ನೀಲಿ ಉಡುಗೆಯಲ್ಲಿ ಸೌಂದರ್ಯ ದೇವತೆಯಾದ ಕೃತಿ ಸನನ್; ಈಕೆಯ ಟಾಪ್ ದರ 60 ಸಾವಿರ, ಸ್ಕರ್ಟ್ ದರ ಕಮ್ಮಿ ಏನಿಲ್ಲ
ಹಿಂದಿ ಮತ್ತು ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ಕೃತಿ ಸನನ್ ಇದೀಗ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಡೆನಿಮ್ ಕಾರ್ಸೆಟ್ ಟಾಪ್ ಮತ್ತು ಮ್ಯಾಚಿಂಗ್ ಮ್ಯಾಕ್ಸಿ ಸ್ಕರ್ಟ್‌ನಲ್ಲಿ ತುಂಬಾ ಅಂದವಾಗಿ ಕಾಣಿಸುತ್ತಿದ್ದಾರೆ.
(1 / 6)
ಕೃತಿ ಸನನ್ ಅವರು ಸದ್ಯ "ತೇರಿ ಬಾತನ್ ಮೇ ಐಸಾ ಉಲ್ಜಾ" ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದೀಗ ಅವರು ಹಂಚಿಕೊಂಡ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಾರಿ ಅದ್ಭುತವಾದ ಡೆನಿಮ್ ಮ್ಯಾಕ್ಸಿ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫ್ಯಾಷನ್ ಪ್ರಿಯರಿಗೆ ಸ್ಪೂರ್ತಿಯಾಗುವಂತಹ ಈ ಫೋಟೋಗಳು ಇವರ ಅಭಿಮಾನಿಗಳಿಗೆ ಭರ್ಜರಿ ಖುಷಿ ನೀಡುತ್ತಿದೆ. (Instagram/@kritisanon)
(2 / 6)
ಕೃತಿ ಸನನ್ ಭಾನುವಾರ ತನ್ನ ಫ್ಯಾನ್ಸ್‌ಗೆ ಸರ್‌ಪ್ರೈಸ್ ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಡೆನಿಮ್ ಆನ್ ಡೆನಿಮ್ ಎಂಬ ಕ್ಯಾಪ್ಷನ್‌ನಡಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.(Instagram/@kritisanon)
(3 / 6)
ಅಂದಹಾಗೆ ಈ ಉಡುಗೆ ದರ ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚಿದೆ. ಇವರು ಧರಿಸುರವ ಟಾಫ್ ದರಕ್ಕೆ ಸುಮಾರು 60 ಸಾವಿರ ರೂಪಾಯಿ ಇದೆ. ಸ್ಕರ್ಟ್ ದರ 48 ಸಾವಿರ ರೂ. ಇದೆ. (Instagram/@kritisanon)
(4 / 6)
ಕೃತಿ ಸನನ್ ಅವರು ಮಹೇಶ್ ಬಾಬು ನಟನೆಯ ಒನ್ ನೆನೊಕ್ಕಡಿನ್ ಸಿನಿಮಾದ ಮೂಲಕ ಟಾಲಿವುಡ್ ಪ್ರವೇಶಿಸಿದರು. ಬಳಿಕ ನಾಗ ಚೈತನ್ಯರ ದೋಚೆ ಸಿನಿಮಾದಲ್ಲಿ ನಾಯಕಿಯಾಗಿದ್ದರು. (Instagram/@kritisanon)
(5 / 6)
ಬಳಿಕ ತೆಲುಗಿನಿಂದ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್‌ನಲ್ಲಿ ಇವರ ಜನಪ್ರಿಯತೆ ಹೆಚ್ಚಿತ್ತು. ಇತ್ತೀಚೆಗೆ ಆದಿಪುರುಷ ಚಿತ್ರದಲ್ಲಿ ಪ್ರಬಾಸ್ ಜತೆ ಸೀತೆಯಾಗಿ ಕಾಣಿಸಿಕೊಂಡಿದ್ದರು. ಸದ್ಯ ತೇರಿ ಬಾತನ್ ಮೇ ಐಸಾ ಉಲ್ಜಾ ಸಿನೆಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. (Instagram/@kritisanon)
ಇತರ ಗ್ಯಾಲರಿಗಳು