Namratha Gowda: ತನ್ನ ಬದುಕಿನ ಮೊದಲ ಮತ್ತು ಕೊನೆಯ ಟಾಕ್ಸಿಕ್ ರಿಲೇಷನ್‌ಷಿಪ್ ಬಗ್ಗೆ ಬಾಯ್ಬಿಟ್ಟ ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ
- Namratha Gowda: ಕಾಲೇಜು ಓದುವ ದಿನಗಳಲ್ಲಿ ಬಹುತೇಕರಿಗೆ ಲವ್, ರಿಲೇಷನ್‌ಷಿಪ್ ಇರುತ್ತದೆ. ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ ನಟಿ ನಮ್ರತಾ ಗೌಡ ಕಾಲೇಜು ಬದುಕಿನಲ್ಲಿಯೂ ಇಂತಹ ಲವ್ ಸ್ಟೋರಿ ನಡೆದಿತ್ತು. ಯೂಟ್ಯೂಬ್ ಚಾನೆಲ್ "ರಾಜೇಶ್ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಇವರು ತನ್ನ ಪಿಯುಸಿ ಟಾಕ್ಸಿಕ್ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ.
- Namratha Gowda: ಕಾಲೇಜು ಓದುವ ದಿನಗಳಲ್ಲಿ ಬಹುತೇಕರಿಗೆ ಲವ್, ರಿಲೇಷನ್‌ಷಿಪ್ ಇರುತ್ತದೆ. ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ ನಟಿ ನಮ್ರತಾ ಗೌಡ ಕಾಲೇಜು ಬದುಕಿನಲ್ಲಿಯೂ ಇಂತಹ ಲವ್ ಸ್ಟೋರಿ ನಡೆದಿತ್ತು. ಯೂಟ್ಯೂಬ್ ಚಾನೆಲ್ "ರಾಜೇಶ್ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಇವರು ತನ್ನ ಪಿಯುಸಿ ಟಾಕ್ಸಿಕ್ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ.
(1 / 11)
Bigg Boss Namratha Gowda story: ಜನಪ್ರಿಯ ಕನ್ನಡ ಯೂಟ್ಯೂಬ್ ಚಾನೆಲ್ "ರಾಜೇಶ್ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ. ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ, ಕನ್ನಡ ಸೀರಿಯಲ್ ನಟಿ ನಮ್ರತಾ ಗೌಡ ಅವರು ಪಿಯುಸಿಯಲ್ಲಿ ಓದುತ್ತಿರುವಾಗ ನಡೆದ ಕಥೆಯನ್ನು ಅವರು ಹೇಳಿದ್ದಾರೆ.
(2 / 11)
"ಕಾಲೇಜು ಲೈಫ್‌ನಲ್ಲಿ ಲವ್ ಏನಾದರೂ ಇತ್ತ?" ಎಂಬ ಪ್ರಶ್ನೆಗೂ ನಮ್ರತಾ ಉತ್ತರಿಸಿದ್ದಾರೆ. "ಇದು ನನ್ನ ಅತ್ಯಂತ ಖಾಸಗಿ ಪ್ರಶ್ನೆ. ಲವ್ ಬಗ್ಗೆ ಎಲ್ಲಾ ಮಾತನಾಡೋದು ನನಗೆ ಅನ್‌ಕಂಫರ್ಟೆಬಲ್ ಆಗುತ್ತದೆ. ನಾನು ಏನೂ ಮಾಡಿದರೂ ಅಪ್ಪನಿಗೆ ಅಮ್ಮನಿಗೆ ಗೊತ್ತೇ ಇರುತ್ತದೆ. ನಾನು ಓಪನ್ ಆಗಿ ಎಲ್ಲಾ ಹೇಳ್ತಿನಿ" ಎಂದರು.
