ನೆಕ್‌ಲೈನ್ ಮಾತ್ರವಲ್ಲ ರವಿಕೆ ತೋಳುಗಳನ್ನೂ ಸ್ಟೈಲಿಶ್ ಆಗಿರಿಸಿ; ಇಲ್ಲಿವೆ ಇತ್ತೀಚಿನ ಟ್ರೆಂಡಿಂಗ್ ಕುಪ್ಪಸ ವಿನ್ಯಾಸ
ನೆಕ್‌ಲೈನ್ ಹೊರತಾಗಿ, ರವಿಕೆಗೆ ಅಲಂಕಾರಿಕ ನೋಟವನ್ನು ನೀಡಲು ತೋಳುಗಳಿಗೆ ಟ್ರೆಂಡಿಂಗ್ ವಿನ್ಯಾಸವನ್ನು ಹೊಲಿಸಬಹುದು. ಇದು ನಿಮ್ಮನ್ನು ಮತ್ತಷ್ಟು ಆಕರ್ಷಣೀಯವನ್ನಾಗಿ ಮಾಡುತ್ತದೆ. ಇಲ್ಲಿವೆ ಇತ್ತೀಚಿನ ಕುಪ್ಪಸ ತೋಳುಗಳ ವಿನ್ಯಾಸ.
(1 / 10)
ಭಾರತೀಯ ಮಹಿಳೆಯರ ವಾರ್ಡ್ರೋಬ್‌ನಲ್ಲಿ ಸೀರೆಗಳ ಸಂಗ್ರಹ ಹೇರಳವಾಗಿರುತ್ತದೆ. ದಿನನಿತ್ಯದ ಉಡುಗೆಯಿಂದ ಹಿಡಿದು ಪಾರ್ಟಿ ವೇರ್‌ವರೆಗೆ ವಿಭಿನ್ನ ಸುಂದರವಾದ ಸೀರೆಗಳು ವಾರ್ಡ್ರೋಬ್‌ನಲ್ಲಿರುತ್ತವೆ. ಸೀರೆಯ ಬಗ್ಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಅದರ ರವಿಕೆ ವಿನ್ಯಾಸ. ಸೀರೆಯ ರವಿಕೆಯನ್ನು ಸರಿಯಾಗಿ ಹೊಲಿಸದಿದ್ದರೆ, ಅದು ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ರವಿಕೆ ಹೊಲಿಸುವಾಗ ನೆಕ್‍ಲೈನ್, ಹಿಂಬದಿ ವಿನ್ಯಾಸದ ಜೊತೆಗೆ ತೋಳುಗಳ ವಿನ್ಯಾಸ ಕೂಡ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಡಿಸೈನರ್ ತೋಳುಗಳ ಟ್ರೆಂಡಿಂಗ್ ಕೂಡ ಇದೆ. ಹೀಗಾಗಿ ಇಲ್ಲಿ ಕೆಲವು ತೋಳುಗಳ ಮಾದರಿಗಳನ್ನು ತರಲಾಗಿದೆ. ಅದು ನಿಮ್ಮ ಸೀರೆಯನ್ನು ತುಂಬಾ ವಿಶೇಷವಾಗಿ ಕಾಣುವಂತೆ ಮಾಡುತ್ತದೆ.
(Instagram)(2 / 10)
ಪಫ್ ತೋಳುಗಳು ಯಾವಾಗಲೂ ಸುಂದರವಾಗಿ ಕಾಣುತ್ತವೆ. ದೈನಂದಿನ ಉಡುಗೆಯಿಂದ ಹಿಡಿದು ಪಾರ್ಟಿ ವೇರ್ ಸೀರೆಗಳವರೆಗೆ ಎಲ್ಲದಕ್ಕೂ ಈ ತೋಳುಗಳನ್ನು ಆಯ್ಕೆ ಮಾಡಬಹುದು. ಇವು ಬೇಸಿಗೆಯಲ್ಲಿ ಸಾಕಷ್ಟು ಆರಾಮದಾಯಕವಾಗಿರುತ್ತವೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತವೆ.
(Image Credit: blousetrends)(3 / 10)
ರವಿಕೆ ತೋಳುಗಳಿಗೆ ಡಿಸೈನರ್ ಲುಕ್ ನೀಡಲು, ನೀವು ಈ ಲೀಫ್ ಶೇಪ್ ಕಟ್ ವರ್ಕ್ ಅನ್ನು ಸಹ ಮಾಡಬಹುದು. ಇದು ಸಾಕಷ್ಟು ಟ್ರೆಂಡಿ ಮತ್ತು ವಿಶಿಷ್ಟವಾಗಿ ಕಾಣುತ್ತದೆ. ಈ ಮಾದರಿಯು ಬೇಸಿಗೆಯಲ್ಲಿ ದಿನನಿತ್ಯ ಧರಿಸುವ ಕಾಟನ್ ಸೀರೆಗೆ ತುಂಬಾ ಚೆನ್ನಾಗಿ ಕಾಣುತ್ತದೆ.
