ಗೆಲುವು ನಿನ್ನದು.. ಖುಷಿ ನನ್ನದು, ಇದು ದೋಸ್ತಿ ಗೆಲುವು ದೋಸ್ತಾ; ಕೊನೆಗೂ ಬಿಗ್‌ ಬಾಸ್‌ ಟ್ರೋಫಿ ಎತ್ತಿ ಹಿಡಿದ ಧನರಾಜ್‌ ಆಚಾರ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗೆಲುವು ನಿನ್ನದು.. ಖುಷಿ ನನ್ನದು, ಇದು ದೋಸ್ತಿ ಗೆಲುವು ದೋಸ್ತಾ; ಕೊನೆಗೂ ಬಿಗ್‌ ಬಾಸ್‌ ಟ್ರೋಫಿ ಎತ್ತಿ ಹಿಡಿದ ಧನರಾಜ್‌ ಆಚಾರ್‌

ಗೆಲುವು ನಿನ್ನದು.. ಖುಷಿ ನನ್ನದು, ಇದು ದೋಸ್ತಿ ಗೆಲುವು ದೋಸ್ತಾ; ಕೊನೆಗೂ ಬಿಗ್‌ ಬಾಸ್‌ ಟ್ರೋಫಿ ಎತ್ತಿ ಹಿಡಿದ ಧನರಾಜ್‌ ಆಚಾರ್‌

  • ಬಿಗ್‌ ಬಾಸ್‌ನ ಕಿಲಾಡಿ ಜೋಡಿ ಧನರಾಜ್‌ ಮತ್ತು ಹನುಮಂತ. ಬಿಗ್‌ ಮನೆಯಲ್ಲಿದ್ದಷ್ಟು, ಈ ಜೋಡಿಯೇ ಅತಿ ಹೆಚ್ಚು ಕಾಲ ಒಟ್ಟಿಗೆ ಸಮಯ ಕಳೆದಿದೆ. ಸ್ನೇಹಕ್ಕೆ ಇನ್ನೊಂದು ವ್ಯಾಖ್ಯಾನ ಹೇಳಿಕೊಟ್ಟಿದ್ದರು ಧನರಾಜ್‌ ಮತ್ತು ಹನುಮಂತು. ಈಗ ಹನುಮಂತು ಗೆದ್ದ ಟ್ರೋಫಿಯನ್ನು ಎತ್ತಿ ಹಿಡಿದು, ದೋಸ್ತನ ಗೆಲುವನ್ನು ನನ್ನದೇ ಗೆಲುವು ಎಂಬಷ್ಟರ ಮಟ್ಟಿಗೆ ಸಂಭ್ರಮಿಸಿದ್ದಾರೆ ಧನರಾಜ್.‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ವಿಜೇತರಾಗಿ ಹನುಮಂತ ಲಮಾಣಿ ಹೊತಹೊಮ್ಮಿದ್ದಾರೆ. ದಾಖಲೆಯ 5 ಕೋಟಿಗೂ ಅಧಿಕ ವೋಟ್‌ ಪಡೆದು, ಹೊಸ ಇತಿಹಾಸ ಬರೆದಿದ್ದಾರೆ.
icon

(1 / 7)

ಪ್ರತಿ ಬಿಗ್‌ ಬಾಸ್‌ನಲ್ಲೂ ಒಂದು ಜೋಡಿ ಮಾಡುತ್ತದೆ. ಆ ಪೈಕಿ ಈ ಸಲದ ಸೀಸನ್‌ 11ರಲ್ಲಿ ಎಲ್ಲರಿಗೂ ಇಷ್ಟವಾದವರು ಧನರಾಜ್‌ ಮತ್ತು ಹನುಮಂತು. 
icon

(2 / 7)

ಮನೆಯಲ್ಲಿದ್ದ ಇದಷ್ಟು ದಿನ ಒಟ್ಟಿಗೆ ಹೆಚ್ಚು ಸಮಯ ಕಳೆದ ಈ ಜೋಡಿ, ಸ್ನೇಹಕ್ಕೆ ಹೊಸ ವ್ಯಾಖ್ಯಾನ ಬರೆದಿತ್ತು. ಕುಚಿಕು ಗೆಳೆಯರಾಗಿಯೇ ಹೆಚ್ಚು ಆಪ್ತರಾಗಿ, ಕಷ್ಟ ಸುಖ ಹಂಚಿಕೊಂಡಿದ್ದರು. 
icon

(3 / 7)

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿ,  ದೋಸ್ತಾ ನೀ ಮಸ್ತಾ ಗೆಲುವು ನಿನ್ನದು.. ಖುಷಿ ನನ್ನದು..  ಇದು ದೋಸ್ತಿ ಗೆಲುವು ದೋಸ್ತಾ.. ಇರು ನೀ ಜೊತೆಗಿರು ಎಂದೆಂದಿಗೂ ಎಂದಿದ್ದಾರೆ. 
icon

(4 / 7)

ಸೋಷಿಯಲ್‌ ಮೀಡಿಯಾದಲ್ಲಿ ಹೀಗೆ ಫೋಟೋ ಶೇರ್‌ ಮಾಡಿದ್ದೇ ತಡ, ನೆಟ್ಟಿಗ ವಲಯದಿಂದ ಅಪಾರ ಮೆಚ್ಚುಗೆ ಪಡೆದಿದೆ. ನಿಮ್ಮಿಬ್ಬರ ಸ್ನೇಹ ಹೀಗೆ ಇರಲಿ ಅಣ್ಣ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ.
icon

(5 / 7)

ಧನು & ಹನು ಬೆಸ್ಟ್‌ ಜೋಡಿ.. ಉತ್ತರ ಕನ್ನಡ ದಕ್ಷಿಣ ಕನ್ನಡ ಕಾಂಬಿನೇಷನ್‌ ಸೂಪರ್‌.. ಪ್ರಚಂಡ ಕುಳ್ಳರು ಎಂಬಿತ್ಯಾದಿ ಮೆಚ್ಚುಗೆಯ ಕಾಮೆಂಟ್‌ಗಳು ಈ ಜೋಡಿಗೆ ಸಂದಾಯವಾಗುತ್ತಿವೆ, 
icon

(6 / 7)

ಉತ್ತರ ಕರ್ನಾಟಕದ ಹಾವೇರಿಯ ಹನುಮಂತ, ದಕ್ಷಿಣ ಕನ್ನಡದ ಧನರಾಜ್‌ ಜೋಡಿಯ ಸ್ನೇಹಕ್ಕೆ ಬಿಗ್‌ ಬಾಸ್‌ ಮನೆ ಮಂದಿ ಮಾತ್ರವಲ್ಲದೆ, ಇಡೀ ಕರುನಾಡೇ ಫಿದಾ ಆಗಿತ್ತು. 
icon

(7 / 7)

ಇತರ ಗ್ಯಾಲರಿಗಳು