ಕೆಟ್ಟ ಆಂಗಲ್‌ನಲ್ಲಿ ವಿಡಿಯೋ ಮಾಡಬೇಡಿ; ಹಿಂಬದಿ, ಎದೆ ಭಾಗ ಜೂಮ್ ಮಾಡುವವರ ವಿರುದ್ಧ ಜಾನ್ವಿ ಕಪೂರ್ ಕೆಂಡ PHOTOS
ಬಾಲಿವುಡ್ ನಟಿ ಜಾನ್ವಿ ಕಪೂರ್ ಇದೀಗ ಪಾಪರಾಜಿಗಳ (ಫೋಟೋಗ್ರಾಫರ್) ವಿರುದ್ಧ ರೋಷಾವೇಷ ಹೊರಹಾಕಿದ್ದಾರೆ. ಕೆಟ್ಟದಾಗಿ ಫೋಟೋ ಕ್ಲಿಕ್ಕಿಸುತ್ತ, ವಿಡಿಯೋ ಮಾಡುವವರಿಗೆ ಮಾತಲ್ಲೇ ಛಾಟಿ ಬೀಸಿದ್ದಾರೆ.
(1 / 7)
ಬಾಲಿವುಡ್ ಸಿನಿಮಾ ಸೆಲೆಬ್ರಿಟಿಗಳಿದ್ದಲ್ಲಿ ಅವರ ಸುತ್ತ ಪಾಪರಾಜಿಗಳ ದಂಡೇ ಜಮಾಯಿಸಿರುತ್ತದೆ. ಅವರ ಫೋಟೋ ಕ್ಲಿಕ್ಕಿಸುವುದೇ ಅವರ ಬಿಜಿನೆಸ್.
(Instagram/@stylebyami)(2 / 7)
ಸೆಲೆಬ್ರಿಟಿಗಳ ಫೋಟೋಗಳನ್ನು ಕೆಟ್ಟದಾಗಿ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ ಬಾಲಿವುಡ್‌ನ ಪಾಪರಾಜಿಗಳು.
(Instagram/@stylebyami)(3 / 7)
ಈ ವಿಚಾರ ಸಿನಿಮಾ ಸೆಲೆಬ್ರಿಟಿಗಳ ಗಮನಕ್ಕೂ ಬಂದಿದೆ. ಈಗಾಗಲೇ ಮೃಣಾಲ್ ಠಾಕೂರ್, ಜಾನ್ವಿ ಕಪೂರ್ ಸೇರಿ ಸಾಕಷ್ಟು ಸಿನಿಮಾ ಮಂದಿ, ಈ ಪಾಪರಾಜಿಗಳಿಗೆ ಖಡಕ್ ವಾರ್ನಿಂಗ್ ಸಹ ನೀಡಿದ್ದಾರೆ.
(Instagram/@stylebyami)(4 / 7)
ಇದೀಗ ಜಾನ್ವಿ ಕಪೂರ್ ಮತ್ತೊಮ್ಮೆ ಪಾಪರಾಜಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೋದಲ್ಲಿ ಬಂದಲ್ಲಿ ಮನಬಂದಂತೆ ನಟಿಯರ ಎದೆ ಭಾಗ, ಹಿಂಭಾಗವನ್ನು ಕೆಟ್ಟ ಆಂಗಲ್‌ಗಳಲ್ಲಿ ಫೋಟೋ, ವಿಡಿಯೋ ಮಾಡುತ್ತಿದ್ದಾರೆ.
(Instagram/@stylebyami)(5 / 7)
ಈ ಬಗ್ಗೆ ಪಾಪರಾಜಿಗಳ ಎದುರೇ ಮಾತನಾಡಿರುವ ಜಾನ್ವಿ ಕಪೂರ್, ತಪ್ಪು ತಪ್ಪಾದ ಆಂಗಲ್‌ಗಳಲ್ಲಿ ವಿಡಿಯೋ ಶೂಟ್ ಮಾಡಬೇಡಿ ಎಂದಿದ್ದಾರೆ.
(Instagram/@stylebyami)(6 / 7)
ನಟಿಯ ಈ ಹೇಳಿಕೆಗೆ ಪಾಪರಾಜಿಗಳು ಹಾಗೇನು ಮಾಡಲ್ಲ ಎಂದರೆ, ನೆಟ್ಟಿಗರು ಮಾತ್ರ ಸುಮ್ಮನಾಗಿಲ್ಲ. ಮೊದಲು ನೀವು ಸಭ್ಯ ಉಡುಗೆಗಳನ್ನು ಧರಿಸಿ ಎಂದು ಕಿವಿ ಹಿಂಡಿದ್ದಾರೆ.
(Instagram/@stylebyami)ಇತರ ಗ್ಯಾಲರಿಗಳು