ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲ ಸಲ್ಮಾನ್ ಖಾನ್ ಅಂಗರಕ್ಷಕ; ಕೋಟಿ ಬೆಲೆಯ ರೇಂಜ್ ರೇವರ್ ಕಾರು ಖರೀದಿಸಿದ ಶೇರಾ
ಸಿನಿಮಾ ಸ್ಟಾರ್‌ಗಳು ಬೌನ್ಸರ್‌ಗಳಿಲ್ಲದೆ ಹೊರಗೆ ಎಲ್ಲೂ ಹೊಗುವುದಿಲ್ಲ. ಪ್ರತಿ ಹೆಜ್ಜೆಯಲ್ಲೂ ತಮ್ಮನ್ನು ಕಾಪಾಡುವ ಬಾಡಿಗಾರ್ಡ್‌ಗಳಿಗೆ ನಟ/ನಟಿಯರು ಕೂಡಾ ಲಕ್ಷಾಂತರ ರೂ ಸಂಬಳ ನೀಡಿ ಜೊತೆಗೆ ಇರಿಸಿಕೊಳ್ಳುತ್ತಾರೆ.
(1 / 7)
ಬಾಲಿವುಡ್ ನಟ, ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್‌ಗೆ ಕೂಡಾ ಬಾಡಿಗಾರ್ಡ್‌ಗಳಿದ್ದಾರೆ. ಅವರಲ್ಲಿ ಶೇರಾ ಪ್ರಮುಖವಾದವರು. ಸದಾ ಸಲ್ಲು ಭಾಯ್ ಜೊತೆಗೆ ಇದ್ದು ಅವರಿಗೆ ರಕ್ಷಣೆಯಾಗಿದ್ದಾರೆ. (instagram)
(2 / 7)
ಶೇರಾ, ಹೆಸರಿಗೆ ತಕ್ಕಂತೆ ಶೇರ್‌ನಂತೆ ಇದ್ದಾರೆ. ಅಜಾನುಬಾಹು ಶೇರಾಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್‌ಗಳಿದ್ದಾರೆ. ಆತ ಯಾವ ಸಿನಿಮಾ ನಟನಿಗೇನೂ ಕಡಿಮೆ ಇಲ್ಲ. (instagram)
(3 / 7)
ಇತ್ತೀಚೆಗೆ ಶೇರಾ, 1 ಕೋಟಿಗೂ ಹೆಚ್ಚು ಬೆಲೆಯ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (instagram)
(4 / 7)
ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಕಂಗ್ರಾಜುಲೇಷನ್ಸ್ ಹೇಳುತ್ತಿದ್ದಾರೆ. ಬದುಕಿದರೆ ಶೇರಾನಂತೆ ಬದುಕಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (instagram)
(5 / 7)
ಶೇರಾ ಅವರ ನಿಜವಾದ ಹೆಸರು ಗುರ್ಮೀತ್ ಸಿಂಗ್ ಜಾಲಿ. 1995 ರಲ್ಲಿ ಸಲ್ಮಾನ್ ಅವರ ಅಂಗರಕ್ಷಕರಾಗಿ ನೇಮಕಗೊಂಡರು. ಶೇರಾ, ಟೈಗರ್ ಸೆಕ್ಯುರಿಟಿ ಎಂಬ ಹೆಸರಿನ ತಮ್ಮದೇ ಆದ ಭದ್ರತಾ ಕಂಪನಿಯನ್ನು ಹೊಂದಿದ್ದಾರೆ.(instagram)
(6 / 7)
ಶೇರಾ, ಸಲ್ಮಾನ್ ಖಾನ್ ಅಂಗರಕ್ಷಕನಾಗಿದ್ದರೂ, ಸಲ್ಲು ಭಾಯ್, ಈತನನ್ನು ಸಹೋದರನಂತೆ ಕಾಣುತ್ತಾರೆ. ಇದೇ ಕಾರಣಕ್ಕೆ ನಾನು ಬದುಕಿರುವವರೆಗೂ ನನ್ನ ಸಹೋದರನೊಂದಿಗೆ ಇರುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಬಾಲಿವುಡ್ ಪಾರ್ಟಿಯಾಗಲಿ ಅಥವಾ ಕಾರ್ಯಕ್ರಮವಾಗಲಿ ಸಲ್ಮಾನ್ ಖಾನ್ ಜೊತೆಗೆ ಶೇರಾ ಇದ್ದೇ ಇರುತ್ತಾರೆ. (instagram)
ಇತರ ಗ್ಯಾಲರಿಗಳು