Kriti Sanon: ಬೆಲ್ ಬಾಟಮ್ ಜಂಪ್ ಸೂಟ್ ಧರಿಸಿ ಕ್ಯೂಟಾಗಿ ಕಂಡ್ರು ಕೃತಿ ಸನನ್, ಇಲ್ಲಿವೆ ವೈರಲ್ ಫೋಟೋಗಳು
Kriti Sanon Latest Photos: ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಕೃತಿ ಸನನ್‌ಗೆ ಫ್ಯಾಷನ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಇದೀಗ ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬೆಲ್ ಬಾಟಮ್ ಜಂಪ್ ಸೂಟ್ ಧರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
(1 / 7)
ಕೃತಿ ಸನನ್ ಅವರು ಎರಡು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದಾರೆ. ಒಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿದಾರೆ. ಫೋರ್ಬ್ಸ್ ಸೆಲೆಬ್ರಿಟಿಗಳ ಅಗ್ರ 100ರ ಪಟ್ಟಿಯಲ್ಲಿ 2019ರಲ್ಲಿ ಸ್ಥಾನ ಪಡೆದಿದ್ದರು. ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ರೆಟ್ರೊ ಲುಕ್‌ನ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.(Instagram/@kritisanon)
(2 / 7)
ಜೈಪಿ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೆಷನ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಇವರು ಆರಂಭದಲ್ಲಿ ಫ್ಯಾಷನ್ ಮಾಡೆಲ್ ಆಗಿ ಕೆಲಸ ಮಾಡಿದರು. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಂನಲ್ಲಿ ಫ್ಯಾಷನ್ ಸ್ಟೇಟ್‌ಮೆಂಟ್ ಸಾರುವಂತಹ ಸುಂದರ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.(Instagram/@kritisanon)
(3 / 7)
2014ರನಲ್ಲಿ ನೆನೊಕಡೈನೆ ಮತ್ತು ಹೀರೋಪತಿ ಸಿನಿಮಾದ ಮೂಲಕ ಇವರು ಸಿನಿಮಾ ಜರ್ನಿ ಆರಂಭಿಸಿದರು. ಬರೆಲಿ ಕೀ ಬರ್ಫಿ, ಲುಕಾ ಚುಪಿ ಮುಂತಾದ ಸಿನಿಮಾಗಳು ಇವರ ಜನಪ್ರಿಯತೆ ಹೆಚ್ಚಿಸಿದವು.(Instagram/@kritisanon)
(4 / 7)
ಡಿಲ್‌ವಾಲೆ ಮತ್ತು ಹೌಸ್‌ಫುಲ್ 4 ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದವು. ಮಿಮಿ ಎಂಬ ಕಾಮಿಡಿ ಸಿನಿಮಾದಲ್ಲಿ ಬಾಡಿಗೆ ತಾಯಿಯಾಗಿ ಇವರು ನಟಿಸಿದ್ದರು. ಈ ನಟನೆಗೆ ಇವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಬಂದಿತ್ತು. (Instagram/@kritisanon)
(5 / 7)
ಇದಾದ ಬಳಿಕ ಬಿಗ್‌ಬಜೆಟ್‌ನ ಆದಿಪುರುಷ್ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಹಾರರ್ ಸಿನಿಮಾ ಬೇಡಿಯಾದಲ್ಲೂ ನಟಿಸಿದ್ದರು. (Instagram/@kritisanon)
(6 / 7)
ಕೃತಿ ಸನನ್ ಅವರು ನಟನೆ ಮಾತ್ರವಲ್ಲದೆ ಉದ್ಯಮಿಯೂ ಹೌದು. ಇವರು ಬಟ್ಟೆ ಮತ್ತು ಫಿಟ್ನೆಸ್ ಕಂಪನಿ ಹೊಂದಿದ್ದಾರೆ. ಇದರೊಂದಿಗೆ ಸ್ಕಿನ್ ಕೇರ್ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. ಹಲವು ಕಂಪನಿಗಳಿಗೆ ಇವರು ಬ್ರಾಂಡ್ ಅಂಬಾಸಡರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. (Instagram/@kritisanon)
ಇತರ ಗ್ಯಾಲರಿಗಳು