ಡ್ವೇನ್ ಬ್ರಾವೋ, ಭುವನೇಶ್ವರ್ 2 ಬಾರಿ; ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿ
- Purple Cap: ವಿಶ್ವದ ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್, ಇದುವರೆಗೆ 16 ಆವೃತ್ತಿಗಳನ್ನು ಪೂರೈಸಿದೆ. ಈ ಬಾರಿ 17ನೇ ಆವೃತ್ತಿ ನಡೆಯುತ್ತಿದ್ದು, ಟೂರ್ನಿಯ ಆರಂಭಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಲೀಗ್ ಪ್ರಾರಂಭಕ್ಕೂ ಮುನ್ನ ಈವರೆಗೆ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರನ್ನು ನೋಡೋಣ.
- Purple Cap: ವಿಶ್ವದ ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್, ಇದುವರೆಗೆ 16 ಆವೃತ್ತಿಗಳನ್ನು ಪೂರೈಸಿದೆ. ಈ ಬಾರಿ 17ನೇ ಆವೃತ್ತಿ ನಡೆಯುತ್ತಿದ್ದು, ಟೂರ್ನಿಯ ಆರಂಭಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಲೀಗ್ ಪ್ರಾರಂಭಕ್ಕೂ ಮುನ್ನ ಈವರೆಗೆ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರನ್ನು ನೋಡೋಣ.
(1 / 16)
2008ರಲ್ಲಿ ನಡೆದ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ತಂಡದ ಸೊಹೈಲ್ ತನ್ವೀರ್ 11 ಪಂದ್ಯಗಳಿಂದ 22 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದರು.(AFP)
(2 / 16)
2009ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವು ಚಾಂಪಿಯನ್ ಆಘಿ ಹೊರಹೊಮ್ಮಿತು. ಈ ಬಾರಿ ಭಾರತೀಯ ಬೌಲರ್ ಆರ್‌ಪಿ ಸಿಂಗ್, 16 ಪಂದ್ಯಗಳಿಂದ 23 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಧರಿಸಿದ ಮೊದಲ ಭಾರತೀಯನಾದರು.(AFP)
(3 / 16)
ಡೆಕ್ಕನ್ ಚಾರ್ಜರ್ಸ್ ಪರ 16 ಪಂದ್ಯಗಳಿಂದ 21 ವಿಕೆಟ್ ಪಡೆದ ಪ್ರಗ್ಯಾನ್ ಓಜಾ, 2010ರಲ್ಲಿ ಪರ್ಪಲ್ ಕ್ಯಾಪ್ ಗೆದ್ದರು(AFP)
(5 / 16)
2012ರ ಐಪಿಎಲ್ ಟೂರ್ನಿಯಲ್ಲಿ, ಡೆಲ್ಲಿ ಡೇರ್‌ಡೆವಿಲ್ಸ್ ಪರ ಮಾರ್ನೆ ಮಾರ್ಕೆಲ್ 25 ವಿಕೆಟ್ ಪಡೆದಿದ್ದರು.(BCCI)
(6 / 16)
2013ರಲ್ಲಿ ಸಿಎಸ್‌ಕೆ ಪರ ಡ್ವೇನ್ ಬ್ರಾವೋ 18 ಪಂದ್ಯಗಳಿಂದ 32 ವಿಕೆಟ್ ಕಬಳಿಸಿದ್ದರು. ಒಂದೇ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅವರ ಜಂಟಿ ದಾಖಲೆ ಇನ್ನೂ ಹಾಗೆಯೇ ಇದೆ.(BCCI)
(7 / 16)
ಮೋಹಿತ್ ಶರ್ಮಾ 2014ರಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಸಿಎಸ್‌ಕೆ ತಂಡದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 16 ಪಂದ್ಯಗಳಿಂದ ಅವರು 23 ವಿಕೆಟ್ ಕಬಳಿಸಿದರು.(BCCI)
(8 / 16)
ಡ್ವೇನ್ ಬ್ರಾವೋ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದ ಎರಡನೇ ಬೌಲರ್ ಆಗಿದ್ದಾರೆ. 2013ರ ಸಾಧನೆಯನ್ನು ಅವರು 2015ರ ಋತುವಿನಲ್ಲಿ ಪುನರಾವರ್ತಿಸಿದರು. ಈ ಬಾರಿ ಅವರು 26 ವಿಕೆಟ್ ಪಡೆದರು.(BCCI)
(9 / 16)
ಐಪಿಎಲ್ 2016ರಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭುವನೇಶ್ವರ್ ಕುಮಾರ್, ಈ ಸಾಧನೆ ಮಾಡಿದ 4ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 17 ಪಂದ್ಯಗಳಿಂದ ಅವರು 23 ವಿಕೆಟ್ ಕಬಳಿಸಿದರು.(BCCI)
(10 / 16)
2017ರ ಐಪಿಎಲ್ ಟೂರ್ನಿಯಲ್ಲಿ 26 ವಿಕೆಟ್ ಕಬಳಿಸುವ ಮೂಲಕ ಭುವನೇಶ್ವರ್ ಕುಮಾರ್, ಪರ್ಪಲ್ ಕ್ಯಾಪ್ ಅನ್ನು ತಮ್ಮ ಬಳಿ ಉಳಿಸಿಕೊಂಡರು.(BCCI)
(11 / 16)
ಐಪಿಎಲ್ 2018ರಲ್ಲಿ ಪಂಜಾಬ್ ಕಿಂಗ್ಸ್ ಪರ 24 ವಿಕೆಟ್ ಕಬಳಿಸಿದ ಪಡೆದ ಆಂಡ್ರ್ಯೂ ಟೈ ಪರ್ಪಲ್ ಕ್ಯಾಪ್ ಗೆದ್ದ ಏಕೈಕ ಆಸ್ಟ್ರೇಲಿಯಾ ಆಟಗಾರರಾಗಿದ್ದಾರೆ.(BCCI)
(13 / 16)
ಡ್ವೇನ್ ಬ್ರಾವೋ ಮತ್ತು ಹರ್ಷಲ್ ಪಟೇಲ್ ನಂತರ ಒಂದೇ ಐಪಿಎಲ್ ಋತುವಿನಲ್ಲಿ ಕನಿಷ್ಠ 30 ವಿಕೆಟ್ ಪಡೆದ ಏಕೈಕ ಬೌಲರ್ ಕಗಿಸೊ ರಬಾಡ. ಐಪಿಎಲ್ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅವರು 30 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೆದ್ದರು.(BCCI)
(14 / 16)
ಐಪಿಎಲ್ 2021ರಲ್ಲಿ ಆರ್‌ಸಿಬಿ ಪರ ಹರ್ಷಲ್ ಪಟೇಲ್ 32 ವಿಕೆಟ್ ಪಡೆದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಒಂದೇ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬ್ರಾವೋ ದಾಖಲೆಯನ್ನು ಸರಿಗಟ್ಟಿದರು.(BCCI)
(15 / 16)
ಯುಜ್ವೇಂದ್ರ ಚಾಹಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 27 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದರು.(BCCI)
ಇತರ ಗ್ಯಾಲರಿಗಳು