ಬಿಗ್ ಬಾಸ್ ಮನೆಯಲ್ಲಿ ಒಬ್ಬಂಟಿ ಆಗ್ತಾರಾ ಜಗದೀಶ್? ಮುನಿಸುಕೊಂಡು ಮಾತಾಡಲ್ಲ ಎಂದ ಸುರೇಶ್
- ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ವರ್ತನೆಯಿಂದ ಕೆಲವರು ಬೇಸರಗೊಂಡಿದ್ದಾರೆ. ಸುರೇಶ್ ಅವರು ರಾತ್ರಿ ಸಮಯದಲ್ಲಿ ಟೀ ಮಾಡುತ್ತಿರುವ ಸಂದರ್ಭದಲ್ಲಿ ಜಗದೀಶ್ ಹಾಗೂ ಸುರೇಶ್ ಅವರ ನಡುವೆ ಮಾತುಕತೆ ಆಗಿದೆ.
- ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ವರ್ತನೆಯಿಂದ ಕೆಲವರು ಬೇಸರಗೊಂಡಿದ್ದಾರೆ. ಸುರೇಶ್ ಅವರು ರಾತ್ರಿ ಸಮಯದಲ್ಲಿ ಟೀ ಮಾಡುತ್ತಿರುವ ಸಂದರ್ಭದಲ್ಲಿ ಜಗದೀಶ್ ಹಾಗೂ ಸುರೇಶ್ ಅವರ ನಡುವೆ ಮಾತುಕತೆ ಆಗಿದೆ.
(1 / 8)
ಸುರೇಶ್ ಟೀ ಮಾಡುತ್ತಾ ಇರುತ್ತಾರೆ. ಆಗ ಅಲ್ಲಿಗೆ ಜಗದೀಶ್ ಬರುತ್ತಾರೆ. ಬಂದು ನನಗೆ ಗಟ್ಟಿ ಟೀ ಬೇಕು ಎಂದು ಹೇಳುತ್ತಾರೆ. ಆದರೆ ಅದನ್ನು ಸುರೇಶ್ ಒಪ್ಪುವುದಿಲ್ಲ. (ಕಲರ್ಸ್ ಕನ್ನಡ)
(2 / 8)
ಇಲ್ಲ ನನಗೆ ತಿಳಿ ಟೀ ಬೇಕು. ಅದಕ್ಕಾಗಿ ನಾನು ತಿಳಿ ಟೀ ಮಾಡ್ತಾ ಇದೀನಿ ಎಂದು ಹೇಳುತ್ತಾರೆ. ಇಲ್ಲ ನನಗೆ ಗಟ್ಟಿ ಟೀನೇ ಬೇಕು ಎಂದು ಜಗದೀಶ್ ಅವರು ಇನ್ನೊಂದು ಬಾರಿ ಹೇಳುತ್ತಾರೆ. (ಕಲರ್ಸ್ ಕನ್ನಡ)
(3 / 8)
ಇಲ್ಲ ನನಗೆ ಯಾವ ರೀತಿ ಬೇಕೋ ಅದೇ ರೀತಿ ನಾನು ಮಾಡೋದು. ಈ ಮನೆಯಲ್ಲಿ 16 ಜನರಿಗೆ ನಾನು ಟೀ ಮಾಡಬೇಕು. ಮಾಡ್ತಾ ಇದೀನಿ. ನಿನಗೆ ಬೇಕಾದ್ರೆ ನೀನೇ ಮಾಡಿಕೊಂಡು ಕುಡಿ ಅಂತಾರೆ. (ಕಲರ್ಸ್ ಕನ್ನಡ)
(4 / 8)
ಆಗ ಜಗದೀಶ್ ಆಯ್ತು ಬಿಡು ಕೈಕೊಡು ಎಂದು ಹೇಳುತ್ತಾರೆ. ಆದರೆ ಸುರೇಶ್ ಅವರು ಶೇಕ್ ಹ್ಯಾಂಡ್ ಮಾಡಲು ಒಪ್ಪುವುದಿಲ್ಲ. ಈಗಾಗಲೇ ಮನೆಮಂದಿ ಎಲ್ಲರೂ ಮಾತಾಡುವುದು ನಿಲ್ಲಿಸಿದ್ದಾರೆ. (ಕಲರ್ಸ್ ಕನ್ನಡ)
(5 / 8)
ಈಗ ಸುರೇಶ್ ಕೂಡ ಮಾತಾಡೋದಿಲ್ವ ಎಂಬ ಪ್ರಶ್ನೆ ಮೂಡಿದೆ. ನೀನು ಬೇಕಾದ್ರೆ ಮಾಡ್ಕೊ, ನನಗೆ ನೀನು ಬೇಡ, ನಿನ್ನ ಮಾತೂ ಬೇಡ ಎಂದು ಹೇಳಿದ್ದಾರೆ. (ಕಲರ್ಸ್ ಕನ್ನಡ)
(6 / 8)
ಕೆಲವರಿಗೆ ಗಟ್ಟಿ ಟೀ ಬೇಕು ಎಂದು ಜಗದೀಶ್ ಮತ್ತೆ ಹೇಳುತ್ತಾರೆ. ಬೆಳಗಿಂದ ಯಾಕೆ ಈ ರೀತಿ ಮಾಡ್ತಾ ಇದೀರಾ? ಎಂದು ಕೇಳುತ್ತಾರೆ. ನಗುತ್ತಲೇ ಜಗದೀಶ್ ಮಾತಾಡ್ತಾರೆ.
(7 / 8)
ನಿನ್ನೊಬ್ಬನತ್ರ ಮಾತ್ರ ನಾನು ಕ್ಲೋಸಾಗಿ ಮಾತಾಡೋದು ಎಂದು ಜಗದೀಶ್ ಹೇಳುತ್ತಾರೆ. ಆಗ ಸುರೇಶ್ ಮತ್ತೆ ನನತ್ರ ಮಾತಾಡೋದು ಬೇಡ ಎಂದು ಹೇಳಿದ್ದಾರೆ.
ಇತರ ಗ್ಯಾಲರಿಗಳು