Biparjoy Cyclone: ಗುಜರಾತ್‌ನಲ್ಲಿ ಬಿಪರ್‌ಜಾಯ್ ರುದ್ರನರ್ತನ; ಸೌರಾಷ್ಟ್ರ, ಕಚ್ ಕರಾವಳಿಯಲ್ಲಿ ಆರೆಂಜ್ ಆಲರ್ಟ್; ರೈಲು ಸಂಚಾರ ಸ್ಥಗಿತ
- Biparjoy Cyclone Effect: ಬಿಪರ್‌ಜಾಯ್ ಚಂಡಮಾರುತವು ಗುರುವಾರ ಮಧ್ಯಾಹ್ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ತೀವ್ರ ಸ್ವರೂಪ ಪಡೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಭಾರೀ ಮಳೆ ಹಾಗೂ ಬಿರುಗಾಳಿ ಏಳುವ ಸಾಧ್ಯತೆ ಇದೆ. ಈಗಾಗಲೇ ಕರಾವಳಿ ತೀರದ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
- Biparjoy Cyclone Effect: ಬಿಪರ್‌ಜಾಯ್ ಚಂಡಮಾರುತವು ಗುರುವಾರ ಮಧ್ಯಾಹ್ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ತೀವ್ರ ಸ್ವರೂಪ ಪಡೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಭಾರೀ ಮಳೆ ಹಾಗೂ ಬಿರುಗಾಳಿ ಏಳುವ ಸಾಧ್ಯತೆ ಇದೆ. ಈಗಾಗಲೇ ಕರಾವಳಿ ತೀರದ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 8)
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು (ಜೂನ್ 13) ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಆರೆಂಟ್ ಅಲರ್ಟ್ ಘೋಷಿಸಿದೆ. ಜೂನ್ 15ರ ಸಂಜೆಯ ವೇಳೆಗೆ ಬಿಪರ್‌ಜಾಯ್ ಚಂಡಮಾರುತವು ಜಖೌ ಬಂದರನ್ನು ದಾಟಲಿದೆ ಎಂದು ಐಎಂಡಿ ವರದಿ ತಿಳಿಸಿದೆ. (ANI)
(2 / 8)
ಸೌರಾಷ್ಟ್ರ, ಕಚ್ ಕರಾವಳಿ ತೀರಗಳಾದ ಪೋರಬಂದರ್, ದ್ವಾರಕಾ, ಜಖೌ ಬಂದರು ಪ್ರದೇಶಗಳಲ್ಲಿ ಚಂಡಮಾರುತದ ಪರಿಣಾಮದಿಂದ ಭಾರಿ ಬಿರುಗಾಳಿ ಏಳಲಿದೆ ಎಂದು ಅಂದಾಜಿಸಲಾಗಿದೆ. ಗಾಳಿಯ ವೇಗವೂ 300ಕಿಲೋಮೀಟರ್‌ಗೂ ಹೆಚ್ಚಿರಲಿದೆ ಎಂದು ಹೇಳಲಾಗುತ್ತಿದೆ. (PTI)
(3 / 8)
ಚಂಡಮಾರುತದ ಅಪಾಯದ ಬಗ್ಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ ರಾಜ್ಯಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. (PTI)
(4 / 8)
ಪ್ರಧಾನಿ ಮೋದಿ ಅವರು ಗುಜರಾತ್‌ನಲ್ಲಿ ಬಿಪರ್‌ಜಾಯ್ ಚಂಡಮಾರುತ ಬಗ್ಗೆ ಫೋನ್ ಕರೆ ಮಾಡಿ ವಿಚಾರಿಸಿದ್ದು, ಸ್ಥಿತಿಗತಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ವಿಪತ್ತಿನ ಪರಿಸ್ಥಿತಿಯಲ್ಲಿ ಗುಜರಾತ್‌ಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆʼ ಎಂದು ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ. (PTI)
(5 / 8)
ಪಶ್ಚಿಮ ರೈಲ್ವೇ ಗುಜರಾತ್‌ನ ಕರಾವಳಿ ಪ್ರದೇಶಗಳಿಗೆ ತೆರಳುವ 50ಕ್ಕೂ ಹೆಚ್ಚು ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಮತ್ತು ಮುಂದಿನ ಮೂರು ದಿನಗಳಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸುವ ಸಾಧ್ಯತೆ ಇದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. (PTI)
(6 / 8)
ಗುಜರಾತ್ ಕರಾವಳಿಯ ಗಾಂಧಿಧಾಮ್, ವೆರಾವಲ್, ಓಖಾ, ಪೋರಬಂದರ್‌ಗೆ ಹೋಗುವ 56 ರೈಲುಗಳನ್ನು ಅಹಮದಾಬಾದ್, ರಾಜ್‌ಕೋಟ್ ಮತ್ತು ಸುರೇಂದ್ರನಗರದಲ್ಲಿ ಅಲ್ಪಾವಧಿಗೆ ನಿಲ್ಲಿಸಲಾಗಿದೆ. ಜೂನ್ 13 ರಿಂದ ಜೂನ್ 15 ರ ನಡುವೆ ಸುಮಾರು 95 ರೈಲುಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.(PTI)
(7 / 8)
ಇಂದಿನಿಂದಲೇ (ಜೂನ್ 13) ಗುಜರಾತ್ ಕರಾವಳಿ ಭಾಗದ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯ ಜನರನ್ನು ಸ್ಥಳಾಂತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.(PTI)
ಇತರ ಗ್ಯಾಲರಿಗಳು