Bhupendra Patel: ಹೊಸದಾಗಿ ಸಿಎಂ ಆಗಲು ಪ್ರಸ್ತುತ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಭೂಪೇಂದ್ರ ಪಟೇಲ್
- ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿರುವ ಬಿಜೆಪಿ, ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ. ಪ್ರಸ್ತುತ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೇ ಗುಜರಾತ್ ಸಿಎಂ ಆಗಿ ಮುಂದುವರೆಯಲಿದ್ದು, ಹೊಸ ಸರ್ಕಾರ ರಚನೆಗೆ ಅನುಉ ಮಾಡಿಕೊಡಲು, ಪ್ರಸ್ತುತ ಸರ್ಕಾರವನ್ನು ಬರ್ಖಾಸ್ತುಗೊಳಿಸಿ, ತಮ್ಮ ಸಿಎಂ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ..

(1 / 5)
ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರು, ಇಂದು(ಡಿ.09-ಶುಕ್ರವಾರ) ರಾಜಧಾನಿ ಗಾಂಧಿನಗರದಲ್ಲಿರುವ ರಾಜಭವನಕ್ಕೆ ತೆರಳಿ, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
(2 / 5)
ಭೂಪೇಂದ್ರ ಪಟೇಲ್ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲ ಆಚಾರ್ಯ ದ್ರೇವ್ ವ್ರತ್, ಹೊಸ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆಯುಂತೆ ಆದೇಶಿಸಿದರು.(ANI)
(3 / 5)
ಭೂಪೇಂದ್ರ ಪಟೇಲ್ ಅವರನ್ನೇ ಗುಜರಾತ್ ಸಿಎಂ ಹುದ್ದೆಯಲ್ಲಿ ಮುಂದುವರೆಸುವ ನಿರ್ಣಯ ಕೈಗೊಂಡಿರುವ ಬಿಜೆಪಿ ಹೈಕಮಾಂಡ್, ಶೀಘ್ರದಲ್ಲೇ ಹೊಸ ಸಂಪುಟ ರಚನೆಗೂ ಭೂಪೇಂದ್ರ ಪಟೇಲ್ ಅವರಿಗೆ ಅನುಮತಿ ನೀಡಲಿದೆ.(ANI)
(4 / 5)
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿರುವ ಬಿಜೆಪಿ, 182 ವಿಧಾನಭಾ ಕ್ಷೇತ್ರಗಳ ಪೈಕಿ 156 ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ.(ANI)
ಇತರ ಗ್ಯಾಲರಿಗಳು