Bigg Boss Kannada 10: ಅರ್ಧನಾರೀಶ್ವರನೇ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಾರೆಂಬ ಖುಷಿ ಇದೆ; ಬಿಗ್‌ಬಾಸ್ ಸ್ಪರ್ಧಿ ನೀತು ತಾಯಿ ವನಜಾಕ್ಷಿ
ಅಕ್ಟೋಬರ್ 8 ರಿಂದ ಕನ್ನಡ ಬಿಗ್ ಬಾಸ್ ಸೀಸನ್ 10 ಆರಂಭವಾಗಿದೆ. ಈ ಬಾರಿ 17 ಸ್ಪರ್ಧಿಗಳು ದೊಡ್ಮನೆಯೊಳಗೆ ಹೋಗಿದ್ದಾರೆ. ಆ ಸ್ಪರ್ಧಿಗಳಲ್ಲಿ ನೀತು ವನಜಾಕ್ಷಿ ಕೂಡಾ ಒಬ್ಬರು.
(1 / 14)
ನೀತು ವನಜಾಕ್ಷಿ ಟ್ರಾನ್ಸ್‌ಜೆಂಡರ್. ಇವರು ಗದಗ ಮೂಲದವರು, ನೀತು ಮೊದಲ ಹೆಸರು ಮಂಜುನಾಥ್. (PC: Nithu Vaanjaksshi)
(2 / 14)
ಅವರಿಗೆ 7ನೇ ತರಗತಿಯಲ್ಲಿರುವಾಗಲೇ ನನಗೆ ಹೆಣ್ಣಿನ ಭಾವನೆಗಳು ಶುರುವಾಯ್ತು. ಆದರೆ ಸಮಾಜಕ್ಕೆ ಹೆದರಿ ನಾನು ಎಲ್ಲವನ್ನೂ ಮುಚ್ಚಿಟ್ಟಿದ್ದೆ ಎಂದು ನೀತು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
(3 / 14)
ನನ್ನಲ್ಲಿ ಆ ಭಾವನೆಗಳು ಶುರುವಾದ ನಂತರ ಅಕ್ಕನ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆ, ಕಾಜಲ್ ಹಚ್ಚಿಕೊಳ್ಳುತ್ತಿದ್ದೆ. ಮೊದಲು ಅಕ್ಕನಿಗೆ ವಿಚಾರ ಹೇಳಿದೆ. ಮೊದಲು ಆಕೆಗೆ ನೋವಾದರೂ ನಂತರ ಅರ್ಥ ಮಾಡಿಕೊಂಡಳು.
(4 / 14)
ತಾಯಿ ಡಿಪ್ರೆಶನ್‌ಗೆ ಹೋಗಬಹುದು ಎಂಬ ಕಾರಣಕ್ಕೆ ನೀತು ಆಕೆಗೆ ಮೊದಲು ಹೇಳಿರಲಿಲ್ಲ. ಆದರೆ ವಿಚಾರ ತಿಳಿದಾಗ ಆಕೆ ಕಷ್ಟವಾದರೂ ನಂತರ ಮಗನನ್ನು ಮಗಳಾಗಿ ಒಪ್ಪಿಕೊಂಡಿದ್ದಾರೆ. ಅಮ್ಮನ ಮೇಲಿನ ಪ್ರೀತಿಗೆ ನೀತು ತಮ್ಮ ಹೆಸರಿನ ಜೊತೆಗೆ ನೀತು ವನಜಾಕ್ಷಿ ಎಂದು ಹೆಸರಿಟ್ಟುಕೊಂಡಿದ್ದಾರೆ.
(5 / 14)
ಆರಂಭದಲ್ಲಿ ಬಹಳ ನೋವಾಯ್ತು. ಆದರೆ ನಾವೇ ಮಕ್ಕಳನ್ನು ಸ್ವೀಕರಿಸದಿದ್ದರೆ ಅವರು ಎಲ್ಲಿ ಹೋಗಬೇಕು. ನನ್ನ ಹೊಟ್ಟೆಯಲ್ಲಿ ಅರ್ಧ ನಾರೀಶ್ವರನೇ ಜನಿಸಿದ್ದಾರೆಂಬ ಭಾವನೆ ನನಗೆ ಇದೆ. ಮಗ(ಳು) ಖುಷಿಯಾಗಿದ್ದರೆ ಸಾಕು ಎಂದು ನೀತು ತಾಯಿ ವನಜಾಕ್ಷಿ ಬಿಗ್‌ಬಾಸ್ ವೇದಿಕೆ ಮೇಲೆ ಹೇಳಿದ್ದರು.
(6 / 14)
ಮಂಗಳಮುಖಿಯರು ಎಂದರೆ ಕೆಲವರು ನೋಡುವ ರೀತಿಯೇ ಬೇರೆ. ಹಾಗೇ ಕೆಲವರು ಮಂಗಳಮುಖಿಯರು ಬಿಕ್ಷೆ ಬೇಡುವುದು, ಸೆಕ್ಸ್ ವರ್ಕರ್ ಆಗಿ ಜೀವನ ಸಾಗಿಸುವುದನ್ನು ನೋಡಿದ್ದೇವೆ. ಆದರೆ ನೀತು ವಿಚಾರದಲ್ಲಿ ಸಂಪೂರ್ಣ ವಿಭಿನ್ಕ.
(8 / 14)
ನೀತುಗೆ ಚಿತ್ರಕಲೆಯಲ್ಲಿ ಆಸಕ್ತಿ ಇದ್ದಿದ್ದರಿಂದ ಟ್ಯಾಟೂ ಆರ್ಟಿಸ್ಟ್ ಆಗಿ ವೃತ್ತಿ ಆರಂಭಿಸಿದರು. ಅದರಿಂದ ಬಂದ ಹಣದಿಂದ ಬ್ಯೂಟಿ ಪಾರ್ಲರ್ ಆರಂಭಿಸಿದ್ದಾರೆ.
(11 / 14)
ಗಂಡಾಗಿ ಹುಟ್ಟಿ ಹೆಣ್ಣಾಗಿ ಬದುಕುವುದು ಸುಲಭದ ಮಾತಲ್ಲ. ಅದಕ್ಕೆ ಮಾನಸಿಕವಾಗಿ ಬಹಳ ಸ್ಟ್ರಾಂಗ್ ಇರಬೇಕು. ನೀತುಗೆ ಮನೆಯವರ ಬೆಂಬಲ ಇದೆ. ಉದ್ಯಮದಲ್ಲಿ ದೊಡ್ಡ ಯಶಸ್ವು ಗಳಿಸಿದ್ದಾರೆ.
ಇತರ ಗ್ಯಾಲರಿಗಳು