(Image Credit: rubygupta71)(4 / 10)
ಈ ರೀತಿಯ ಟ್ರೆಂಡಿ ಬಲೂನ್ ತೋಳುಗಳು ರವಿಕೆಗೆ ಮಾಡರ್ನ್ ಮತ್ತು ಆಕರ್ಷಕ ನೋಟವನ್ನು ನೀಡುತ್ತವೆ. ಇವು ದೈನಂದಿನ ಉಡುಗೆಗೆ ಹಾಗೂ ಯಾವುದೇ ವಿಶೇಷ ಸಂದರ್ಭಕ್ಕೂ ಸೂಕ್ತವಾಗಿರುತ್ತವೆ. ಬೇಸಿಗೆಯಲ್ಲಿ ಸೊಗಸಾದ ಮತ್ತು ಆರಾಮದಾಯಕ ನೋಟಕ್ಕಾಗಿ ನೀವು ಈ ತೋಳುಗಳನ್ನು ಪ್ರಯತ್ನಿಸಬಹುದು.
(Image Credit: rubygupta71)(5 / 10)
ಈ ರೀತಿಯ ಫ್ರಿಲ್ ಪ್ಯಾಟರ್ನ್ ತೋಳುಗಳು ಬೇಸಿಗೆಯಲ್ಲಿ ಪರಿಪೂರ್ಣವಾಗಿರುತ್ತವೆ. ಈ ತೋಳುಗಳು ನಿಮ್ಮ ಲುಕ್‌ಗೆ ತುಂಬಾ ಟ್ರೆಂಡಿ ಮತ್ತು ಮಾರ್ಡನ್ ಸ್ಪರ್ಶ ನೀಡುತ್ತದೆ. ಕಚೇರಿಗೆ ಹೋಗುತ್ತಿದ್ದರೆ, ನಿಮ್ಮ ವಾರ್ಡ್ರೋಬ್‌ಗೆ ಆರಾಮದಾಯಕ ಮತ್ತು ಈ ರೀತಿಯ ಸ್ಟೈಲಿಶ್ ಬ್ಲೌಸ್ ಅನ್ನು ಸೇರಿಸಬಹುದು.
(Image Credit: Pinterest)(6 / 10)
ವಿಶಿಷ್ಟ ತೋಳುಗಳ ವಿನ್ಯಾಸವನ್ನು ಹುಡುಕುತ್ತಿದ್ದರೆ ಈ ಅಲಂಕಾರಿಕ ಮಾದರಿಯು ಉತ್ತಮವಾಗಿರುತ್ತದೆ. ಅದರ ಮೇಲೆ ಸಾಕಷ್ಟು ಅಲಂಕಾರಿಕ ಕಟ್ ಕೆಲಸ ಮಾಡಲಾಗಿದೆ ಮತ್ತು ಮುತ್ತನ್ನು ಜೋಡಿಸಲಾಗಿದೆ. ಈ ವಿನ್ಯಾಸವು ಎಲ್ಲಾ ಸಂದರ್ಭಗಳಿಗೂ ಸೂಕ್ತವಾಗಿರುತ್ತದೆ.
(Image Credit: blousetrends)(7 / 10)
ರವಿಕೆಗೆ ಆಧುನಿಕ ಸ್ಪರ್ಶ ನೀಡಲು ನೀವು ಈ ವಿನ್ಯಾಸವನ್ನು ಪ್ರಯತ್ನಿಸಬಹುದು. ಈ ಮಾದರಿಯು ತುಂಬಾ ಸೊಗಸಾಗಿ ಕಾಣುತ್ತದೆ ಮತ್ತು ಯಾವುದೇ ವಿಶೇಷ ಸಂದರ್ಭಕ್ಕೂ ಉತ್ತಮವಾಗಿದೆ. ಫ್ಯಾನ್ಸಿ ಸೀರೆಗೆ ಸುಂದರವಾಗಿ ಕಾಣುತ್ತದೆ.
(Image Credit: Dilambey_Pinterest)(8 / 10)
ಈ ಡೈಮಂಡ್ ಆಕಾರದ ತೋಳುಗಳ ವಿನ್ಯಾಸವು ಬೇಸಿಗೆಗೂ ಸೂಕ್ತವಾಗಿರುತ್ತದೆ. ತೋಳುಗಳಿಗೆ ಹೆಚ್ಚು ಅಲಂಕಾರಿಕ ನೋಟವನ್ನು ನೀಡಲು ನೀವು ಮಣಿ ಮತ್ತು ಲೇಸ್ ಅನ್ನು ಸಹ ಬಳಸಬಹುದು. ಸ್ವಲ್ಪ ಸೃಜನಶೀಲತೆ ಇದ್ದರೆ, ದೈನಂದಿನ ಉಡುಗೆಗೆ ಸೂಕ್ತವಾದ ವಿನ್ಯಾಸ ಸಿದ್ಧವಾಗುತ್ತದೆ.
(Image Credit: rubygupta71)(9 / 10)
ವಿಂಟೇಜ್ ಪಫ್ ತೋಳುಗಳನ್ನು ಇನ್ನಷ್ಟು ಅಲಂಕಾರಿಕ ಮತ್ತು ಆಕರ್ಷಕವಾಗಿ ಮಾಡಬಹುದು. ಈ ರೀತಿಯ ನೆರಿಗೆಯ ಮಾದರಿಯು ತುಂಬಾ ಸುಂದರವಾಗಿ ಕಾಣುತ್ತದೆ. ಸರಳ ಸೀರೆಗಳಿಗೆ ಈ ಮಾದರಿಗಳನ್ನು ಆಯ್ಕೆ ಮಾಡಬಹುದು.
(Image Credit: blousetrends)ಇತರ ಗ್ಯಾಲರಿಗಳು