ರವೀನಾ ಟಂಡನ್ ಮಗಳು ರಾಶಾಳಿಗೆ ಮೊದಲ ಟ್ಯಾಟೂ ಸಂಭ್ರಮ; ಚಿಟ್ಟೆಯ ನಡುವೆ ತ್ರಿಶೂಲ, ಹಚ್ಚೆ ಎಲ್ಲಿದೆ ನೋಡಿ
ನಟಿ ರಾಶಾ ಥಡಾನಿ ಇದೇ ಮೊದಲ ಬಾರಿಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಮಗಳಿಗೆ ಹಚ್ಚೆ ಹಾಕುವಾಗ ಹತ್ತಿರದಲ್ಲಿದ್ದುಕೊಂಡು ರವೀನಾ ಟಂಡನ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇನ್ನೂ ಸ್ವಲ್ಪ ಚಿಕ್ಕದಾಗಿ ಹೀಗೆ ಡಿಸೈನ್ ಮಾಡಿ ಎಂದು ಟ್ಯಾಟೂ ಹಾಕುವವನಿಗೆ ಸೂಚಿಸಿದ್ದಾರೆ.
(1 / 8)
ರಾಶಾ ಥಡಾನಿ ಈ ವರ್ಷ ಸಿನಿರಂಗಕ್ಕೆ ಅಜಾದ್ ಸಿನಿಮಾದ ಮೂಲಕ ಎಂಟ್ರಿ ನೀಡಿದ್ದಾರೆ. ಇತ್ತೀಚೆಗೆ ತನ್ನ ಸುಂದರವಾದ ದೇಹಕ್ಕೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮಗಳಿಗೆ ಮೊದಲ ಟ್ಯಾಟೂ ಹಾಕಿಸುವಾಗ ಹತ್ತಿರದಲ್ಲಿಯೇ ಇದ್ದ ಅಮ್ಮ ಜತನದಿಂದ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
(2 / 8)
ಈ ಸ್ಟಾರ್ ಕಿಡ್‌ಗೆ ನಡುವೆ ತ್ರಿಶೂಲದ ಚಿತ್ರವಿರುವ ಚಿಟ್ಟೆಯ ವಿನ್ಯಾಸದ ಟ್ಯಾಟೂ ಹಾಕಲಾಗಿದೆ. ಈಕೆಯ ಬೆನ್ನಿನ ಮೇಲ್ಬಾಗದಲ್ಲಿ, ಕತ್ತಿನ ಕೆಳಭಾಗದಲ್ಲಿ ಈ ಟ್ಯಾಟೂ ಹಾಕಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಟ್ಯಾಟೂ ಸಂಭ್ರಮದ ಫೋಟೋಗಳು ವಿಡಿಯೋಗಳು ವೈರಲ್ ಆಗುತ್ತಿವೆ.
(3 / 8)
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ರಾಶಾ ಥಡಾನಿ , ನಾನು ನನ್ನ ತಾಯಿಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನನ್ನ ಅಮ್ಮ ಹಲವು ಹಚ್ಚೆ ಹೊಂದಿದ್ದಾರೆ. ನಾನು ಯಾವಾಗಲೂ ಒಂದು ಹಚ್ಚೆ ಹೊಂದಲು ಬಯಸುವೆ ಎಂದು ಅವರು ಹೇಳಿದ್ದಾರೆ.
(4 / 8)
ಅಂದಹಾಗೆ ರವೀನಾ ಟಂಡನ್ ತನ್ನ ದೇಹದಲ್ಲಿ ಮೂರು ಟ್ಯಾಟೂಗಳನ್ನು ಹೊಂದಿದ್ದಾರೆ. ಒಂದು ಹೃದಯದ ಹತ್ತಿರ, ಇನ್ನೊಂದು ಬೆನ್ನಿನಲ್ಲಿ ಮಕ್ಕಳ ಹೆಸರಿನ ಹಚ್ಚೆ ಹಾಕಿಕೊಂಡಿದ್ದಾರೆ. ಮತ್ತೊಂದು ಪಂಜದ ಗುರುತಿನ ಹಚ್ಚೆ ಹಾಕಿಕೊಂಡಿದ್ದಾರೆ.
(5 / 8)
ನಿನ್ನೆ ರಾಶಾಳಿಗೆ ಸಂಬಂಧಪಟ್ಟಂತೆ ಇನ್ನೊಂದು ಘಟನೆ ನಡೆದಿತ್ತು. ಸಂಜಯ್ ದತ್ ಜತೆ ಪಾಪರಾಜಿಗಳು ಮಾತನಾಡುತ್ತಿದ್ದರು. ಆಗ ಪಾಪರಾಜಿಗಳು ನಾವು ಹೊಸ ಹುಡುಗಿ ರಾಶಾಳಿಗೆ ಕಾಯುತ್ತಿದ್ದೇವೆ ಎಂದು ಹೇಳಿದರು.
(6 / 8)
ಆಗ ಸಂಜಯ್ ದತ್‌ಗೆ ರಾಶಾ ಯಾರು ಎಂದು ನೆನಪಾಗಲಿಲ್ಲ. "ಯಾರು ರಾಶಾ" ಎಂದು ಸಂಜಯ್ ದತ್ ಪ್ರಶ್ನಿಸಿದರು. ಅದಕ್ಕೆ ಪಾಪರಾಜಿಗಳು "ರವೀನಾ ಟಂಡನ್ ಮಗಳು" ಎಂದು ನೆನಪಿಸಿದ್ದಾರೆ.
(7 / 8)
ಇದನ್ನು ಕೇಳಿದಾಗ ಸಂಜಯ್ ದತ್‌ಗೆ ರಾಶಾ ಯಾರೆಂದು ತಿಳಿಯಿತು. "ಸಂಜಯ್ ದತ್ ಮತ್ತು ರವೀನಾ ಟಂಡನ್ ಈ ಹಿಂದೆ ಅನೇಕ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಅವರು ಆತಿಶ್: ಫೀಲ್ ದಿ ಫೈರ್ (1994), ಕ್ಷತ್ರಿಯ (1993), ಜಂಗ್ (2000), ಮತ್ತು ಎಲ್‌ಒಸಿ ಕಾರ್ಗಿಲ್ (2003) ನಂತಹ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಇತರ ಗ್ಯಾಲರಿಗಳು