(3 / 11)
" ನನ್ನ ಜೀವನದಲ್ಲಿಯೂ ಒಂದು ಲವ್ ಆಗಿತ್ತು. ಅದೇ ಫಸ್ಟ್ ಮತ್ತು ಅದೇ ಲಾಸ್ಟ್. ಆಗ ಟೆನ್ತ್ ಮುಗಿದಿತ್ತು. ಪಿಯು ಕಾಲೇಜಿಗೆ ಪ್ರವೇಶಿಸಿದ ಸಮಯವದು. ನಾನು ಹುಡುಗರ ತರಹನೇ ಬೆಳೆದವಳು. ಹುಡುಗರೇ ಫ್ರೆಂಡ್ಸ್ ಇರ್ತಾ ಇದ್ರು. ಅಲ್ಲಿಯವರೆಗೂ ಯಾರ ಮೇಲೆ ಕೂಡ ಆ ಫೀಲಿಂಗ್ ಬಂದಿರಲಿಲ್ಲ" ಎಂದು ಅವರು ಹೇಳಿದ್ದಾರೆ.
(4 / 11)
"ಕಾಲೇಜಿಗೆ ಹೋಗಬೇಕಾದರೆ ಲವ್ ಮಾಡಬೇಕಾಗಿ ಬಂತು. ನಾನು ಮುಂದೆ ಹೋಗಿ ಮಾಡಿದ ಲವ್ ಅಲ್ಲ ಅದು. ತುಂಬಾ ಕಾಡಿಸಿ ಬೇಡಿ ಪಡೆದ ಲವ್ ಅದು. ನಾನು ಯಾರನ್ನೂ ಕೂಡ ಅಪ್ರೋಚ್ ಮಾಡಲು ಹೋಗಿಲ್ಲ. ಅವನೇ ಕಾಡಿಸ್ತಾ ಇದ್ದ. ನನಗೆ ಇಷ್ಟ ಆಗ್ತಾ ಇರಲಿಲ್ಲ" ಎಂದು ನಮ್ರತಾ ಗೌಡ ತನ್ನ ಲವ್ ಸ್ಟೋರಿ ಹೇಳುತ್ತಾ ಹೋಗಿದ್ದಾರೆ.
(5 / 11)
"ಇವನು ಯಾರು ನನ್ನ ಹಿಂದೆ ಬಿದ್ದಿದ್ದಾನೆ ಅಂತ ಹೇಟ್ ಮಾಡ್ತಾ ಇದ್ದೆ. ಸುಮಾರು ಮೂರು ತಿಂಗಳ ಕಳೆದ ಬಳಿಕ ನನಗೂ ಫೀಲಿಂಗ್ ಬಂತು. ನಾನು ಕೂಡ ಯಸ್ ಎಂದೆ. ಈ ಲವ್ ಸ್ಟೋರಿ ಆಗ ಕಾಲೇಜಿನಲ್ಲಿ ತುಂಬಾ ಫೇಮಸ್ ಆಗಿತ್ತು" ಎಂದು ನಮ್ರತಾ ಹೇಳಿದ್ದಾರೆ.
(6 / 11)
"ಈ ವಿಷಯವನ್ನು ಹೆತ್ತವರಲ್ಲಿಯೂ ಹೇಳಿದ್ದೆ. ಕಾಲೇಜಿಗೆ ಹೋಗುವಾಗ ಒಬ್ಬ ಕಾಡಿಸ್ತಾನೆ. ಮೆಸಜ್ ಮಾಡ್ತಾನೆ ಎಂದು ಹೇಳಿದ್ದೆ. ಅದು ನನ್ನ ಜೀವನದಲ್ಲಿ ಫಸ್ಟ್ ಮತ್ತು ಲಾಸ್ಟ್ ರಿಲೇಷನ್‌ಶಿಪ್. ಆಗ ನನಗೆ ಕಮಿಟ್‌ಮೆಂಟ್, ರಿಲೇಷನ್‌ಶಿಪ್ ಅಂದರೆ ಏನು ಅಂತ ಗೊತ್ತಿರಲಿಲ್ಲ . ಆ ವ್ಯಕ್ತಿಗೂ ಗೊತ್ತಿತ್ತೋ ಗೊತ್ತಿಲ್ಲ" ಎಂದರು.
