ಹೊರಬಿತ್ತು ರೋಷ ಆಕ್ರೋಶ, ಬಿತ್ತು ಗೂಸಾ ಮೇಲೊಂದು ಗೂಸಾ! ಪಂಚ್ ಕೊಡುವ ಮೂಲಕ ಕೊನೆಗೂ ಸಿಟ್ಟು ತೀರಿಸಿಕೊಂಡ ಸ್ಪರ್ಧಿಗಳು
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆಯೇ ಆಕ್ರೋಶದ ಕಾವು ಹೆಚ್ಚಾಗಿತ್ತು. ಅದನ್ನು ಹೊರಗೆ ಹಾಕುವ ಸಲುವಾಗಿಯೇ ಭಾನುವಾರದ ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ತಮಗೆ ಯಾರ ಮೇಲೆ ಸಿಟ್ಟಿದೆ ಎಂಬುದನ್ನು ಹೇಳಿಕೊಂಡು, ಅವರ ಭಾವಚಿತ್ರಕ್ಕೆ ಕೈಗೆ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡು ಪೆಟ್ಟು ಕೊಟ್ಟಿದ್ದಾರೆ. ಯಾರಿಗೆ ಯಾರು ಪೆಟ್ಟು ಕೊಟ್ರು?

(1 / 7)
ಆರೋಪ ಪ್ರತ್ಯಾರೋಪಗಳೇ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಹೇಳಿ ಬರುತ್ತಿವೆ. ಅವರ ಮೇಲೆ ಇವರು, ಇವರ ಮೇಲೆ ಗೂಬೆ ಕೂರಿಸುತ್ತ ಸೇಫ್ ಗೇಮ್ ಜತೆಗೆ ಮೈಂಡ್ ಗೇಮ್‌ನಲ್ಲಿಯೂ ಮುಳುಗಿದ್ದಾರೆ.
(Colors Kannada)(2 / 7)
ಕೆಲವರು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರೆ, ಇನ್ನು ಕೆಲವರು ಬೆನ್ನಹಿಂದೆ ಚೂರಿ ಹಾಕುವ ಕೆಲಸವೂ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿದೆ.
(3 / 7)
ಇದೀಗ ಭಾನುವಾರ ಸೂಪರ್ ಸಂಡೇ ವಿಥ್ ಸುದೀಪ ಶೋನಲ್ಲಿ ಕಿಚ್ಚ ಸುದೀಪ್ ಎದುರು ಮನೆ ಮಂದಿಯ ಆಕ್ರೋಶ ಹೊರಬಿದ್ದಿದೆ. ತಮಗೆ ಯಾರ ಮೇಲೆ ಸಿಟ್ಟಿದೆ ಅದನ್ನು ತೀರಿಸಿಕೊಳ್ಳಲು ಬಿಗ್ ಬಾಸ್ ಅವಕಾಶ ಮಾಡಿಕೊಟ್ಟಿದ್ದಾರೆ.
(4 / 7)
ತಮಗೆ ಯಾರ ಮೇಲೆ ಸಿಟ್ಟಿದೆ ಎಂಬುದನ್ನು ಹೇಳಿಕೊಂಡು, ಅವರ ಭಾವ ಚಿತ್ರ ಇರುವ ಬ್ಯಾಗ್‌ಗೆ ಕೈಗೆ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡು ಪೆಟ್ಟು ಕೊಡಬೇಕು. ಅದರಂತೆ ಮನೆ ಮಂದಿ ತಮಗೆ ಬೇಡ ಎನಿಸಿದರ ಹೆಸರು ಹೇಳಿ ಗುದ್ದಿದ್ದಾರೆ.
(5 / 7)
ಬಹುತೇಕ ಸ್ಪರ್ಧಿಗಳು ಉಗ್ರಂ ಮಂಜು ಅವರ ಹೆಸರು ಹೇಳಿ ಅವರಿಗೆ ಒಬ್ಬರಾದ ಮೇಲೆ ಒಬ್ಬರು ಗುದ್ದು ಕೊಟ್ಟಿದ್ದಾರೆ. ಪ್ರತಿ ಸ್ಪರ್ಧಿ ತಲಾ ಇಬ್ಬರ ಹೆಸರನ್ನು ಇಲ್ಲಿ ಸೂಚಿಸಬೇಕಿದೆ.
(6 / 7)
ಮೋಕ್ಷಿತಾ ಪೈ ಮಂಜು ಅವರ ಹೆಸರನ್ನು ತೆಗೆದುಕೊಂಡರೆ, ಚೈತ್ರಾ ಕುಂದಾಪುರ ಸಹ ಅವರ ಹೆಸರಿಗೇ ಗುದ್ದು ಕೊಟ್ಟಿದ್ದಾರೆ.
ಇತರ ಗ್ಯಾಲರಿಗಳು