕ್ಕೆ ನಿಂತ ಸೀರಿಯಲ್‌ ನಟಿಮಣಿಯರು

  • Bhagyalakshmi serial: ಭಾಗ್ಯಾಳ ದಿಟ್ಟ ಪಯಣದಿಂದ ಹುರುಪು ಪಡೆದು ಅವಳಂತೆ ಎಲ್ಲ ಎಲ್ಲೆಗಳನ್ನು ದಾಟಬಯಸುವ ಹೆಂಗಳೆಯರ ಕೆಚ್ಚು, ಸ್ಥೈರ್ಯವನ್ನು ಸಂಭ್ರಮಿಸುವುದೇ ನಾನು ಭಾಗ್ಯ ಅಭಿಯಾನದ ಗುರಿ. ಈ ಅಭಿಯಾನಕ್ಕೀಗ ಕಲರ್ಸ್‌ನ ಧಾರಾವಾಹಿಯ ನಾಯಕಿಯರು ಸಾಥ್‌ ನೀಡಿದ್ದಾರೆ. #IAmBhagya ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 ನಾನು ಭಾಗ್ಯ ಅಭಿಯಾನಕ್ಕೀಗ ಕಲರ್ಸ್‌ ಕನ್ನಡ ಧಾರಾವಾಹಿಯ ನಾಯಕಿಯರು ಸಾಥ್‌ ನೀಡಿದ್ದಾರೆ. ಹೀಗಿದೆ ಅವರ ಅನಿಸಿಕೆ ಅಭಿಪ್ರಾಯ. 
icon

(1 / 7)

ನನ್ನ ಮದ್ವೆ ಮಾಡ್ಬೇಕು ಅನ್ನೋದು ನಮ್ಮಪ್ಪನ ಅತೀ ದೊಡ್ಡ ಕನಸಾಗಿತ್ತು. ಆದ್ರೆ, ಯಾರದ್ದೋ ತಪ್ಪಿಂದ ನನ್ನ ಮದ್ವೆ ನಿಂತೋಯ್ತು. ನಿಮ್ಮ ಲೈಫ್‌ಲ್ಲೂ ಹೀಗೀ ಇನ್ಯಾರ್ದೋ ತಪ್ಪಿಂದ ನೀವು ಶಿಕ್ಷೆ ಅನುಭವಿಸೋ ಹಾಗಾಗಿದೆ. ನನಗೆ ನಿಮ್ಮ ನೋವು ಅರ್ಥ ಆಗುತ್ತೆ. ದೇವ್ರು ನಮ್ಮಲ್ಲಿರೋ ತಾಳ್ಮೆ, ಸಹನೆನಾ ಪರೀಕ್ಷೆ ಮಾಡೋಕೆ ಅಂತಾನೇ ಕಷ್ಟಗಳನ್ನ ಕೊಡ್ತಾನೆ. ಹಾಗೇ ಅದನ್ನು ಎದುರಿಸೋ ದಾರೀನೂ ತೋರಿಸ್ತಾನೆ. ದೈರ್ಯವಾಗಿರಿ ಭಾಗ್ಯಕ್ಕ ಎಂಬುದು ಕರಿಮಣಿ ಸೀರಿಯಲ್‌ ಸಾಹಿತ್ಯ ಮಾತು. 
icon

(2 / 7)

ನಂಬಿದವರೇ ಮೋಸ ಮಾಡಿದಾಗ ಸಾಯುವಷ್ಟು ನೋವಾಗುತ್ತೆ. ಹಾಗಾದಾಗ, ಯಾರನ್ನು ನಂಬೋದು ಯಾರನ್ನು ಬಿಡೋದು ಅನ್ನೋ ಪರಿಸ್ಥಿತಿ ಎದುರಾಗುತ್ತೆ. ಎಲ್ಲಾ ದಾರಿ ಎಲ್ಲ ಬಾಗಲುಗಳು ಶಾಶ್ವತವಾಗಿ ಮುಚ್ಚಿ, ಇನ್ನೇನು ಬದುಕೇ ಮುಗಿದು ಹೋಯ್ತು ಅನ್ನುತ್ತೆ ನಿಮ್ಮದೀಗ ಅಂಥದ್ದೇ ಸ್ಥಿತಿ. ಹೆದರ್ಬೇಡಿ, ದಾರಿ ಸಿಕ್ಕೇ ಸಿಗುತ್ತೆ. ಯಾರೂ ನಿರೀಕ್ಷಿಸಿರದ ಬದುಕು ನಿಮ್ಮದಾಗುತ್ತೆ. ಧೈರ್ಯವಾಗಿರು ಭಾಗ್ಯಕ್ಕ ಎಂಬುದು ನಿನಗಾಗಿ ಧಾರಾವಾಹಿ ನಾಯಕಿ ರಚನಾ ಮಾತು. 
icon

(3 / 7)

ಪ್ರೀತಿ ಜೀವನ ಕೊಡುತ್ತೆ. ಅದೇ ಪ್ರೀತಿ ಸಿಗದಿದ್ದಾಗ ಜೀವನ ಮರೀಚಿಕೆ ಅನ್ಸುತ್ತೆ. ಹೆಣ್ಣಿಗೆ ಪ್ರೀತ್ಸೋದು ಗೊತ್ತು. ಆ ಪ್ರೀತಿಗೆ ಬೆಲೆ ಸಿಗದಿದ್ದಾಗ ಸ್ವಾಭಿಮಾನದಿಂದ ಬದುಕೋದು ಗೊತ್ತು. ಅಂಥಾ ಸ್ವಾಭಿಮಾನಿ ನೀವಾಗ್ಬೇಕು ಭಾಗ್ಯಕ್ಕ. ಧೈರ್ಯವಾಗಿರು ಭಾಗ್ಯಕ್ಕ ಎಂಬುದು ಶ್ರೀಗೌರಿ ಧಾರಾವಾಹಿಯ ಗೌರಿಯ ಮಾತು. 
icon

