Bhagyalakshmi Serial: ತನ್ವಿ ಕಾರಣಕ್ಕೆ ಜಗಳ ಆಡಿದ ತಾಂಡವ್, ಶ್ರೇಷ್ಠಾ; ನೊಂದ ಭಾಗ್ಯಾಳಿಗೆ ಸಮಾಧಾನ ಹೇಳಿದ ಮಾವ
- Bhagyalakshmi Serial: ತನ್ವಿ ಕಾರಣಕ್ಕಾಗಿ ತಾಂಡವ್ ಹಾಗೂ ಶ್ರೇಷ್ಠಾ ಜಗಳ ಮಾಡಿಕೊಂಡಿದ್ದಾರೆ. ಇತ್ತ ಭಾಗ್ಯಾ ಬೇಸರ ಮಾಡಿಕೊಂಡು ಅಳುತ್ತಿದ್ದಾಳೆ.
- Bhagyalakshmi Serial: ತನ್ವಿ ಕಾರಣಕ್ಕಾಗಿ ತಾಂಡವ್ ಹಾಗೂ ಶ್ರೇಷ್ಠಾ ಜಗಳ ಮಾಡಿಕೊಂಡಿದ್ದಾರೆ. ಇತ್ತ ಭಾಗ್ಯಾ ಬೇಸರ ಮಾಡಿಕೊಂಡು ಅಳುತ್ತಿದ್ದಾಳೆ.
(1 / 8)
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತನ್ವಿ ತನ್ನ ಕಲಿಕೆಗಾಗಿ ಹಣ ಬೇಕು ಎಂದು ಕೇಳುತ್ತಾಳೆ. ಆದರೆ ಭಾಗ್ಯಾಳ ಬಳಿ ಹಣ ಇರುವುದಿಲ್ಲ.
(Colors Kannada)(2 / 8)
ಅದೇ ನೋವಲ್ಲಿ ಭಾಗ್ಯಾ ಕೊರಗುತ್ತಾಳೆ. ಮಗಳು ಕೇಳಿದಾಗ ಕೊಡಲು ನನ್ನಲ್ಲಿ ಹಣ ಇಲ್ಲವಲ್ಲ ಎಂದೇ ಬೇಸರಿಕೊಂಡಿರುತ್ತಾಳೆ.
(Colors Kannada)(3 / 8)
ಆಗ ಅವಳ ಮಾವ ಬಂದು ಸಮಾಧಾನ ಮಾಡುತ್ತಾರೆ. “ನನಗೆ ಗೊತ್ತು ಭಾಗ್ಯ ನೀನು ಯಾಕೆ ಅಳ್ತಾ ಇದೀಯಾ ಅಂತ. ಸಮಾಧಾನ ಮಾಡ್ಕೊ” ಎಂದು ಸಾಂತ್ವನ ಹೇಳುತ್ತಾರೆ. ತಾಂಡವ್ ಎಂತವನು ಎನ್ನುವ ವಿಚಾರ ಅವರಿಗೇನೂ ಹೊಸದಲ್ಲ.
(Colors Kannada)(4 / 8)
ಹಣಕ್ಕಿಂತ ಹೆಚ್ಚಾಗಿ ತಾಂಡವ್ ಮಾತಿನಿಂದ ಭಾಗ್ಯಾಳಿಗೆ ಅವಮಾನ ಆಗಿದೆ, ಬೇಸರ ಆಗಿದೆ ಎನ್ನುವ ವಿಚಾರವನ್ನು ಮಾವ ಅರ್ಥ ಮಾಡಿಕೊಂಡು ಸಮಾಧಾನ ಮಾಡುತ್ತಾರೆ.
(Colors Kannada)(5 / 8)
ಇತ್ತ ಖುಷಿಯಿಂದ ತಾಂಡವ್ ತನ್ವಿ ಜತೆ ಚಾಟ್ ಮಾಡುತ್ತಾ ಇರುತ್ತಾನೆ. ಆಗ ಅಲ್ಲಿಗೆ ಶ್ರೇಷ್ಠಾ ಬರುತ್ತಾಳೆ.
(Colors Kannada)(6 / 8)
ಅವಳು ತಾಂಡವ್ ಜತೆ ಮಾತಾಡುತ್ತಾ ಇದ್ದರೂ ತಾಂಡವ್‌ಗೆ ಮಾತ್ರ ಶ್ರೇಷ್ಠಾ ಮಾತಾಡಿದ್ದು ಕೇಳಿಸುವುದಿಲ್ಲ. ಅವನು ಅಷ್ಟು ಮೊಬೈಲ್‌ನಲ್ಲಿ ಮುಳುಗಿರುತ್ತಾನೆ.
(Colors Kannada)(7 / 8)
ಅದೇ ಕಾರಣಕ್ಕೆ ಕೋಪ ಮಾಡಿಕೊಂಡು ಶ್ರೇಷ್ಠಾ ತಾಂಡವ್ ಜತೆ ಕೂಗಾಡುತ್ತಾಳೆ. ತಾಂಡವ್ ತನ್ವಿಗೆ ಹಣ ಕೊಟ್ಟ ವಿಚಾರ ಅವಳಿಗೆ ಗೊತ್ತಾಗುತ್ತದೆ.
(Colors Kannada)ಇತರ ಗ್ಯಾಲರಿಗಳು