Bigg Boss 11: ಏಟಿಗೆ ಏಟು ಎಂದು ಮಂಜು ಅವರನ್ನು ನಾಮಿನೇಟ್ ಮಾಡಿದ ಭವ್ಯಾ ಗೌಡ; ಗೌತಮಿ ಬಿಟ್ಟು ಬೇರೆ ಯಾರೂ ಹೆಣ್ಮಕ್ಳೇ ಅಲ್ವ ಎಂದಿದ್ಯಾಕೆ?
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕೊನೆಯ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಎದುರಾಳಿ ಸ್ಪರ್ಧಿಯ ಫೊಟೋ ಸುಟ್ಟು ನಾಮಿನೇಷನ್ ಮಾಡಲಾಗಿದೆ. ಭವ್ಯಾ ಗೌಡ ಗೌತಮಿ ಬಿಟ್ಟು ಬೇರೆ ಯಾರೂ ಹೆಣ್ಮಕ್ಳೇ ಅಲ್ವ ಎಂದಿದ್ಯಾಕೆ? ಓದಿ.
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕೊನೆಯ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಎದುರಾಳಿ ಸ್ಪರ್ಧಿಯ ಫೊಟೋ ಸುಟ್ಟು ನಾಮಿನೇಷನ್ ಮಾಡಲಾಗಿದೆ. ಭವ್ಯಾ ಗೌಡ ಗೌತಮಿ ಬಿಟ್ಟು ಬೇರೆ ಯಾರೂ ಹೆಣ್ಮಕ್ಳೇ ಅಲ್ವ ಎಂದಿದ್ಯಾಕೆ? ಓದಿ.
(1 / 9)
ಭವ್ಯಾ ಗೌಡ ಈ ಬಾರಿ ಉಗ್ರಂ ಮಂಜು ಅವರಿಗೆ ಏಟಿಗೆ ಏಟು ಎನ್ನುತ್ತಾ ಒಂದಷ್ಟು ಕಟುವಾದ ಕಾರಣ ನೀಡಿದ್ದಾರೆ.
(Colors Kannada)(2 / 9)
ಟಾಸ್ಕ್ ಆಡುವಾಗ ಗೌತಮಿ ಅವರ ಮೂಗು ತರಚುತ್ತಿದೆ ಎಂದ ತಕ್ಷಣ ಯಾರನ್ನೂ ಲೆಕ್ಕಿಸದೆ ನೀವು ಎಲ್ಲರ ಮೇಲೆ ದಾಳಿ ಮಾಡಿದ್ದೀರಿ. “ಉಳಿದವರು ಹೆಣ್ಣು ಮಕ್ಕಳಲ್ವ?” ಎಂದು ಪ್ರಶ್ನೆ ಮಾಡಿದ್ದಾರೆ.
(Colors Kannada)(3 / 9)
ಆ ಸಂದರ್ಭದಲ್ಲಿ ಗೌತಮಿ ಮುಗುಳು ನಗುತ್ತಾ ನಿಂತಿರುತ್ತಾರೆ. “ನನಗೆ ಒಳ್ಳೆವರು ಅಂದ್ರೆ ಒಳ್ಳೆಯವರು.. ನೀನು ಹೇಳಿದ ಹಾಗೆ ಕೇಳಿಕೊಂಡು ಇರೋಕಾ ನಾನು ಬಿಗ್ ಬಾಸ್ ಮನೆಗೆ ಬಂದಿರೋದು?” ಎಂದು ಉಗ್ರಂ ಮಂಜು ಪ್ರಶ್ನೆ ಮಾಡುತ್ತಾರೆ.
(Colors Kannada)(4 / 9)
ಮತ್ತೆ ಗೌತಮಿ ಹೇಳಿದ ಹಾಗೆ ಕೇಳಿಕೊಂಡು ಇರೋಕಾ ನೀವು ಬಂದಿರೋದು? ಎಂದು ಭವ್ಯಾ ಮರು ಪ್ರಶ್ನೆ ಮಾಡುತ್ತಾರೆ. ಈ ರೀತಿಯಾಗಿ ಅವರಿಬ್ಬರ ನಡುವೆ ಮಾತಿನ ಯುದ್ಧ ನಡೆದಿದೆ.
(Colors Kannada)(5 / 9)
ನಂತರ ಉಗ್ರಂ ಮಂಜು ಅವರ ಫೋಟೋ ಸುಟ್ಟು ಭವ್ಯಾ ಗೌಡ ನಾಮಿನೇಟ್ ಮಾಡಿದ್ದಾರೆ. ಇನ್ನೂ ಸಾಕಷ್ಟು ಸ್ಪರ್ಧಿಗಳು ಉಗ್ರಂ ಮಂಜು ಅವರನ್ನು ನಾಮಿನೇಟ್ ಮಾಡಿದ್ಧಾರೆ.
(Colors Kannada)(7 / 9)
ಭವ್ಯಾ ಗೌಡ ಅವರ ಬಗ್ಗೆ ನಂತರ ಮಂಜು ಮಾತಾಡುತ್ತಾರೆ. ನೀವೂ ಸಹ ತ್ರಿವಿಕ್ರಂ ಹೇಳಿ ಹಾಗೇ ಕೇಳಿಕೊಂಡು ಆಟ ಆಡುತ್ತಿದ್ದೀರಾ ಎಂದು ಹೇಳಿದ್ದಾರೆ.
(Colors Kannada)(8 / 9)
ಜನರ ಅಭಿಪ್ರಾಯವನ್ನು ತೆಗೆದುಕೊಂಡು ಈ ಪ್ರೋಮೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಸಾಕಷ್ಟು ಜನ ಉಗ್ರಂ ಮಂಜು ಅವರ ಪರವಾಗಿದ್ದಾರೆ.
(Colors Kannada)ಇತರ ಗ್ಯಾಲರಿಗಳು