Disha Patani: ಬಾಲಿವುಡ್ ಬ್ಯೂಟಿ ದಿಶಾ ಪಟಾಣಿ ನಟಿಸುತ್ತಿರುವ ಈ ಎರಡು ಸಿನಿಮಾಗಳ ಬಜೆಟ್ ಬರೋಬ್ಬರಿ 900 ಕೋಟಿ!
Disha Patani: ಬಾಲಿವುಡ್ ನಟಿ ದಿಶಾ ಪಟಾನಿ ಸದ್ಯ ತಮ್ಮ ಸಂಪೂರ್ಣ ಗಮನವನ್ನು ಸೌತ ಸಿನಿಮಾರಂಗದ ಮೇಲೆ ನೆಟ್ಟಿದ್ದಾರೆ. ಪ್ರಭಾಸ್ ಜತೆಗೆ ಕಲ್ಕಿ 2898 ಎಡಿ ಮತ್ತು ಸೂರ್ಯ ಜತೆಗೆ ಕಂಗುವಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾಗಳು ಬಹುತಾರಾಗಣ ಮತ್ತು ಬಜೆಟ್ ವಿಚಾರದಲ್ಲಿ ದೊಡ್ಡ ಮಟ್ಟದ ಹೈಪ್ ಸಹ ಗಿಟ್ಟಿಸಿಕೊಂಡಿವೆ.
(1 / 5)
ಕಲ್ಕಿ 2898 AD ಚಿತ್ರದಲ್ಲಿ ದಿಶಾ ಪಟಾಣಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಪ್ರಭಾಸ್ ಮತ್ತು ದಿಶಾ ಪಟಾಣಿ ಇಟಲಿಯಲ್ಲಿ ರೊಮ್ಯಾಂಟಿಕ್ ಹಾಡಿನ ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ.
(2 / 5)
ಇನ್ನು ಸುದೀರ್ಘ 9 ವರ್ಷಗಳ ಬಳಿಕ ಕಲ್ಕಿ ಸಿನಿಮಾ ಮೂಲಕ ಟಾಲಿವುಡ್ ಅಂಗಳಕ್ಕೆ ಆಗಮಿಸುತ್ತಿದ್ದಾರೆ ದಿಶಾ ಪಟಾಣಿ. ಈ ಸಿನಿಮಾ ಬರೋಬ್ಬರಿ 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ನಾಗಾಶ್ವಿನ್ ಈ ಚಿತ್ರದ ನಿರ್ದೇಶಕರು.
(3 / 5)
ದಿಶಾ ಪಟಾಣಿ 2015ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ವರುಣ್ ತೇಜ್ ನಾಯಕನಾಗಿ ನಟಿಸಿದ ದಿ ಲೋಫರ್ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಚಿತ್ರದ ಸೋತ ಹಿನ್ನೆಲೆಯಲ್ಲಿ ಬೇರೆ ಟಾಲಿವುಡ್ ಅಕಾಶಗಳು ಅವರಿಗೆ ಸಿಕ್ಕಿರಲಿಲ್ಲ.
(4 / 5)
ಇತ್ತ ಸೂರ್ಯ ನಟನೆಯ ಕಂಗುವಾ ಚಿತ್ರದ ಮೂಲಕ ಕಾಲಿವುಡ್‌ಗೂ ಪದಾರ್ಪಣೆ ಮಾಡುತ್ತಿದ್ದಾರೆ ದಿಶಾ ಪಟಾನಿ. 300 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಇತರ ಗ್ಯಾಲರಿಗಳು