ನಿಮ್ಮ ತುಟಿಗಳನ್ನು ಜೇನುನೊಣಗಳು ಕಚ್ಚಿವೆಯೇ? ಟೀಕೆಗೆ ಬೇಸತ್ತ ಆಯೇಷಾ ಟಾಕಿಯಾ ಹೀಗಾ ಮಾಡೋದು..
ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದ ಆಯೇಷಾ ಟಾಕಿಯಾ, ಸದ್ಯ ನಟನೆಯಿಂದ ದೂರವೇ ಉಳಿದಿದ್ದಾರೆ. ಜಾಲತಾಣದಲ್ಲಿ ಸಕ್ರಿಯರಾಗಿರುವ ಈ ನಟಿ, ಇತ್ತೀಚಿನ ದಿನಗಳಲ್ಲಿ ಲುಕ್ ವಿಚಾರದಲ್ಲಿ ಟ್ರೋಲ್ ಆಗಿದ್ದೇ ಹೆಚ್ಚು. ಇದೀಗ ಮತ್ತೆ ಬಾಡಿ ಶೇಮಿಂಗ್‌ಗೆ ತುತ್ತಾಗಿದ್ದಾರೆ.
(1 / 8)
ಆಯೇಷಾ ಟಾಕಿಯಾ ನೆನಪಿದೆಯೇ? ಬಾಲಿವುಡ್‌ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಜತೆಗೆ ಸ್ಟಾರ್ ನಟರ ಜತೆಗೆ ಮಿಂಚಿದ ನಟಿ ಈ ಆಯೇಷಾ.
(2 / 8)
ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಮದುವೆಯಾಗಿ ನಟನೆಯಿಂದ ದೂರವೇ ಉಳಿದರು ಆಯೇಷಾ. ನಟನೆ ಬಿಟ್ಟರೂ ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ, ಇದೀಗ ಸೀರೆ ಧರಿಸಿ ಫೋಟೋ ಶೇರ್ ಮಾಡುತ್ತಿದ್ದಂತೆ, ಟ್ರೋಲ್‌ಗೆ ಒಳಗಾಗಿದ್ದಾರೆ.
(3 / 8)
ಕಾಂಜೀವರಂ ಸೀರೆಯುಟ್ಟು ರೀಲ್ಸ್ ಶೇರ್ ಮಾಡಿದ್ದರು ಆಯೇಷಾ. ಹೀಗೆ ರೀಲ್ಸ್ ಶೇರ್ ಮಾಡುತ್ತಿದ್ದಂತೆ, ನಟಿಯನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಲಾಗಿದೆ.
(4 / 8)
ಆಯೇಷಾ ಅವರ ಹೊಸ ಲುಕ್ ನೋಡಿದ ನೆಟ್ಟಿಗರು , "ಜೇನುನೊಣ ನಿಮ್ಮ ತುಟಿಗಳನ್ನು ಕಚ್ಚಿದೆಯೇ?" ಎಂದು ಕಾಮೆಂಟ್ ಮಾಡಿದ್ದಾರೆ. ಏಕೆಂದರೆ ಶೇರ್ ಮಾಡಿದ್ದ ವಿಡಿಯೋದಲ್ಲಿ ನಟಿಯ ತುಟಿಗಳು ಊದಿಕೊಂಡಂತೆ ಕಂಡಿವೆ.
(5 / 8)
ಲುಕ್ ವಿಚಾರದಲ್ಲಿ ಟ್ರೋಲ್ ಆಗುತ್ತಿದ್ದಂತೆ, ನನ್ನ ನೋಟವನ್ನು ಚರ್ಚಿಸುವುದನ್ನು ಬಿಟ್ಟು ಬೇರೆ ಕೆಲಸ ನಿಮಗಿಲ್ಲವೇ? ಎಂದು ಆಯೇಷಾ ಟಾಕಿಯಾ ಸಹ ಪ್ರತಿಕ್ರಿಯಿಸಿದ್ದಾರೆ.
(6 / 8)
ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂದೂ ಕೇಳಿದ್ದಾರೆ. ನೆಟ್ಟಿಗರ ಬಗೆಬಗೆ ಕಾಮೆಂಟ್‌ಗೆ ಬೇಸತ್ತು ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನೇ ನಿಷ್ಕ್ರೀಯಗೊಳಿಸಿದ್ದಾರೆ.
(7 / 8)
ಈ ಹಿಂದೆಯೂ ಆಯೇಷಾ ಟಾಕಿಯಾ ಬಾಡಿ ಶೇಮಿಂಗ್ ಅನುಭವಿಸಿದ್ದರು. ಇದೀಗ ಮತ್ತೆ ಫೋಟೋ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.
ಇತರ ಗ್ಯಾಲರಿಗಳು