Kannada Reality Show TRP: ಕನ್ನಡ ಕಿರುತೆರೆಯ ನಾನ್ ಫಿಕ್ಷನ್‌ನಲ್ಲಿ ಯಾರು ಟಾಪರ್? ಹೀಗಿದೆ ರಿಯಾಲಿಟಿ ಶೋಗಳ ಟಿಆರ್‌ಪಿ ರೇಟಿಂಗ್ಸ್
- Kannada Reality Show TRP: ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ವಾರಾಂತ್ಯಕ್ಕೆ ವೀಕ್ಷಕರ ಗಮನ ಸೆಳೆಯುತ್ತಿವೆ. ಆ ಪೈಕಿ ಜೀ ಕನ್ನಡದಿಂದ ಸರಿಗಮಪ ಮತ್ತು ಭರ್ಜರಿ ಬ್ಯಾಚುಲರ್ಸ್ 2 ರಂಜಿಸುತ್ತಿದ್ದರೆ, ಕಲರ್ಸ್ ಕನ್ನಡದಲ್ಲಿ ಮಜಾ ಟಾಕೀಸ್ ಮತ್ತು ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಗಮನಸೆಳೆಯುತ್ತಿವೆ. ಈ 4 ಶೋಗಳ 10ನೇ ವಾರದ ಟಿಆರ್‌ಪಿ ಹೀಗಿದೆ.

(1 / 6)
ನಾನ್ ಫಿಕ್ಷನ್ ವಿಭಾಗದಲ್ಲಿ ಜೀ ಕನ್ನಡ ಮತ್ತು ಕಲರ್ಸ್ ಕನ್ನಡದ ನಾಲ್ಕು ರಿಯಾಲಿಟಿ ಶೋಗಳ 10ನೇ ವಾರದ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದ್ದು, ನಾಲ್ಕರಲ್ಲಿ ಯಾರು ಟಾಪ್? ಇಲ್ಲಿದೆ ಮಾಹಿತಿ.
(2 / 6)
ಕನ್ನಡ ಕಿರುತೆರೆಯ ನಂಬರ್ 1 ರಿಯಾಲಿಟಿ ಶೋ ಎಂಬ ಖ್ಯಾತಿ ಪಡೆದಿದೆ ಜೀ ಕನ್ನಡದ ಸರಿಗಮಪ ಸಿಂಗಿಂಗ್ ಶೋ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ತೀರ್ಪುಗಾರರಾಗಿರುವ ಈ ಶೋನಲ್ಲಿ ಆಂಕರ್ ಅನುಶ್ರೀ ಸಹ ಪ್ರಮುಖ ಆಕರ್ಷಣೆ.
(3 / 6)
ಈ ಸಿಂಗಿಂಗ್ ಶೋ 10ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ ಎಂದಿನಂತೆ ಮೊದಲ ಸ್ಥಾನದಲ್ಲಿದೆ. 8.3 ಟಿಆರ್‌ಪಿ ಪಡೆಯುವ ಮೂಲಕ ಟಾಪ್ ಸ್ಥಾನದಲ್ಲಿದೆ.
(4 / 6)
ಅದೇ ರೀತಿ ಜೀ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಸಹ ಒಳ್ಳೆಯ ರೇಟಿಂಗ್ ಪಡೆಯುತ್ತಿದೆ. 10ನೇ ವಾರದ ಟಿಆರ್‌ಪಿಯಲ್ಲಿ ಈ ಶೋ 7.8 ಟಿವಿಆರ್ ಪಡೆದು ಎರಡನೇ ಸ್ಥಾನದಲ್ಲಿದೆ. ರವಿಚಂದ್ರನ್, ರಚಿತಾ ರಾಮ್ ತೀರ್ಪುಗಾರರಾಗಿರುವ ಈ ಶೋವನ್ನು ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ.
(5 / 6)
ಅದೇ ರೀತಿ ಕಲರ್ಸ್ ಕನ್ನಡದ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಸಹ ಆರಕ್ಕೇರದೇ, ಮೂರಕ್ಕಿಳಿಯದೇ ತಟಸ್ಥವಾಗಿದೆ. ಈ ಶೋ 10ನೇ ವಾರದ ಟಿಆರ್‌ಪಿಯಲ್ಲಿ 3.4 ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು