Bhupendra Patel: ಗುಜರಾತ್‌ ಶಾಸಕಾಂಗ ಪಕ್ಷದ ನಾಯಕನಾಗಿ ಭೂಪೇಂದ್ರ ಪಟೇಲ್‌ ಆಯ್ಕೆ: ಸಭೆಯಲ್ಲಿ ಬಿಎಸ್‌ವೈ ಭಾಗಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bhupendra Patel: ಗುಜರಾತ್‌ ಶಾಸಕಾಂಗ ಪಕ್ಷದ ನಾಯಕನಾಗಿ ಭೂಪೇಂದ್ರ ಪಟೇಲ್‌ ಆಯ್ಕೆ: ಸಭೆಯಲ್ಲಿ ಬಿಎಸ್‌ವೈ ಭಾಗಿ

Bhupendra Patel: ಗುಜರಾತ್‌ ಶಾಸಕಾಂಗ ಪಕ್ಷದ ನಾಯಕನಾಗಿ ಭೂಪೇಂದ್ರ ಪಟೇಲ್‌ ಆಯ್ಕೆ: ಸಭೆಯಲ್ಲಿ ಬಿಎಸ್‌ವೈ ಭಾಗಿ

  • ಗಾಂಧಿನಗರ: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿ, 182 ವಿಧಾನಸಭಾ ಕ್ಷೇತ್ರಗಳ ಪೈಕಿ 156 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಅದರಂತೆ ಇಂದು(ಡಿ.10-ಶನಿವಾರ) ಭೂಪೇಂದ್ರ ಪಟೇಲ್‌ ಅವರನ್ನು ತನ್ನ ನೂತನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಗುಜರಾತ್‌ ನೂತನ ಬಿಜೆಪಿ ಸದಸ್ಯರು ಆಯ್ಕೆ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ಸೇರಿದ ಬಿಜೆಪಿ ನೂತನ ಶಾಸಕರು, ಭೂಪೇಂದ್ರ ಪಟೇಲ್‌ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದರು. ಅಂದರೆ ಭೂಪೇಂದ್ರ ಪಟೇಲ್‌ ಅವರು ಮತ್ತೊಂದು ಅವಧಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
icon

(1 / 5)

ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ಸೇರಿದ ಬಿಜೆಪಿ ನೂತನ ಶಾಸಕರು, ಭೂಪೇಂದ್ರ ಪಟೇಲ್‌ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದರು. ಅಂದರೆ ಭೂಪೇಂದ್ರ ಪಟೇಲ್‌ ಅವರು ಮತ್ತೊಂದು ಅವಧಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.(ANI)

ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಗುಜರಾತ್‌ ಬಿಜೆಪಿ ಶಾಸಕ ಹರ್ಷ ಸಾಂಘ್ವಿ, ಭೂಪೇಂದ್ರ ಪಟೇಲ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಸ್ಪಷ್ಟಪಡಿಸಿದರು.
icon

(2 / 5)

ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಗುಜರಾತ್‌ ಬಿಜೆಪಿ ಶಾಸಕ ಹರ್ಷ ಸಾಂಘ್ವಿ, ಭೂಪೇಂದ್ರ ಪಟೇಲ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಸ್ಪಷ್ಟಪಡಿಸಿದರು.(ANI)

ಭೂಪೇಂದ್ರ ಪಟೇಲ್‌ ಅವರು ನೂತನ ಶಾಸಕರು, ಗುಜರಾತ್‌ ಬಿಜೆಪಿ ರಾಜ್ಯ ಘಟಕ ಮತ್ತು ಬಿಜೆಪಿ ಹೈಕಮಾಂಡ್‌ನ ಅರ್ವಾನುಮತದ ಅಭ್ಯರ್ಥಿಯಾಗಿದ್ದು, ಗುಜರಾತ್‌ನ್ನು ಮುಂದಿನ ಐದು ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಹರ್ಷ ಸಾಂಘ್ವಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
icon

(3 / 5)

ಭೂಪೇಂದ್ರ ಪಟೇಲ್‌ ಅವರು ನೂತನ ಶಾಸಕರು, ಗುಜರಾತ್‌ ಬಿಜೆಪಿ ರಾಜ್ಯ ಘಟಕ ಮತ್ತು ಬಿಜೆಪಿ ಹೈಕಮಾಂಡ್‌ನ ಅರ್ವಾನುಮತದ ಅಭ್ಯರ್ಥಿಯಾಗಿದ್ದು, ಗುಜರಾತ್‌ನ್ನು ಮುಂದಿನ ಐದು ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಹರ್ಷ ಸಾಂಘ್ವಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.(ANI)

ಇನ್ನು ಗುಜರಾತ್‌ ಬಿಜೆಪಿ ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸುವ ಸಭೆಯಲ್ಲಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಭಾಗವಹಿಸಿದ್ದ ವಿಶೇಷವಾಗಿತ್ತು.  ಗುಜರಾತ್‌ ಸಿಎಂ ಆಯ್ಕೆಯ ಸಭೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ ಅರ್ಜುನ್‌ ಮುಂಡಾ ಮತ್ತು ಬಿಎಸ್‌ ಯಡಿಯೂರಪ್‌ ಅವರನ್ನು ವೀಕ್ಷಕರನ್ನಾಗಿ ನೇಮಿಸಿ ಪಕ್ಷ ಆದೇಶ ಹೊರಡಿಸಿತ್ತು.
icon

(4 / 5)

ಇನ್ನು ಗುಜರಾತ್‌ ಬಿಜೆಪಿ ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸುವ ಸಭೆಯಲ್ಲಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಭಾಗವಹಿಸಿದ್ದ ವಿಶೇಷವಾಗಿತ್ತು.  ಗುಜರಾತ್‌ ಸಿಎಂ ಆಯ್ಕೆಯ ಸಭೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ ಅರ್ಜುನ್‌ ಮುಂಡಾ ಮತ್ತು ಬಿಎಸ್‌ ಯಡಿಯೂರಪ್‌ ಅವರನ್ನು ವೀಕ್ಷಕರನ್ನಾಗಿ ನೇಮಿಸಿ ಪಕ್ಷ ಆದೇಶ ಹೊರಡಿಸಿತ್ತು.(ANI)

ಅದರಂತೆ ಗುಜರಾತ್‌ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಬಿಎಸ್‌ ಯಡಿಯೂರಪ್ಪ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಕೇಂದ್ರ ಸಚಿವ ಅರ್ಜುನ್‌ ಮುಂಡಾ ಸೇರಿದಂತೆ, ಗುಜರಾತ್‌ ಬಿಜೆಪಿ ಘಟಕದ ಇತರ ಪ್ರಮುಖ ನಯಕರು ಭಾಗವಹಿಸಿದ್ದರು.
icon

(5 / 5)

ಅದರಂತೆ ಗುಜರಾತ್‌ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಬಿಎಸ್‌ ಯಡಿಯೂರಪ್ಪ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಕೇಂದ್ರ ಸಚಿವ ಅರ್ಜುನ್‌ ಮುಂಡಾ ಸೇರಿದಂತೆ, ಗುಜರಾತ್‌ ಬಿಜೆಪಿ ಘಟಕದ ಇತರ ಪ್ರಮುಖ ನಯಕರು ಭಾಗವಹಿಸಿದ್ದರು.(ANI)


ಇತರ ಗ್ಯಾಲರಿಗಳು