Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್ ಚೂರಿ ಇರಿತದಿಂದ ಗಂಭೀರ ಗಾಯ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೊಳಗಾದ ನವಾಬ, ಚಿತ್ರನೋಟ
Saif Ali Khan Home Photos: ಮುಂಬಯಿ ಬಾಂದ್ರಾದಲ್ಲಿರುವ ಮನೆಗೆ ನುಗ್ಗಿದ ಕಳ್ಳನೊಬ್ಬ ತಪ್ಪಿಸಿಕೊಳ್ಳುವ ವೇಳೆ ಚೂರಿ ಇರಿದ ಕಾರಣ ನಟ ಸೈಫ್ ಅಲಿ ಖಾನ್ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಗುರುವಾರ (ಜನವರಿ 16) ನಸುಕಿನ ವೇಳೆ ಈ ಘಟನೆ ನಡೆದಿದ್ದು, ಕೂಡಲೇ ಸೈಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಇಲ್ಲಿದೆ ಚಿತ್ರನೋಟ.
(1 / 10)
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಮುಂಬಯಿ ಬಾಂದ್ರಾದ ಮನೆಯಲ್ಲಿ ಇಂದು (ಜನವರಿ 16) ನಸುಕಿನ ವೇಳೆ ಕಳ್ಳನೊಬ್ಬ ಮನೆಗೆ ನುಗ್ಗಿದ್ದು, ಆಗ ನಡೆದ ಸಂಘರ್ಷದಲ್ಲಿ ಸೈಫ್ ಅಲಿ ಖಾನ್ ಚೂರಿ ಇರಿತಕ್ಕೆ ಒಳಗಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
(2 / 10)
ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಸೈಫ್ ಅಲಿ ಖಾನ್ ಅವರನ್ನು ನಸುಕಿನ 3.30ರ ಸುಮಾರಿಗೆ ದಾಖಲಿಸಲಾಗಿದೆ. ಅವರ ಶರೀರದಲ್ಲಿ ಆರು ಕಡೆ ಗಾಯಗಳಾಗಿದ್ದು, ಎರಡು ಗಂಭೀರ ಗಾಯಗಳಿವೆ ಎಂದು ಹೇಳಿರುವ ಡಾಕ್ಟರ್, ಶಸ್ತ್ರ ಚಿಕಿತ್ಸೆ ನಡೆಸಿದ್ದಾಗಿ ತಿಳಿಸಿದ್ದಾರೆ. ಸೈಫ್ ಅಲಿ ಖಾನ್ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
(PTI)(3 / 10)
ಮುಂಬಯಿ ಬಾಂದ್ರಾ ಪಶ್ಚಿಮದಲ್ಲಿರುವ ಸದ್ಗುರು ಶರಣ್ ಅಪಾರ್ಟ್‌ಮೆಂಟ್ ಬಿಲ್ಡಿಂಗ್‌ನಲ್ಲಿರುವ ಸೈಫ್ ಅಲಿ ಖಾನ್ ಮನೆಗೆ ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದರು.
(AFP)(4 / 10)
ಸೈಫ್ ಅಲಿ ಖಾನ್ ಚೂರಿ ಇರಿತಕ್ಕೆ ಒಳಗಾದ ಮನೆ ಸುತ್ತಮುತ್ತ ಪೊಲೀಸರು ವಿಚಾರಣೆ ನಡೆಸಿದ್ದು, ಸ್ಥಳದಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನೂ ಪರಿಶೀಲಿಸಿದ್ದಾರೆ.
(PTI)(5 / 10)
ಮುಂಬಯಿ ಕ್ರೈಂ ಬ್ರ್ಯಾಂಚ್ ಅಧಿಕಾರಿ ದಯಾ ನಾಯಕ್ ಕೂಡ ಸೈಫ್ ನಿವಾಸಕ್ಕೆ ಆಗಮಿಸಿದ್ದು, ತನಿಖೆಯನ್ನು ಮುಂದುವರಿಸಿದ್ಧಾರೆ.
(PTI)(7 / 10)
ನಟ ಸೈಫ್ ಅಲಿ ಖಾನ್ ಚಿಕಿತ್ಸೆ ಪಡೆಯುತ್ತಿರುವ ಲೀಲಾವತಿ ಹಾಸ್ಪಿಟಲ್‌ನ ತುರ್ತು ಚಿಕಿತ್ಸಾ ವಿಭಾಗದಲ್ಲಿ ಪೊಲೀಸರು ಬಿಗಿ ಪಹರೆ ನಡೆಸಿದ್ದಾರೆ.
(PTI)(8 / 10)
ಸೈಫ್ ಅಲಿ ಖಾನ್ ಮಕ್ಕಳಾದ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅವರು ಲೀಲಾವತಿ ಆಸ್ಪತ್ರೆಗೆ ಆಗಮಿಸಿ, ತಂದೆಯ ಆರೋಗ್ಯ ವಿಚಾರಿಸಿದರು.
(PTI)ಇತರ ಗ್ಯಾಲರಿಗಳು