Bigg Boss Kannada 11: ಬಿಗ್ ಬಾಸ್ ಫಿನಾಲೆಗೆ ಇನ್ನೋಂದೇ ವಾರ ಬಾಕಿ; ಇವರೇ ನೋಡಿ ಈಗುಳಿದ ಸ್ಪರ್ಧಿಗಳು
- Bigg Boss Kannada 11: ಬಿಗ್ ಬಾಸ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಸಾಕಷ್ಟು ವೀಕ್ಷಕರಿಗೆ ಈ ಸಂಗತಿ ಬೇಸರ ತಂದಿದೆಯಾದರೂ, ಈ ಬಾರಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
- Bigg Boss Kannada 11: ಬಿಗ್ ಬಾಸ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಸಾಕಷ್ಟು ವೀಕ್ಷಕರಿಗೆ ಈ ಸಂಗತಿ ಬೇಸರ ತಂದಿದೆಯಾದರೂ, ಈ ಬಾರಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
(1 / 9)
ಜನವರಿ 18 ಹಾಗೂ 19ರಂದು ನಡೆದ ಕಿಚ್ಚನ ಪಂಚಾಯ್ತಿ, ಬಿಗ್ ಬಾಸ್ ಸೀಸನ್ 11ರ ಕೊನೆಯ ಪಂಚಾಯ್ತಿಯಾಗಿತ್ತು.
(Colors Kannada)(2 / 9)
ಮುಂದಿನ ವಾರ ಅಂದರೆ ಜನವರಿ 16ರಂದು ಬಿಗ್ ಬಾಸ್ ವಿನ್ನರ್ ಯಾರು ಎಂಬ ಮಾಹಿತಿ ಲಭ್ಯವಾಗಲಿದೆ. ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇದೆ. ಕಿಚ್ಚ ಸುದೀಪ್ ನಿರೂಪಣೆ ಮಾಡುವ ಕೊನೆಯ ಸೀಸನ್ ಇದಾಗಿದೆ.
(Colors Kannada)(3 / 9)
ಬಿಗ್ ಬಾಸ್ ಸೀಸನ್ 11ರ ಗೆಲುವಿನ ಓಟದಲ್ಲಿ 5 ಜನ ಸ್ಪರ್ಧಿಗಳಿದ್ದಾರೆ. ತ್ರಿವಿಕ್ರಂ ಒಬ್ಬ ಬಲಶಾಲಿ ಆಟಗಾರನಾಗಿದ್ದು ಗೆಲ್ಲುವ ಸಾಧ್ಯತೆ ಇದೆ.
(Colors Kannada)(4 / 9)
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದರೂ, ಫಿನಾಲೆವರೆಗೂ ಉಳಿದುಕೊಂಡ ಸ್ಪರ್ಧಿಯಾಗಿ ರಜತ್ ಇದ್ದಾರೆ.
(Colors Kannada)(5 / 9)
ಸದಾ ಗೌತಮಿ ಹಾಗೂ ಉಗ್ರಂ ಮಂಜು ಜತೆಯಾಗಿರುತ್ತಿದ್ದರು, ಆದರೆ ಈಗ ಉಗ್ರಂ ಮಂಜು ಮಾತ್ರ ಫಿನಾಲೆಗೆ ಆಯ್ಕೆಯಾಗಿದ್ದಾರೆ.
(Colors Kannada)(6 / 9)
ಮೋಕ್ಷಿತಾ ಪೈ ಫಿನಾಲೆಗೆ ಹೋಗಿ ಈ ಬಾರಿ ಗೆಲ್ಲುವ ಮಹಿಳಾ ಸ್ಪರ್ಧಿ ಆಗಬುಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.
(Colors Kannada)(7 / 9)
ಇನ್ನು ಹನುಮಂತು ಅವರಿಗೆ ಬಿಗ್ ಬಾಸ್ ಗೆಲ್ಲುವ ಎಲ್ಲ ಅರ್ಹತೆ ಇದೆ. ಇವರು ಪ್ರಾಮಾಣಿಕ ಆಟ ಆಡಿದ್ದಾರೆ. ಇವರಿಗೆ ಓಟ್ ಮಾಡಿ, ಗೆಲ್ಲಿಸಿ ಎಂದು ಸಾಕಷ್ಟು ಜನ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ.
(Colors Kannada)(8 / 9)
ಮಹಿಳಾ ಸ್ಪರ್ಧಿಯಾಗಿ ಫಿನಾಲೆಗೆ ಕಾಲಿಡಲಿರುವ ಭವ್ಯಾ ಗೌಡ ಬಿಗ್ ಬಾಸ್ ಗೆಲ್ಲುವುದು ಅನುಮಾನ ಎಂದೇ ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ.
(Colors Kannada)ಇತರ ಗ್ಯಾಲರಿಗಳು