Bigg Boss Kannada 11: ಅಂದು ಬೊಗಸೆ ಪ್ರೀತಿ ಬಯಸಿದವನಿಗೆ, ಇಂದು ಆಗಸದಷ್ಟು ಪ್ರೀತಿ ಕೊಟ್ಟಿದ್ದೀರಿ; ಧನರಾಜ್ ಆಚಾರ್ ಭಾವುಕ ಪೋಸ್ಟ್
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್, ಭಾನುವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಹೀಗೆ 110 ದಿನಗಳ ಬಳಿಕ ಹೊರಬರುತ್ತಿದ್ದಂತೆ, ಸುದೀರ್ಘ ಬರಹದ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್, ಭಾನುವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಹೀಗೆ 110 ದಿನಗಳ ಬಳಿಕ ಹೊರಬರುತ್ತಿದ್ದಂತೆ, ಸುದೀರ್ಘ ಬರಹದ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
(1 / 8)
ಬಿಗ್ ಬಾಸ್ ಮನೆಯಲ್ಲಿ ಅಜಾತಶತ್ರು ರೀತಿ ಕಂಡವರು ಕಾಮಿಡಿಯನ್ ಧನರಾಜ್ ಆಚಾರ್. ಇದೀಗ ಇವರ ಸುದೀರ್ಘ 110 ದಿನಗಳ ಬಿಗ್ ಬಾಸ್ ಆಟ ಕೊನೆಗೊಂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕವಾಗಿಯೇ ಎಲ್ಲರಿಗೂ ಥ್ಯಾಂಕ್ಯು ಹೇಳಿದ್ದಾರೆ.
(Instagram \Dhanraj Achar)(2 / 8)
ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್, ಭಾನುವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಹೀಗೆ 110 ದಿನಗಳ ಬಳಿಕ ಹೊರಬರುತ್ತಿದ್ದಂತೆ, ಸುದೀರ್ಘ ಬರಹದ ಪೋಸ್ಟ್ ಹಂಚಿಕೊಂಡಿದ್ದಾರೆ.
(3 / 8)
“Big boss Season 11 ನನ್ನಂತಹ ಸಾಮಾನ್ಯನ ಪಾಲಿಗೆ ಮರೆಯಲಾಗದ ಅತ್ಯದ್ಭುತ ಅವಕಾಶ. ಕರ್ನಾಟಕದ ಯಾವುದೋ ಮೂಲೆಯಲ್ಲಿ ಇದ್ದ ನನಿಗೆ ಈ ವೇದಿಕೆ ದೊರೆತದ್ದು ಅದು ನಿಮ್ಮಿಂದ.. ಅಂತಹ ದೊಡ್ಡ ವೇದಿಕೆಯಲ್ಲಿ ಎರಡು ವಾರಗಳನ್ನು ಕಳೆದರೂ ಅದು ಜನ್ಮಗಳ ಪುಣ್ಯ”
(4 / 8)
ಅಂತದ್ದರಲ್ಲಿ ನನಗೆ ನೀವು ಬರೋಬ್ಬರಿ 110... ದಿನಗಳನ್ನು ಕಳೆಯುವ ಅವಕಾಶವನ್ನು ನೀಡಿದ್ದೀರಿ. ಅಷ್ಟು ದೊಡ್ಡ ಮನೆಯಲ್ಲಿ ನಾನು ಮಾಡಿದ ತಪ್ಪುಗಳನ್ನು ಕ್ಷಮಿಸಿದ್ದೀರಿ.. ನಾನು ಅತ್ತಾಗ ಹೆಗಲಾಗಿ ಜೊತೆಯಾಗಿದ್ದೀರಿ. ನನ್ನ ನಗುವಿನಲ್ಲಿ ನೀವು ಖುಷಿ ಕಂಡಿದ್ದೀರಿ"
(5 / 8)
"ಅಂದು ಬೊಗಸೆಯಷ್ಟು ಪ್ರೀತಿಯನ್ನು ಬಯಸಿದವನು ನಾನು. ಇಂದು ಆಗಸದಷ್ಟು ವಿಶಾಲವಾದ ಪ್ರೀತಿ, ಬೆಂಬಲ, ಅಭಿಮಾನ ನಿಮ್ಮಿಂದ ದೊರೆತಿದೆ. ಸಹಸ್ರ ಸಹಸ್ರ ಜನ್ಮಗಳನ್ನು ಎತ್ತಿ ಬಂದರೂ ಇದನ್ನು ನಾನು ತೀರಿಸಲು ಅಸಾಧ್ಯ"
(6 / 8)
“ಮಾತುಗಳು ಬರದಾಗಿವೆ. ನುಡಿ ಗದ್ಗದಿತವಾಗುತಿದೆ. ನೀವು ಕೊಟ್ಟ ಸಹಕಾರಕ್ಕೆ ಧನ್ಯವಾದ ತುಂಬಾ ಚಿಕ್ಕ ಮಾತು. ಆದರೆ ಅದನ್ನು ಬಿಟ್ಟು ನನ್ನಿಂದ ಏನೂ ಹೇಳಲು ಸಾಧ್ಯವಿಲ್ಲ”
(7 / 8)
"ನನ್ನನ್ನು ಪ್ರೀತಿಸಿ,ಬೆಂಬಲಿಸಿದ ಕರುನಾಡಿನ ಎಲ್ಲಾ ನನ್ನ ಮನೆಯವರಿಗೆ ನಿಮ್ಮ ಮನೆ ಮಗನಿಂದ ತುಂಬು ಹೃದಯದ ಅನಂತ ಅನಂತ ಧನ್ಯವಾಗಳು"
ಇತರ ಗ್ಯಾಲರಿಗಳು