Bigg Boss Kannada 11: ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು.. ಹಾಡಿನ ಮೂಲಕ ರಜತ್‌ ಎದುರು ತೊಡೆತಟ್ಟಿದ ಹನುಮಂತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada 11: ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು.. ಹಾಡಿನ ಮೂಲಕ ರಜತ್‌ ಎದುರು ತೊಡೆತಟ್ಟಿದ ಹನುಮಂತು

Bigg Boss Kannada 11: ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು.. ಹಾಡಿನ ಮೂಲಕ ರಜತ್‌ ಎದುರು ತೊಡೆತಟ್ಟಿದ ಹನುಮಂತು

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಫಿನಾಲೆಗೆ ಇನ್ನೇನು ಹೆಚ್ಚು ದಿನ ಉಳಿದಿಲ್ಲ. ಇನ್ನೊಂದೇ ವಾರ ಬಾಕಿ ಇದೆ. ಈ ನಡುವೆ, ಭಾನುವಾರದ ಸಂಚಿಕೆಯಲ್ಲಿ ಯಾವ ಸ್ಪರ್ಧಿ ಹಿಟ್‌, ಯಾರು ಬ್ಲಾಕ್‌ ಬಸ್ಟರ್‌, ಯಾರು ಪ್ಲಾಪ್‌ ಎಂಬ ಚಟುವಟಿಕೆ ನೀಡಿದ್ದಾರೆ ಸುದೀಪ್‌. ಇದರಲ್ಲಿ ಹಳ್ಳಿ ಹಕ್ಕಿ ಹನುಮಂತು, ರಜತ್‌ ವಿರುದ್ಧವೇ ತೊಡೆತಟ್ಟಿದ್ದಾರೆ.  

ಬಿಗ್‌ ಬಾಸ್‌ ಕನ್ನಡ 11ರ ಭಾನುವಾರದ ಸೂಪರ್‌ ಸಂಡೇ ವಿಥ್‌ ‌ಬಾದ್ಶಾ ಸುದೀಪ ಏಪಿಸೋಡ್‌ನಲ್ಲಿ ಹಿಟ್‌ ಪ್ಲಾಪ್‌ ಚಟುವಟಿಕೆ ನಡೆದಿದೆ.
icon

(1 / 8)

ಈ ಚಟುವಟಿಕೆಯಲ್ಲಿ ಮನೆಯ ಯಾವ ಸ್ಪರ್ಧಿ ಬ್ಲಾಕ್‌ ಬಸ್ಟರ್‌, ಹಿಟ್‌ ಅಥವಾ ಪ್ಲಾಪ್‌ ಎಂದು ಹೇಳಬೇಕು. ಈ ಆಕ್ಟಿವಿಟಿಯಲ್ಲಿ ರಜತ್‌ಗೆ ಗುನ್ನ ಕೊಟ್ಟಿದ್ದಾರೆ ಹನುಮಂತು. 
icon

(2 / 8)

ರಜತ್‌ ಅಣ್ಣ ಸಿಲ್ಲಿ ರೀಸನ್‌, ಜುಟ್ಟು ರೀಸನ್‌ ಅಂತ ಹೇಳ್ತಾ ಓಡಾಡ್ತಾನೆ. ಅವನಿಗೇ ಸರಿಯಾಗಿ ರೀಸನ್‌ ಕೊಡಲು ಬರುವುದಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ ಹನುಮಂತು. 
icon

(3 / 8)

ಇದಕ್ಕೆ ಪ್ರತಿಯಾಗಿ, ಮಾವ ಇದ್ದಾಗ, ಪ್ರತಿ ಸಲವೂ ಮಾವ ಮಾವ ಅಂತ ಹೇಳ್ತಾ ಅವನಿಗೇ ಚುಚ್ತಾಯಿದ್ದೆ. ಮಾವ ಹೋದಮೇಲೆ ನಿನ್ನ ಡವ್‌ ಬಹಳಷ್ಟು ನೋಡಿದ್ದೇವೆ. ನಾನೂ ನೋಡಿಲ್ಲ ನೀನು ಸ್ಟ್ರಾಂಗ್‌ ರೀಸನ್‌ ಕೊಟ್ಟಿರೋದನ್ನ ಎಂದಿದ್ದಾರೆ.
icon

(4 / 8)

ಫಸ್ಟ್‌ ಸಿಲ್ಲಿ ರೀಸನ್‌ ಅರ್ಥ ಮಾಡ್ಕೋ, ಆಮೇಲೆ ಸ್ಟ್ರಾಂಗ್‌ ರೀಸನ್‌ ಕೊಡಿವಿರಂತೆ ಎಂದೂ ರಜತ್‌ ಮಾತಿಗೆ ಎದುರುತ್ತರ ನೀಡಿದ್ದಾರೆ. ಜತೆಗೆ ಹಾಡೂ ಹಾಡಿದ್ದಾರೆ. 
icon

(5 / 8)

ಮಾತು ಕಲೀತಿನಂತ ನೀನು ಮಾತನಾಡಬ್ಯಾಡ... ಮಾತು ಮನಿ ಕೆಡಸ್ತು, ತೂತು ಒಲಿ ಕೆಡಸ್ತು ಅನ್ನೋದು ಮರಿಬ್ಯಾಡ ಎಂದು ರಜತ್‌ಗೆ ಮುಖಕ್ಕೆ ಹೊಡೆದಂತೆ ಗುದ್ದು ಕೊಟ್ಟಿದ್ದಾರೆ ಹನುಮಂತು.  
icon

(6 / 8)

ಹನುಮಂತನ ಈ ಹಾಡಿನ ಕಿಚ್ಚ ಸುದೀಪ್‌ ಸಹ ಬಿದ್ದು ಬಿದ್ದ ನಕ್ಕಿದ್ದಾರೆ. ಕಿಚ್ಚನ ಮುಂದೆ ಕುಳಿತ ಆಡಿಯೆನ್ಸ್‌ ಸಹ ಹನುಮಂತು ಮಾತಿಗೆ ಶಿಳ್ಳೆ ಚಪ್ಪಾಳೆ ತಟ್ಟಿದ್ದಾರೆ. 
icon

(7 / 8)

ತ್ರಿವಿಕ್ರಮ್, ಹನುಮಂತು ಮತ್ತು ಮೋಕ್ಷಿತಾ ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಇವರನ್ನು ಬಿಟ್ಟು ಉಗ್ರಂ ಮಂಜು, ರಜತ್‌, ಧನರಾಜ್‌, ಭವ್ಯಾ ಗೌಡ ಪೈಕಿ ಭಾನುವಾರ ಒಬ್ಬರು ಎಲಿಮಿನೇಟ್‌ ಆಗಲಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು