Boiled Egg Facts: ಬೇಯಿಸಿದ ಮೊಟ್ಟೆಯನ್ನು ಫ್ರಿಜ್‌ನಲ್ಲಿಟ್ಟು ತಿನ್ನಬಹುದೇ? ಇಲ್ಲಿದೆ ತಜ್ಞರ ಸಲಹೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Boiled Egg Facts: ಬೇಯಿಸಿದ ಮೊಟ್ಟೆಯನ್ನು ಫ್ರಿಜ್‌ನಲ್ಲಿಟ್ಟು ತಿನ್ನಬಹುದೇ? ಇಲ್ಲಿದೆ ತಜ್ಞರ ಸಲಹೆ

Boiled Egg Facts: ಬೇಯಿಸಿದ ಮೊಟ್ಟೆಯನ್ನು ಫ್ರಿಜ್‌ನಲ್ಲಿಟ್ಟು ತಿನ್ನಬಹುದೇ? ಇಲ್ಲಿದೆ ತಜ್ಞರ ಸಲಹೆ

Boiled Egg Facts: ಬೇಯಿಸಿದ ಮೊಟ್ಟೆಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದ ವಿಷಯ. ಆದರೆ ಬೇಯಿಸಿದ ಮೊಟ್ಟೆಯಲ್ಲಿ ಪೌಷ್ಟಿಕಾಂಶದ ಮೌಲ್ಯವು ಎಷ್ಟು ಗಂಟೆಗಳವರೆಗೆ ಇರುತ್ತದೆ? ಬೇಯಿಸಿದ ಮೊಟ್ಟೆಯನ್ನು ಫ್ರಿಜ್‌ನಲ್ಲಿಟ್ಟು ತಿನ್ನಬಹುದೇ? ಈ ಕುರಿತು ತಜ್ಞರ ಸಲಹೆ ಇಲ್ಲಿದೆ. 

ಮೊಟ್ಟೆ ತಿನ್ನುವುದು ಹಲವರಿಗೆ ಇಷ್ಟ. ಮೊಟ್ಟೆಯಲ್ಲಿ ಹಲವು ಬಗೆಯ ಆರೋಗ್ಯ ಗುಣಗಳಿವೆ. ಇದು ಪೌಷ್ಟಿಕಾಂಶದ ಆಗರವೂ ಹೌದು. ಆ ಕಾರಣಕ್ಕೆ ಹಲವರು ಪ್ರತಿನಿತ್ಯ ಮೊಟ್ಟೆ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೇಯಿಸಿದ ಮೊಟ್ಟೆ, ಸ್ಕ್ಯಾಂಬಲ್ಡ್‌ ಎಗ್‌ ಇವು ಆರೋಗ್ಯಕ್ಕೆ ಬಹಳ ಉತ್ತಮ. 
icon

(1 / 6)

ಮೊಟ್ಟೆ ತಿನ್ನುವುದು ಹಲವರಿಗೆ ಇಷ್ಟ. ಮೊಟ್ಟೆಯಲ್ಲಿ ಹಲವು ಬಗೆಯ ಆರೋಗ್ಯ ಗುಣಗಳಿವೆ. ಇದು ಪೌಷ್ಟಿಕಾಂಶದ ಆಗರವೂ ಹೌದು. ಆ ಕಾರಣಕ್ಕೆ ಹಲವರು ಪ್ರತಿನಿತ್ಯ ಮೊಟ್ಟೆ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೇಯಿಸಿದ ಮೊಟ್ಟೆ, ಸ್ಕ್ಯಾಂಬಲ್ಡ್‌ ಎಗ್‌ ಇವು ಆರೋಗ್ಯಕ್ಕೆ ಬಹಳ ಉತ್ತಮ. (Freepik)

ಮೊಟ್ಟೆ ನಾಲಿಗೆಗೆ ರುಚಿಕರ ಮಾತ್ರವಲ್ಲ, ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಒಂದು ಸಂಪೂರ್ಣ ಮೊಟ್ಟೆಯಲ್ಲಿ 150 ಕ್ಯಾಲೋರಿಗಳು, 0.72 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 12.56 ಗ್ರಾಂ ಪ್ರೊಟೀನ್, 9.51 ಗ್ರಾಂ ಕೊಬ್ಬು, 198 ಮಿಲಿಗ್ರಾಂ ರಂಜಕ ಮತ್ತು 138 ಮಿಲಿಗ್ರಾಂ ಪೊಟ್ಯಾಸಿಯಮ್ ಇರುತ್ತದೆ.
icon

(2 / 6)

ಮೊಟ್ಟೆ ನಾಲಿಗೆಗೆ ರುಚಿಕರ ಮಾತ್ರವಲ್ಲ, ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಒಂದು ಸಂಪೂರ್ಣ ಮೊಟ್ಟೆಯಲ್ಲಿ 150 ಕ್ಯಾಲೋರಿಗಳು, 0.72 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 12.56 ಗ್ರಾಂ ಪ್ರೊಟೀನ್, 9.51 ಗ್ರಾಂ ಕೊಬ್ಬು, 198 ಮಿಲಿಗ್ರಾಂ ರಂಜಕ ಮತ್ತು 138 ಮಿಲಿಗ್ರಾಂ ಪೊಟ್ಯಾಸಿಯಮ್ ಇರುತ್ತದೆ.(Freepik)

