Tripti Dimri: ತೃಪ್ತಿ ದಿಮ್ರಿ ಆಫರ್ ಶ್ರೀಲೀಲಾ ಪಾಲಾಯ್ತು; ಅನಿಮಲ್ ನಟಿಗೆ ಬೋಲ್ಡ್ ಇಮೇಜ್ ಅಡ್ಡಿ
Tripti Dimri: ನಟಿ ತೃಪ್ತಿ ದಿಮ್ರಿ ಭಾರತದ ಖ್ಯಾತ ನಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಅನಿಮಲ್ ಸಿನಿಮಾ ಬ್ಲಾಕ್‌ಬಸ್ಟರ್ ಆದ ಬಳಿಕ ಈಕೆಗೆ ಹಲವು ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳು ದೊರಕಿದವು. ಆದರೆ, ತೃಪ್ತಿ ದಿಮ್ರಿ ನಟಿಸಿದ ಎಲ್ಲಾ ಚಿತ್ರಗಳು ಸೋತಿರುವುದರಿಂದ ಗ್ಲಾಮರಸ್ ಸುಂದರಿ ನಿರಾಶೆಗೊಂಡಿದ್ದಾರೆ.
(1 / 7)
ತೃಪ್ತಿ ದಿಮ್ರಿ ಅನಿಮಲ್ ಸಿನಿಮಾದಲ್ಲಿ ನಟಿಸಿ ದೇಶ-ವಿದೇಶದ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಕಳೆದ ವರ್ಷ ಈಕೆ ನಟಿಸಿದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆಗಳನ್ನು ಮಾಡಿಲ್ಲ. 2025ರಲ್ಲಿ ಇಲ್ಲಿಯವರೆಗೆ ತೃಪ್ತಿ ದಿಮ್ರಿ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ.
(2 / 7)
ಆರಂಭದಲ್ಲಿ ಆಶಿಕಿ 3 ಸಿನಿಮಾದಲ್ಲಿ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ವದಂತಿಗಳಿದ್ದವು. ಆದರೆ, ತೃಪ್ತಿ ದಿಮ್ರಿ ಅವರ ಬೋಲ್ಡ್ ಇಮೇಜ್‌ನಿಂದಾಗಿ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ ಎಂದು ಬಾಲಿವುಡ್ ವಲಯದಲ್ಲಿ ಸುದ್ದಿಯಾಗಿದೆ.
(3 / 7)
ಆಶಿಕಿ 3 ಸಿನಿಮಾದಲ್ಲಿ ತೃಪ್ತಿ ದಿಮ್ರಿ ಬದಲಿಗೆ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ಈ ಮೂಲಕ ತೃಪ್ತಿ ದಿಮ್ರಿ ಪಡೆಯಬೇಕಿದ್ದ ಆಫರ್ ಶ್ರೀಲೀಲಾ ಪಾಲಾಗಿದೆ ಎನ್ನಲಾಗುತ್ತಿದೆ.
(4 / 7)
ಬಾಲಿವುಡ್ ನಟಿ ತೃಪ್ತಿ ದಿಮ್ರಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ ಎಂದು ವದಂತಿ ಇತ್ತು. ಆದರೆ, ಅವು ವದಂತಿಯಾಗಿಯೇ ಉಳಿಯಿತು.
(5 / 7)
ಈಗ ತೃಪ್ತಿ ದಿಮ್ರಿ ಅವರು ಧಡಕ್ 2 ಸಿನಿಮಾ ಮತ್ತು ಬಾಲಿವುಡ್‌ನ ಇನ್ನೊಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
(6 / 7)
ಬಾಲಿವುಡ್ ನಟಿ ತೃಪ್ತಿ ದಿಮ್ರಿಗೆ, ರಣಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ 'ಅನಿಮಲ್' ಚಿತ್ರದಲ್ಲಿ ಜೋಯಾ (ಭಾಭಿ-2) ಪಾತ್ರದಲ್ಲಿ ನಟಿಸುವ ಅವಕಾಶ ದೊರಕಿತ್ತು. ಇದರು ಇವರ ಜೀವನದ ದೊಡ್ಡ ತಿರುವು ಎನ್ನಲಾಗಿದೆ. ಇದಾದ ಬಳಿಕ ನಟಿಗೆ ಸಾಲುಸಾಲು ಅವಕಾಶಗಳು ದೊರಕಿವೆ.
ಇತರ ಗ್ಯಾಲರಿಗಳು