ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡೆಲ್ಲಿ ಕ್ಯಾಪಿಟಲ್ಸ್​ಗೆ ದೊಡ್ಡ ಆಘಾತ; ಮುಂಬೈ ಇಂಡಿಯನ್ಸ್ ಕದನಕ್ಕೂ ಮುನ್ನ ಸ್ಟಾರ್ ಸ್ಪಿನ್ನರ್​ ಔಟ್

ಡೆಲ್ಲಿ ಕ್ಯಾಪಿಟಲ್ಸ್​ಗೆ ದೊಡ್ಡ ಆಘಾತ; ಮುಂಬೈ ಇಂಡಿಯನ್ಸ್ ಕದನಕ್ಕೂ ಮುನ್ನ ಸ್ಟಾರ್ ಸ್ಪಿನ್ನರ್​ ಔಟ್

  • Kuldeep Yadav : ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರಿ ಆಘಾತವಾಗಿದೆ. ತಂಡದ ಪ್ರಮುಖ ಸ್ಪಿನ್ನರ್​​ ಗಾಯದ ಕಾರಣ ಈ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಏಪ್ರಿಲ್ 7ರ ಭಾನುವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ಸೆಣಸಾಟ ನಡೆಸಲು ಸಿದ್ಧವಾಗಿವೆ. ಎಂಐ ಮೂರಕ್ಕೆ ಮೂರು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮತ್ತೊಂದೆಡೆ ಡಿಸಿ ನಾಲ್ಕಕ್ಕೆ 3ರಲ್ಲಿ ಸೋತು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 
icon

(1 / 5)

ಇದೀಗ ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಈಗಾಗಲೇ ಸೋಲುಗಳಿಂದ ಕಂಗೆಟ್ಟಿರುವ ರಿಷಭ್ ಪಂತ್ ನೇತೃತ್ವದ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಪ್ರಮುಖ ಸ್ಪಿನ್ನರ್​​ ಮುಂಬೈ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. 
icon

(2 / 5)

ಏಸ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ತೊಡೆಸಂದು ಗಾಯದ ಸಮಸ್ಯೆಗೆ ಸಿಲುಕಿದ್ದು, ಮುಂಬೈ ವಿರುದ್ಧ ಪಂದ್ಯಕ್ಕೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಇಎಸ್​ಪಿಎನ್​ ಕ್ರಿಕ್​ಇನ್ಫೋ ವರದಿ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿಗೆ ಸಲಹೆ ನೀಡಲಾಗಿದೆ. ಅಲ್ಲದೆ, ಅವರು ಯಾವಾಗ ಮತ್ತೆ ಆಡಲು ಸಿದ್ಧರಾಗುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ದೃಢೀಕರಣವಿಲ್ಲ.
icon

(3 / 5)

ಏಸ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ತೊಡೆಸಂದು ಗಾಯದ ಸಮಸ್ಯೆಗೆ ಸಿಲುಕಿದ್ದು, ಮುಂಬೈ ವಿರುದ್ಧ ಪಂದ್ಯಕ್ಕೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಇಎಸ್​ಪಿಎನ್​ ಕ್ರಿಕ್​ಇನ್ಫೋ ವರದಿ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿಗೆ ಸಲಹೆ ನೀಡಲಾಗಿದೆ. ಅಲ್ಲದೆ, ಅವರು ಯಾವಾಗ ಮತ್ತೆ ಆಡಲು ಸಿದ್ಧರಾಗುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ದೃಢೀಕರಣವಿಲ್ಲ.(AFP)

ಡೆಲ್ಲಿಯ ಆರಂಭಿಕ ಎರಡು ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿ 3 ವಿಕೆಟ್​ ಪಡೆದಿದ್ದ ಕುಲ್ದೀಪ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಪ್ಪಿಸಿಕೊಂಡಿದ್ದರು. ಸದ್ಯ ಅವರ ಬದಲಿಗೆ ವಿಕ್ಕಿ ಓಸ್ಟ್ವಾಲ್ ಅವರನ್ನು ಅಕ್ಷರ್​ ನಂತರ ಎರಡನೇ ಸ್ಪಿನ್ನರ್ ಆಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.
icon

(4 / 5)

ಡೆಲ್ಲಿಯ ಆರಂಭಿಕ ಎರಡು ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿ 3 ವಿಕೆಟ್​ ಪಡೆದಿದ್ದ ಕುಲ್ದೀಪ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಪ್ಪಿಸಿಕೊಂಡಿದ್ದರು. ಸದ್ಯ ಅವರ ಬದಲಿಗೆ ವಿಕ್ಕಿ ಓಸ್ಟ್ವಾಲ್ ಅವರನ್ನು ಅಕ್ಷರ್​ ನಂತರ ಎರಡನೇ ಸ್ಪಿನ್ನರ್ ಆಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.(ANI)

ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಆಯ್ಕೆದಾರರು, ಐಪಿಎಲ್ ಮಧ್ಯೆಯೇ ಟಿ20 ವಿಶ್ವಕಪ್​​​ಗೆ ತಂಡದ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಹಾಗಾಗಿ, ಈ ವೇಳೆ ಕುಲ್ದೀಪ್ ಯಾದವ್ ಇಂಜುರಿಯಾಗಿರುವುದು ದೊಡ್ಡ ತಲೆನೋವು ತಂದಿಟ್ಟಿದೆ.
icon

(5 / 5)

ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಆಯ್ಕೆದಾರರು, ಐಪಿಎಲ್ ಮಧ್ಯೆಯೇ ಟಿ20 ವಿಶ್ವಕಪ್​​​ಗೆ ತಂಡದ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಹಾಗಾಗಿ, ಈ ವೇಳೆ ಕುಲ್ದೀಪ್ ಯಾದವ್ ಇಂಜುರಿಯಾಗಿರುವುದು ದೊಡ್ಡ ತಲೆನೋವು ತಂದಿಟ್ಟಿದೆ.(AFP)

IPL_Entry_Point

ಇತರ ಗ್ಯಾಲರಿಗಳು