Bigg Boss Kannada 11: ಬಿಗ್ ಬಾಸ್ ಮನೆಗೆ ಬಂದ ಕಾರ್ತಿಕ್, ನಮ್ರತಾ; ನಾಮಿನೇಷ್‌ನಲ್ಲಿ ರಜತ್ ಹಾಗೂ ಧನರಾಜ್ ಫಿಸಿಕಲ್ ಫೈಟ್
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಈ ನಾಮಿನೇಷನ್ ಎಂಬ ಪದ ಬಂದರೆ ಸಾಕು ಮನೆಯಲ್ಲಿ ಬಿರುಗಾಳಿಯೇ ಏಳುತ್ತದೆ. ಈ ಬಾರಿ ರಜತ್ ಹಾಗೂ ಧನರಾಜ್ ನಡುವೆ ಫೈಟ್ ನಡೆದಿದೆ.
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಈ ನಾಮಿನೇಷನ್ ಎಂಬ ಪದ ಬಂದರೆ ಸಾಕು ಮನೆಯಲ್ಲಿ ಬಿರುಗಾಳಿಯೇ ಏಳುತ್ತದೆ. ಈ ಬಾರಿ ರಜತ್ ಹಾಗೂ ಧನರಾಜ್ ನಡುವೆ ಫೈಟ್ ನಡೆದಿದೆ.
(1 / 9)
ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಆಚಾರ್ ಹಾಗೂ ರಜತ್ ನಡುವೆ ಫಿಸಿಕಲ್ ಫೈಟ್ ನಡೆದಿದೆ. ಆದರೆ ಅಷ್ಟೊಂದು ಗಂಭೀರವಾಗಿ ಏನೂ ಆಗಿಲ್ಲ.
(2 / 9)
ತಮಾಷೆಯೋ ಅಥವಾ ಇದು ಸೀರಿಯಸ್ ಆಗಿ ಮಾಡಿಕೊಂಡಿರುವ ಜಗಳವೋ ಎಂದು ಗೊಂದಲ ಇದೆ. ಆದರೆ ರಜತ್ ಮಾತಾಡುತ್ತಿರುವ ಸಂದರ್ಭದಲ್ಲಿ ಧನರಾಜ್ ಅವರು ರಜತ್ ಅವರ ಹತ್ತಿರ ಹೋಗಿದ್ದಾರೆ.
(3 / 9)
ಹೋಗಿ ಅವರ ಮುಖ ಮುಟ್ಟಿದ್ದಾರೆ, ಇದು ರಜತ್ ಅವರಿಗೆ ಪ್ರವೋಕ್ ಮಾಡಿದ ಹಾಗಾಗಿದೆ. ರಜತ್ ಅವರು ಧನರಾಜ್ ಅವರನ್ನು ನೀನು ಏನೂ ಗೊತ್ತಾಗದ ಮಗು ಎಂದಿದ್ದಾರೆ. ಆಗ ಧನರಾಜ್ ಅಂಕಲ್ ಎನ್ನುತ್ತಾ ಅವರ ಬಳಿ ಹೋಗಿದ್ದಾರೆ.
(4 / 9)
ಅಲ್ಲೇ ಪಕ್ಕದಲ್ಲಿದ್ದ ಗೌತಮಿ ಹಾಗೂ ಮಂಜು ಅವರು ಅವರಿಬ್ಬರನ್ನು ತಪ್ಪಿಸಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ನಾಮಿನೇಷನ್
(5 / 9)
ಈ ಬಾರಿ ನಾಮಿನೇಷನ್ ಮಾಡುವಾಗ ಈ ಹಿಂದೆ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿದ್ದ ಕಂಟೆಸ್ಟೆಂಟ್‌ಗಳು ಕೂಡ ಬಂದಿದ್ದರು. ನಮ್ರತಾ ಹಾಗೂ ಕಾರ್ತಿಕ್ ಬಂದಿದ್ದಾರೆ.
(6 / 9)
ನಾಮಿನೇಷನ್‌ಗೆ ಕಾರಣ ಕೊಡುವಾಗ ರಕತ್ ಅವರ ಹೆಸರನ್ನು ತೆಗೆದುಕೊಂಡು ರಜತ್ ಫೋಟೋ ಇರುವ ಮಡಿಕೆಯನ್ನು ಧನರಾಜ್ ನೀರಿಗೆ ಎಸೆದು ನಾಮಿನೇಟ್ ಮಾಡಿರುತ್ತಾರೆ.
(8 / 9)
ಇನ್ನು ಮನೆಯಲ್ಲಿ ಕೆಲವು ಸಲಹೆಗಳನ್ನು ಕೆಲವು ಆಟಗಳನ್ನು ಆಡಿಸಲು ಹೆಚ್ಚಿನ ಮನರಂಜನೆ ನೀಡಲು ಎಂದೇ ಬಿಗ್ ಬಾಸ್ ಮನೆಗೆ ಕಾರ್ತಿಕ್ ಹಾಗೂ ನಮ್ರತಾ ಬಂದಿದ್ದಾರೆ.
ಇತರ ಗ್ಯಾಲರಿಗಳು