ಮೊಟ್ಟೆಯಲ್ಲಿನ ವಿಟಮಿನ್‌ ಬಿ ಅಂಶ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಆ ಶಕ್ತಿಯಿಂದ ನಾವು ಕೆಲಸ ಮಾಡುತ್ತೇವೆ. ಇದು ದೇಹಕ್ಕೆ ಪುಷ್ಟಿ ನೀಡುತ್ತದೆ. ಅದೆಲ್ಲಾ ಸರಿ ಬೇಯಿಸಿದ ಮೊಟ್ಟೆಗಳನ್ನು ಎಷ್ಟು ದಿನ ಇಡಬಹುದು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ನೋಡಿ. 
icon

(3 / 6)

ಮೊಟ್ಟೆಯಲ್ಲಿನ ವಿಟಮಿನ್‌ ಬಿ ಅಂಶ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಆ ಶಕ್ತಿಯಿಂದ ನಾವು ಕೆಲಸ ಮಾಡುತ್ತೇವೆ. ಇದು ದೇಹಕ್ಕೆ ಪುಷ್ಟಿ ನೀಡುತ್ತದೆ. ಅದೆಲ್ಲಾ ಸರಿ ಬೇಯಿಸಿದ ಮೊಟ್ಟೆಗಳನ್ನು ಎಷ್ಟು ದಿನ ಇಡಬಹುದು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ನೋಡಿ. (Freepik)

ಪೌಷ್ಟಿಕತಜ್ಞರ ಪ್ರಕಾರ, ಬೇಯಿಸಿದ ಮೊಟ್ಟೆಗಳನ್ನು ಫ್ರಿಜ್‌ನಲ್ಲಿ ಇಡಬಹುದು. ಆದರೆ ಸಿಪ್ಪೆ ಸುಲಿದು ಇಡುವುದು ಸರಿಯಲ್ಲ. ಸಿಪ್ಪೆ ತೆಗೆಯದೇ ಫ್ರಿಜ್‌ನಲ್ಲಿ ಇರಿಸಿದ ಬೇಯಿಸಿದ ಮೊಟ್ಟೆಯನ್ನು ಸೇವಿಸಲು ಅಡ್ಡಿಯಿಲ್ಲ.
icon

(4 / 6)

ಪೌಷ್ಟಿಕತಜ್ಞರ ಪ್ರಕಾರ, ಬೇಯಿಸಿದ ಮೊಟ್ಟೆಗಳನ್ನು ಫ್ರಿಜ್‌ನಲ್ಲಿ ಇಡಬಹುದು. ಆದರೆ ಸಿಪ್ಪೆ ಸುಲಿದು ಇಡುವುದು ಸರಿಯಲ್ಲ. ಸಿಪ್ಪೆ ತೆಗೆಯದೇ ಫ್ರಿಜ್‌ನಲ್ಲಿ ಇರಿಸಿದ ಬೇಯಿಸಿದ ಮೊಟ್ಟೆಯನ್ನು ಸೇವಿಸಲು ಅಡ್ಡಿಯಿಲ್ಲ.(Freepik)

ಫ್ರಿಜ್‌ನಲ್ಲಿ ಇಡುವ ಮುನ್ನ ಪ್ಲಾಸ್ಟಿಕ್‌ ಕವರ್‌ ಬಳಸಲು ಮರೆಯದಿರಿ. ಇದರಿಂದ ಮೊಟ್ಟೆಗಳು ಒಂದು ವಾರಗಳ ಕಾಲ ತಾಜಾವಾಗಿ, ಕಡೆದಂತೆ ಇರುತ್ತವೆ. 
icon

(5 / 6)

ಫ್ರಿಜ್‌ನಲ್ಲಿ ಇಡುವ ಮುನ್ನ ಪ್ಲಾಸ್ಟಿಕ್‌ ಕವರ್‌ ಬಳಸಲು ಮರೆಯದಿರಿ. ಇದರಿಂದ ಮೊಟ್ಟೆಗಳು ಒಂದು ವಾರಗಳ ಕಾಲ ತಾಜಾವಾಗಿ, ಕಡೆದಂತೆ ಇರುತ್ತವೆ. (Freepik)

ಕವರ್‌ನಿಂದ ಹೊರಗೆ ಇರಿಸಿದ ಮೊಟ್ಟೆಗಳು ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಅಲ್ಲದೆ ಬೇಯಿಸಿದ ಮೊಟ್ಟೆಗಳನ್ನು ಸಿಪ್ಪೆ ತೆಗೆದು ಇರಿಸುವುದು ಕೂಡ ಒಳ್ಳೆಯದಲ್ಲ. ಸಿಪ್ಪೆ ಸುಲಿದ ಮೊಟ್ಟೆಗಳನ್ನು ಇರಿಸಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. 
icon

(6 / 6)

ಕವರ್‌ನಿಂದ ಹೊರಗೆ ಇರಿಸಿದ ಮೊಟ್ಟೆಗಳು ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಅಲ್ಲದೆ ಬೇಯಿಸಿದ ಮೊಟ್ಟೆಗಳನ್ನು ಸಿಪ್ಪೆ ತೆಗೆದು ಇರಿಸುವುದು ಕೂಡ ಒಳ್ಳೆಯದಲ್ಲ. ಸಿಪ್ಪೆ ಸುಲಿದ ಮೊಟ್ಟೆಗಳನ್ನು ಇರಿಸಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. (Freepik)


ಇತರ ಗ್ಯಾಲರಿಗಳು