ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ Bigg Boss Kannada ಖ್ಯಾತಿಯ ನಮ್ರತಾ ಗೌಡ, ಸಿನಿಮಾ ಯಾವುದು, ಏನ್ ಕಥೆ?
- ಸ್ಯಾಂಡಲ್‌ವುಡ್‌ಗೆ ಬಾಲ ನಟಿಯಾಗಿ ಎಂಟ್ರಿಕೊಟ್ಟಿದ್ದ ನಮ್ರತಾ ಗೌಡ, ಬಳಿಕ ಕಿರುತೆರೆಯಲ್ಲಿ ನಾಯಕಿಯಾಗಿ ಗಮನ ಸೆಳೆದರು. ನಾಗಿಣಿ ಸೀರಿಯಲ್‌ನಲ್ಲಿ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಂಡು, ಕನ್ನಡಿಗರ ಮನಗೆದ್ದರು. ಅದಾದ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿಯೂ ಸ್ಪರ್ಧಿಯಾಗಿ ಫಿನಾಲೆವರೆಗೂ ಇದ್ದರು. ಇದೀಗ ಇದೇ ನಟಿ, ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ.

(1 / 7)
ಕೋಣ, ಕುಪ್ಪಂಡ ಪ್ರೊಡಕ್ಷನ್ ಚೊಚ್ಚಲ ಪ್ರಯತ್ನ. ಈ ಬ್ಯಾನರ್ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 10ರ ಖ್ಯಾತಿಯ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಲ್ಪ ಹಾಗೂ ರವಿ ಕಿರಣ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
(Instagram)(2 / 7)
ನೈಜ ಘಟನೆ ಆಧರಿಸಿದ ಸಿನಿಮಾ ಎಂಬ ಕಾರಣಕ್ಕೆ ಕೋಣ ಹೆಚ್ಚು ಕುತೂಹಲ ಮೂಡಿಸಿದೆ. ಎಸ್ ಹರಿಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
(3 / 7)
ಈ ಕಥೆಯಲ್ಲಿ ಕೋಮಲ್ ಹೀರೋ ಅನ್ನೋದು ಒಂದು ಕಡೆಯಾದ್ರೆ, ಕೋಣ ಈ ಚಿತ್ರದ ಮತ್ತೊಬ್ಬ ಹೀರೋ ಎಂದು ಚಿತ್ರತಂಡ ಈ ಹಿಂದೆಯೇ ಹೇಳಿತ್ತು.
(4 / 7)
ಅದರಂತೆ ಇದೀಗ ಇದೇ ಸಿನಿಮಾದ ನಾಯಕಿ ಯಾರು? ಈ ವಿಚಾರ ಇಲ್ಲಿಯವರೆಗೂ ರಿವೀಲ್ ಆಗಿರಲಿಲ್ಲ. ಇದೀಗ ಅದೂ ಬಹಿರಂಗವಾಗಿದೆ.
(5 / 7)
ಸ್ಯಾಂಡಲ್‌ವುಡ್‌ನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಮತ್ತು ಕನ್ನಡ ಕಿರುತೆರೆಯಲ್ಲಿಯೂ ಗಮನ ಸೆಳೆದ ನಟಿ ನಮ್ರತಾ ಗೌಡ, ಕೋಣ ಚಿತ್ರಕ್ಕೆ ನಾಯಕಿಯಾಗಿದ್ದಾರೆ.
(6 / 7)
ನಮ್ರತಾ ಗೌಡ ಅವರ ಬರ್ತ್‌ಡೇ ಪ್ರಯುಕ್ತ ನಿರ್ಮಾಪಕಿ ತನಿಷಾ ಕುಪ್ಪಂಡ, ನಾಯಕಿಯ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.
ಇತರ ಗ್ಯಾಲರಿಗಳು