ಸದ್ಗುರು ಆಶ್ರಮದಲ್ಲಿ ಸ್ಟಾರ್ ನಟಿ ಸಮಂತಾ ಧ್ಯಾನ, ನೂತನ ಸಂಸದೆ ಕಂಗನಾ ರಣಾವತ್ ಭೇಟಿ; ಫೋಟೊಸ್
ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ ಸದ್ಗುರು ಅವರ ಆಶ್ರಮಕ್ಕೆ ಭೇಟಿ ನೀಡಿದ್ದು, ಅಲ್ಲಿ ಧ್ಯಾನ ಮಾಡಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರ ಆಶೀರ್ವಾದ ಪಡೆದಿದ್ದಾರೆ. ಸಂಸತ್‌ಗೆ ಆಯ್ಕೆಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅದರ ಫೋಟೊಸ್ ಇಲ್ಲಿದೆ.
(1 / 7)
ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸಿನಿಮಾದಿಂದ ವಿರಾಮ ತೆಗೆದುಕೊಂಡು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
(2 / 7)
ಸದ್ಗುರುಗಳ ಆಶ್ರಮದಲ್ಲಿ ಸಮಂತಾ ಧ್ಯಾನ ಮಾಡಿದ್ದಾರೆ. ಕಪ್ಪು ಸಲ್ವಾರ್ ಉಡುಪನ್ನು ಧರಿಸಿ ಕುತ್ತಿಗೆಗೆ ಹಾರ ಹಾಕಿ ಧ್ಯಾನ ಮಾಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
(3 / 7)
ಸಮಂತಾ ಖುಷಿ ಖುಷಿಯಾಗಿ ಆಶ್ರಮದಲ್ಲಿದ್ದ ಹಸುಗಳಿಗೆ ಆಹಾರವನ್ನು ನೀಡಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
(4 / 7)
ಕೊಯಮತ್ತೂರಿನ ಸುದ್ಗುರು ಅವರ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಹಿತವಚನ ಕೇಳುತ್ತಿರುವ ಫೋಟೋವನ್ನು ಸಮಂತಾ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
(5 / 7)
ಇತ್ತೀಚೆಗೆ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಬಿಜೆಪಿ ಸಂಸದೆ ಕಂ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಸದ್ಗುರು ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
(6 / 7)
ಸಂಸದರಾಗಿ ಆಯ್ಕೆಯಾದ ಒಂದೇ ವಾರದಲ್ಲಿ ಕಂಗನಾ ರಣಾವತ್ ಸದ್ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಸದ್ಗುರು ಜಗ್ಗಿ ವಾಸುದೇವ್ ಅವರ ಆಶೀರ್ವಾದ ಪಡೆದಿದ್ದಾರೆ.
ಇತರ ಗ್ಯಾಲರಿಗಳು