(7 / 11)
"ಯಾಕೆಂದರೆ ನಾವು ಆಗ ತುಂಬಾ ಯಂಗ್ ಇದ್ದೆವು, 15-16 ವರ್ಷ ಪ್ರಾಯ. ಪಿಯುಸಿ ಮುಗಿದ ಬಳಿಕ ನಾನು ನಟನೆಯತ್ತ ಗಮನ ನೀಡಿದೆ. ಆ ಮನುಷ್ಯನಿಗೆ ಗಮನ ಕೊಡಲು ಆಗುತ್ತಿರಲಿಲ್ಲ. ಅವನೂ ಡೈವರ್ಟ್ ಆಗ್ತಾ ಇದ್ದ. ನನಗೂ ಕಿರಿಕಿರಿ ಆಗ್ತಾ ಇತ್ತು. ಅದು ತುಂಬಾ ಟಾಕ್ಸಿಕ್ ರಿಲೇಷನ್‌ಶಿಪ್" ಎಂದರು.
(8 / 11)
"ನನಗೆ ಆ ಏಜ್‌ನಲ್ಲಿ ಹೇಗೆ ಹ್ಯಾಂಡಲ್ ಮಾಡಬೇಕು, ಅವನಿಗೂ ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಾಗ್ತ ಇರಲಿಲ್ಲ. ನನಗೆ ಭಾವನಾತ್ಮಕವಾಗಿ ನೋವು ತುಂಬಾ ಆಗ್ತಾ ಇತ್ತು. ಮೆಂಟಲಿ ಡ್ರೈನ್ ಆಗ್ತಾ ಇದ್ದೆ. ತುಂಬಾ ಅಳ್ತಾ ಇದ್ದೆ. ಅವನೂ ತುಂಬಾ ಸಫರ್ ಆಗ್ತಾ ಇದ್ದ. ನಾನೂ ಸಫರ್ ಆಗ್ತಿದ್ದೆ. ಕೊನೆಗೆ ಆ ಲವ್‌ನಿಂದ ಹೊರಬಂದೆ" ಎಂದು ತನ್ನ ಕಥೆಯನ್ನು ನಮ್ರತಾ ಗೌಡ ಹೇಳಿದ್ದಾರೆ.
(9 / 11)
ನಮ್ರತಾ ಗೌಡ ಕನ್ನಡ ಕಿರುತೆರೆ ನಟಿ. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ಹೆಚ್ಚಿನ ಜನಪ್ರಿಯತೆ ಪಡೆದರು. 1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.
(10 / 11)
2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಸೀರಿಯಲ್ ಪ್ರಯಾಣ ಆರಂಭಿಸಿದರು. ಇದಾದ ಬಳಿಕ ಪುಟ್ಟ ಗೌರಿ ಸೀರಿಯಲ್‌ನಲ್ಲಿ ಹಿಮಾ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಹೃದಯ ತಟ್ಟಿದರು.
(11 / 11)
ನಮ್ರತಾ ಗೌಡ ಒಳ್ಳೆಯ ಡ್ಯಾನ್ಸರ್ ಎನ್ನುವುದನ್ನೂ ಈಗಾಗಲೇ ಹಲವು ಬಾರಿ ಸಾಬೀತು ಪಡಿಸಿದ್ದಾರೆ. ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ಜನಪ್ರಿಯ ಡ್ಯಾನ್ಸರ್ ಕಿಶನ್ ಬಿಳಗಲಿ ಜತೆ ಹಲವು ವಿಡಿಯೋಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇವರು ನಾಗಿಣಿ 2 ಸೀರಿಯಲ್‌ನಲ್ಲಿ ಶಿವಾನಿ ಪಾತ್ರದಲ್ಲಿ ನಟಿಸಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಫಿನಾಲೆ ತಲುಪುವ ಕೊನೆಯ ವಾರ ತನಕ ಪ್ರಬಲವಾಗಿ ಸ್ಪರ್ಧೆ ನೀಡಿದ್ದರು.
ಇತರ ಗ್ಯಾಲರಿಗಳು