ಭಾರತದ ಒಲಿಂಪಿಕ್ಸ್ ಸ್ಪರ್ಧಿಗಳಲ್ಲಿ ಶಾಸಕಿಯೂ ಒಬ್ಬರು; ಚಿನ್ನಕ್ಕೆ ‘ಶೂಟ್’ ಮಾಡಲು ಬಿಹಾರದ ಎಂಎಲ್​ಎ ಸಜ್ಜು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದ ಒಲಿಂಪಿಕ್ಸ್ ಸ್ಪರ್ಧಿಗಳಲ್ಲಿ ಶಾಸಕಿಯೂ ಒಬ್ಬರು; ಚಿನ್ನಕ್ಕೆ ‘ಶೂಟ್’ ಮಾಡಲು ಬಿಹಾರದ ಎಂಎಲ್​ಎ ಸಜ್ಜು

ಭಾರತದ ಒಲಿಂಪಿಕ್ಸ್ ಸ್ಪರ್ಧಿಗಳಲ್ಲಿ ಶಾಸಕಿಯೂ ಒಬ್ಬರು; ಚಿನ್ನಕ್ಕೆ ‘ಶೂಟ್’ ಮಾಡಲು ಬಿಹಾರದ ಎಂಎಲ್​ಎ ಸಜ್ಜು

  • Jamui BJP MLA Shreyasi Singh: ಗೋಲ್ಡನ್ ಗರ್ಲ್ ಕಮ್ ಜಮುಯಿ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದು, ಶೂಟಿಂಗ್​ನಲ್ಲಿ ಚಿನ್ನದ ಪದಕಕ್ಕೆ ಶೂಟ್ ಮಾಡಲು ಸಜ್ಜಾಗಿದ್ದಾರೆ.

ಫ್ರಾನ್ಸ್​​ ರಾಜಧಾನಿ ಪ್ಯಾರಿಸ್​​​ನಲ್ಲಿ 33ನೇ ಆವೃತ್ತಿಯ ಒಲಿಂಪಿಕ್ಸ್​​​ ಜುಲೈ 26ರಿಂದ ಅಧಿಕೃತವಾಗಿ ಆರಂಭವಾಗಲಿದೆ. 117 ಕ್ರೀಡಾಪಟುಗಳ ಭಾರತ ತಂಡ ಪದಕ ಬೇಟೆಗೆ ಸಜ್ಜಾಗಿದೆ. ಹಿರಿಯರು-ಕಿರಿಯರಿಂದ ಕೂಡಿದ ತಂಡವು ಈ ಬಾರಿ ಎರಡಂಕಿ ಪದಕಗಳ ಗೆಲುವಿಗೆ ಸಜ್ಜಾಗಿದೆ.
icon

(1 / 5)

ಆದರೆ ಭಾರತದ ಒಲಿಂಪಿಕ್ಸ್ ಸ್ಪರ್ಧಿಗಳ ಪೈಕಿ ಶಾಸಕಿಯೊಬ್ಬರು ಅವಕಾಶ ಪಡೆದಿರುವುದು ವಿಶೇಷ. ಹೆಸರು ಶ್ರೇಯಸಿ ಸಿಂಗ್. ಬಿಹಾರದ ಜಮಯಿ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಿ 41 ಮತಗಳಿಂದ ಗೆದ್ದಿದ್ದಾರೆ. 2020ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
icon

(2 / 5)

ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ (ಶೂಟಿಂಗ್​) ಸ್ಫರ್ಧೆ ಮಾಡಲಿರುವ 32 ವರ್ಷದ ಶ್ರೇಯಸಿ ಅವರ ತಂದೆಯೂ ರಾಜಕಾರಣಿ. ತಂದೆ ದಿಗ್ವಿಜಯ್ ಸಿಂಗ್ ಸಹ ಹಲವು ಸಂಸದರಾಗಿದ್ದರು. ತಾಯಿ ಫತುಲ್ ಕುಮಾರಿ ಸಹ ಎಂಪಿ ಆಗಿದ್ದರು.
icon

(3 / 5)

2018ರ ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಚಿನ್ನ ಗೆದ್ದಿದ್ದ ಶ್ರೇಯಸಿ ಸಿಂಗ್ ಅವರು 2014ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. 2010ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಅವಳಿ ಬೆಳ್ಳಿ ಪದಕ ಗೆದ್ದಿದ್ದರು. 2018ರಲ್ಲಿ ಅರ್ಜುನ ಪ್ರಶಸ್ತಿಯನ್ನೂ ಜಯಿಸಿದ್ದರು.
icon

(4 / 5)

ಭಾರತದ ಪರ ಸ್ಪರ್ಧಿಸಲಿರುವ 117 ಕ್ರೀಡಾಪಟುಗಳಲ್ಲಿ ಬಿಹಾರದಿಂದ ಒಲಿಂಪಿಕ್ಸ್​ಗೆ ಆಯ್ಕೆಯಾದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಶ್ರೇಯಸಿ ಸಿಂಗ್ ಪಾತ್ರರಾಗಿದ್ದಾರೆ. 17 ವರ್ಷಗಳ ನಂತರ ನನ್ನ ಕನಸು ಈಡೇರಿದೆ ಎಂದು ಶ್ರೇಯಸಿ ಹೇಳಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು