Shahrukh Khan Birthday: ಬಾಲಿವುಡ್ ಕಿಂಗ್ ಖಾನ್ ಶಾರುಕ್‌ಗೆ 59ನೇ ಹುಟ್ಟು ಹಬ್ಬದ ಸಂಭ್ರಮ
- ಬಾಲಿವುಡ್ ಕಿಂಗ್ ಖಾನ್ ಶಾರುಕ್ ತಮ್ಮ 59ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರುತ್ತಿದ್ದಾರೆ.
- ಬಾಲಿವುಡ್ ಕಿಂಗ್ ಖಾನ್ ಶಾರುಕ್ ತಮ್ಮ 59ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರುತ್ತಿದ್ದಾರೆ.
(1 / 9)
ಇಂದು ಬಾಲಿವುಡ್‌ನ ಕಿಂಗ್ ಖಾನ್ ಶಾರುಕ್ ಜನ್ಮದಿನ. ಅವರು ತಮ್ಮ 59ನೇ ವರ್ಷಕ್ಕೆ ಕಾಲಿಟ್ಟಿದ್ಧಾರೆ. ಶಾರುಖ್ ಇಂದು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲಿದ್ದಾರೆ.
(2 / 9)
ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಅಭಿಮಾನಿಗಳು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಈ ವರ್ಷ ಶಾರುಖ್ ಬಂಗಲೆ ಮನ್ನತ್ ಬಳಿ ಜನ ಸೇರುತ್ತಾರೆ.
(3 / 9)
ನವೆಂಬರ್ 2, 1965 ರಂದು ನವದೆಹಲಿಯಲ್ಲಿ ಇವರು ಜನಿಸಿದರು. ನಟನಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಅಭಿನಯದ ಮೂಲಕ ಹಲವು ಜನರ ಮನಗೆದ್ದರು. ಇಂದಿಗೂ ಅವರ ನಟನೆಯ ಚಿತ್ರಗಳನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ.
(4 / 9)
ಶಾರುಖ್ ತಮ್ಮ ಆರಂಭಿಕ ಶಿಕ್ಷಣವನ್ನು ಸೇಂಟ್ ಕೊಲಂಬಿಯಾ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ನಂತರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
(5 / 9)
"ಫೌಜಿ" ಮತ್ತು "ವಾಗ್ಲೆ ಕಿ ದುನಿಯಾ" ದಂತಹ ದೂರದರ್ಶನದ ಕಾರ್ಯಕ್ರಮಗಳಲ್ಲಿ ಇವರು ಮೊದಲು ಕಾಣಿಸಿಕೊಂಡಿದ್ದರು. ನಂತರ ಸಿನಿಮಾಗಳಲ್ಲಿ ಅಭಿನಯಿಸಿದರು.
(6 / 9)
1992 ರಲ್ಲಿ, ಶಾರುಖ್ "ದೀವಾನಾ" ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರ ಅವರಿಗೆ ತುಂಬಾ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತು.
(7 / 9)
ಶಾರುಖ್ ಖಾನ್ ನಟನೆ ಕೇವಲ ಚಿತ್ರಗಳಿಗೆ ಸೀಮಿತವಾಗಿರಲಿಲ್ಲ. ಅವರು 14 ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದಲ್ಲದೇ ಅವರಿಗೆ ಭಾರತ ಸರ್ಕಾರದಿಂದ 'ಪದ್ಮಶ್ರೀ' ಪ್ರಶಸ್ತಿಯೂ ಸಂದಿದೆ.
(8 / 9)
ಸುಮಾರು 200 ಕೋಟಿ ಬೆಲೆಬಾಳುವ ಮನ್ನತ್ ಎಂಬ ಬಂಗಲೆಯನ್ನು ಅವರು ಹೊಂದಿದ್ದಾರೆ. ಅಲ್ಲೇ ಹುಟ್ಟು ಹಬ್ಬದ ಆಚರಣೆಯನ್ನು ಮಾಡಿಕೊಳ್ಳಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ.
ಇತರ ಗ್ಯಾಲರಿಗಳು