(4 / 7)

ದಿಕ್ಕೇ ಕಾಣದೇ ಕಂಗಾಲಾದಾಗ ದಾರಿ ತೋರಿಸ್ದೋಳು ನೀನು. ಏನೇ ಬರಲಿ ಧೈರ್ಯವಾಗಿ ನಿಲ್ಲೋಕೆ ಸ್ಫೂರ್ತಿ ಆದೋಳು ನೀನು. ಕತ್ತಲಲ್ಲಿರೋರಿಗೆ ಬೆಳಕಾದೋಳು ನೀನು. ಈಗ ಕತ್ತಲೇ ತುಂಬಿರೋ ನಿನ್‌ ಜೀವನಕ್ಕೆ ಭರವಸೆಯ ಬೆಳಕನ್ನ ನೀನು ತುಂಬ್ಲೇಬೇಕು. ಎಲ್ಲಾರಿಗೋಸ್ಕರ ಬದುಕುವಾಗ, ನಮಗೋಸ್ಕರ ಬದುಕ್ಬೇಕು. ನನ್ನ ಜೀವನನಾ ದಡ ಸೇರಿಸೋಕೆ ಅಂತ ನೀನೆಷ್ಟು ಒದ್ದಾಡ್ದೆ ನೆನಪಿದ್ಯಾ? ಈಗ ನೀನು ನಿನ್ನ ಜೀವನನಾ ದಡ ಸೇರಿಸ್ಬೇಕು. ಸೇರಿಸ್ತ್ಯಾ ತಾನೇ? ಎಂಬುದು ಲಕ್ಷ್ಮೀ ಬಾರಮ್ಮ ಸೀರಿಯಲ್‌ ಲಕ್ಷ್ಮೀ ಮಾತು. 
icon

(5 / 7)

ನಾನು ನೋಡಿದ ಬಹಳ ದೊಡ್ಡ ಆಶಾವಾದಿ ಅಂದ್ರೆ ನೀವೇ ಭಾಗ್ಯಕ್ಕ. ಸವಾಲು ಎಂಥದ್ದೇ ಆದ್ರೂ ಧೈರ್ಯಗೆಡದೇ, ಗೆದ್ದೋರು ನೀವು. ಆದ್ರೆ ಈ ಒಂದು ತಿರಸ್ಕಾರ ನಿಮ್ಮ ಜೀವನವನ್ನು ನಿಲ್ಲಿಸ್ಬಾರ್ದು, ಕತ್ತಲೆ ಕವಿದಿರೋ ನಿಮ್ಮ ಬದುಕಲ್ಲಿ ನೀವೀಗ, ಮಿಂಚುಹುಳುವಾಗಿ ಮಿನುಗಬೇಕು. ಅದು ನನ್ನ ಉಪದೇಶ ಅಲ್ಲ, ನನ್ನ ವಿಶ್ವಾಸ. ಧೈರ್ಯವಾಗಿರು ಭಾಗ್ಯಕ್ಕೆ ಎಂಬುದು ರಾಮಾಚಾರಿಯ ಚಾರು ಮಾತು. 
icon

(6 / 7)

ಚಿಕ್ಕ ವಯಸ್ಸಿನಿಂದಲೂ ನಾನು ಬೇರೆಯವರಿಗೋಸ್ಕರ ಮುಖಕ್ಕೆ ಮಸಿ ಬಳ್ಕೊಂಡೇ ಬೆಳೆದೆ. ಯಾರೂ ನನಗೆ ಏನು ಬೇಕು ಅಂತ ಕೇಳೇ ಇಲ್ಲ. ಹಾಗಂತ ನಾನು ನಗೋದು ನಿಲ್ಲಿಸಿಲ್ಲ. ನಿನಗೂ ಹಾಗೇ ಅಲ್ವಾ ಭ್ಯಾಗಕ್ಕ? ಯಾವತ್ತೂ ಯಾರೂ ನಿನಗೆ ಏನು ಬೇಕು ಅಂತ ಕೇಳಿದ್ದೇ ಇಲ್ಲ. ಮನೆ, ಸಂಸಾರ ಅಂತ ಬರೀ ಅವರಿಗೋಸ್ಕರನೇ ನೀನು ಜೀವ ತೇಯ್ದೆ, ಈಗ ನೀನು ನಿನಗೋಸ್ಕರ ಬದುಕೋ ಟೈಮ್‌ ಬಂದಿದೆ. ನಿನಗೆ ಹೇಗೆ ಬೇಕೋ ಹಾಗೇ ಬದುಕುಕೋ ಟೈಮ್. ಧೈರ್ಯವಾಗಿರು ಭಾಗ್ಯಕ್ಕೆ ಎಂದಿದ್ದಾಳೆ ದೃಷ್ಟಿಬೊಟ್ಟು ಸೀರಿಯಲ್‌ ದೃಷ್ಟಿ. 
icon

(7 / 7)

ಇತರ ಗ್ಯಾಲರಿಗಳು