3 ದಿನ ಎಟಿಎಂ ಬಂದ್ ಇರುತ್ತಾ; ಪೆಟ್ರೋಲ್, ಗ್ಯಾಸ್ ಸಿಗಲ್ವಾ? ಗೊಂದಲ ಬೇಕಿಲ್ಲ, ಸರ್ಕಾರದ ಸ್ಪಷ್ಟನೆ ಹೀಗಿದೆ
ಭಾರತದ 'ಆಪರೇಷನ್ ಸಿಂದೂರ' ಹೆಸರಿನ ಪ್ರತೀಕಾರಕ್ಕೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ತನ್ನ ಸೋಲನ್ನು ಬಹಿರಂಗವಾಗಿ ತೋರಿಸಲಾಗದೆ, ಅಡ್ಡದಾರಿ ಹಿಡಿಯುತ್ತಿದೆ. ಭಾರತದ ಮೇಲೆ ಕ್ಷಿಪಣಿ ದಳಿಗೆ ವಿಫಲ ಯತ್ನ ನಡೆಸಿದ ಪಾಕ್, ಮತ್ತೊಮ್ಮೆ ಕೈಸುಟ್ಟುಕೊಂಡಿದೆ. ಭಾರತವು ತನ್ನ ಸಮಯ ಭಯೋತ್ಪಾದನೆಯ ವಿರುದ್ಧ ಎಂದು ಸಾರಿ ಸಾರಿ ಹೇಳಿದರೂ, ಪಾಕಿಸ್ತಾನಕ್ಕೆ ಅರ್ಥವಾದಂತಿಲ್ಲ.
(1 / 7)
ಪಾಕಿಸ್ತಾನವು ಮತ್ತೆ ಭಾರತದ ತಂಟೆಗೆ ಬರುತ್ತಿರುವುದು ಭಾರತವನ್ನೂ ಕೆರಳಿಸಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರ ಬೆನ್ನಲ್ಲೇ, ಭದ್ರತಾ ದೃಷ್ಟಿಯಿಂದ ಭಾರತ ಸರ್ಕಾರ ಕೆಲವೊಂದು ಮಹತ್ವದ ನಿರ್ಧಾರಗನ್ನು ಕೈಗೊಂಡಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಸುಳ್ಳು ಸುದ್ದಿಗಳು ಹರಡತೊಡಗಿವೆ.
(2 / 7)
ಮುಂದಿನ 2-3 ದಿನಗಳ ಕಾಲ ಭಾರತದಲ್ಲಿ ಎಟಿಎಂ ಬಂದ್ ಇರಲಿದೆ ಎಂಬ ಸುಳ್ಳು ಸುದ್ದಿ ವಾಟ್ಸಾಪ್ ಮೂಲಕ ಹರಿದಾಡುತ್ತಿದೆ. ಇದನ್ನು ಜನರು ಕೂಡಾ ಸತ್ಯ ಎಂಬುದು ನಂಬಿದ್ದರು. ಆದರೆ, ಅಸಲಿ ವಿಷಯ ಬೇರೆ ಇದೆ.
(3 / 7)
ವಾಟ್ಸಾಪ್ ಮೂಲಕ ಹರಡುತ್ತಿರುವುದು ಸುಳ್ಳು ಸುದ್ದಿ ಎಂಬುದಾಗಿ ಪಿಐಬಿ ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ. ಹೀಗಾಗಿ ದೇಶದಲ್ಲಿ ಎಟಿಎಂಗಳು ಎಂದಿನಂತೆ ತೆರೆದಿರಲಿದೆ. ಇಂತಹ ಯಾವುದೇ ಸುಳ್ಳು ಸುದ್ದಿಗಳನ್ನು ಫಾರ್ವರ್ಡ್ ಮಾಡದಂತೆ ಪಿಐಬಿ ಮನವಿ ಮಾಡಿದೆ.
(4 / 7)
ಅತ್ತ ಯುದ್ಧದ ಭೀತಿಯ ವಾತಾವರಣದಿಂದಾಗಿ ಪೆಟ್ರೋಲ್ ಸಿಗುತ್ತಾ? ಪೆಟ್ರೋಲ್ ಬಂಕ್‌ಗಳು ತೆರೆದಿರುತ್ತಾ ಎಂಬ ಅನುಮಾನ ಹಲವರಿಗಿದೆ. ಇದಕ್ಕೆ ಇಂಡಿಯನ್ ಆಯಿಲ್ ಸ್ಪಷ್ಟನೆ ನೀಡಿದೆ.
(REUTERS)(5 / 7)
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ಅಡುಗೆ ಅನಿಲ ಎಲ್‌ಪಿಜಿ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಜನರು ಭಯಭೀತರಾಗಿ ಈಗಲೇ ಖರೀದಿಸುವ ಅಗತ್ಯವಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
(REUTERS)(6 / 7)
ಇಂಧನ ಸಂಗ್ರಹಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್, "ಭಯದಿಂದ ಇಂಧನ ಖರೀದಿಸುವ ಅಗತ್ಯವಿಲ್ಲ. ಇಂಧನ ಮತ್ತು LPG ನಮ್ಮ ಎಲ್ಲಾ ಮಳಿಗೆಗಳಲ್ಲಿ ಸುಲಭವಾಗಿ ಲಭ್ಯವಿದೆ" ಎಂದು ಹೇಳಿದೆ.
ಇತರ ಗ್ಯಾಲರಿಗಳು